ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ಸೆನ್ಸೆಕ್ಸ್‌, ನಿಫ್ಟಿ ಫ್ಲಾಟ್‌; ಜೂನ್‌ನಲ್ಲಿ ಡಿವಿಡೆಂಡ್‌ ನೀಡುವ ಸ್ಟಾಕ್ಸ್‌ ಯಾವುದು?

Share Market: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಇಂದು ಬೆಳಗ್ಗೆ ನಷ್ಟಕ್ಕೀಡಾಯಿತು. ಸೆನ್ಸೆಕ್ಸ್‌ 425 ಅಂಕ ಕಳೆದುಕೊಂಡು 81,047ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 123 ಅಂಕ ನಷ್ಟದಲ್ಲಿ 24,627ಕ್ಕೆ ವಹಿವಾಟು ನಡೆಸುತ್ತಿತ್ತು. ಅಂತಿಮವಾಗಿ ಸೆನ್ಸೆಕ್ಸ್‌ 78 ಅಂಕ ಕಳೆದುಕೊಂಡು 81,373ಕ್ಕೆ ಸ್ಥಿರವಾಯಿತು. ನಿಫ್ಟಿ 34 ಅಂಕ ಕಳೆದುಕೊಂಡು 24,716ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಜೂನ್‌ನಲ್ಲಿ ಡಿವಿಡೆಂಡ್‌ ನೀಡುವ ಸ್ಟಾಕ್ಸ್‌ ಯಾವುದು?

ಸಾಂದರ್ಭಿಕ ಚಿತ್ರ.

Profile Siddalinga Swamy Jun 2, 2025 9:18 PM

ಕೇಶವ ಪ್ರಸಾದ್‌ ಬಿ.

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ (Stock Market) ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಇವತ್ತು ಬೆಳಗ್ಗೆ ನಷ್ಟಕ್ಕೀಡಾಯಿತು. ಸೆನ್ಸೆಕ್ಸ್‌ 425 ಅಂಕ ಕಳೆದುಕೊಂಡು 81,047ಕ್ಕೆ ವಹಿವಾಟು ನಡೆಸುತ್ತಿತ್ತು. ನಿಫ್ಟಿ 123 ಅಂಕ ನಷ್ಟದಲ್ಲಿ 24,627ಕ್ಕೆ ವಹಿವಾಟು ನಡೆಸುತ್ತಿತ್ತು. ಅಂತಿಮವಾಗಿ ಸೆನ್ಸೆಕ್ಸ್‌ 78 ಅಂಕ ಕಳೆದುಕೊಂಡು 81,373ಕ್ಕೆ ಸ್ಥಿರವಾಯಿತು. ನಿಫ್ಟಿ 34 ಅಂಕ ಕಳೆದುಕೊಂಡು 24,716ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಹಿಂಡಾಲ್ಕೊ, ಟಾಟಾ ಸ್ಟೀಲ್‌ ಷೇರು ದರದಲ್ಲಿ ತಲಾ 2% ಇಳಿಕೆ ದಾಖಲಾಯಿತು. ಇವತ್ತಿನ ಷೇರು ಸೂಚ್ಯಂಕ ಕುಸಿತಕ್ಕೆ ಕಾರಣ ಏನೆಂಬುದರ ವಿವರ ಇಲ್ಲಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಜೂನ್‌ 4ರಿಂದ ಉಕ್ಕು ಮತ್ತು ಅಲ್ಯುಮಿನಿಯಂ ಆಮದು ಮೇಲೆ 50 ಪರ್ಸೆಂಟ್‌ ಟಾರಿಫ್‌ ವಿಧಿಸುವುದಾಗಿ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಲೋಹ ಅಥವಾ ಮೆಟಲ್‌ ಷೇರುಗಳ ದರ ಇಳಿಕೆಯಾಯಿತು. JSW Steel, Hindalco, Tata Steel ಷೇರು ದರಗಳು ಇಳಿಯಿತು.



ಸೋಮವಾರ ಐಟಿ ವಲಯದ ಷೇರುಗಳ ದರ ಇಳಿಕೆ ಆಯಿತು. ಭಾರತದ ಐಟಿ ಕಂಪನಿಗಳಿಗೆ ಅಮೆರಿಕದ ಮಾರುಕಟ್ಟೆಯೇ ಪ್ರಮುಖ ಆದಾಯ ಮೂಲವಾಗಿದೆ. ಜಾಗತಿಕ ವ್ಯಾಪಾರದ ಅನಿಶ್ಚಿತತೆಯ ಪರಿಣಾಮ ಐಟಿ ಷೇರುಗಳ ದರ 4% ತನಕ ಇಳಿಕೆಯಾಯಿತು.

ರಷ್ಯಾ ವಿರುದ್ಧದ ದಾಳಿಯನ್ನು ಉಕ್ರೇನ್‌ ತೀವ್ರಗೊಳಿಸಿದ್ದು, ಜಾಗತಿಕ ಸ್ಟಾಕ್‌ ಮಾರ್ಕೆಟ್‌ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ. ಉಕ್ರೇನ್‌ ವಿರುದ್ಧ ರಷ್ಯಾ ತೀವ್ರ ಪ್ರತಿದಾಳಿ ನಡೆಸುವ ನಿರೀಕ್ಷೆ ಉಂಟಾಗಿದೆ. ರಷ್ಯಾದ ಐದು ವೈಮಾನಿಕ ನೆಲೆಗಳ ಮೇಲೆ ಉಕ್ರೇನ್‌ ಡ್ರೋನ್‌ ದಾಳಿ ನಡೆಸಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಅಥವಾ ಫಾರಿನ್‌ ಇನ್‌ಸ್ಟಿಟ್ಯೂಷನಲ್‌ ಇನ್ವೆಸ್ಟರ್ಸ್‌ ಕಳೆದ ಶುಕ್ರವಾರ 6,449 ಕೋಟಿ ರುಪಾಯಿ ಮೌಲ್ಯದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರು.

ಪ್ರಮುಖ ಸಂಸ್ಥೆಗಳಿಂದ ಷೇರುದಾರರಿಗೆ ಡಿವಿಡೆಂಡ್‌

ಈ ವಾರ L&T, ಟಾಟಾ ಮೋಟಾರ್ಸ್‌, TCS, ಐನೋಕ್ಸ್‌ ಇಂಡಿಯಾ, ಬ್ಯಾಂಕ್‌ ಆಫ್‌ ಬರೋಡಾ ಸೇರಿದಂತೆ ಪ್ರಮುಖ ಸಂಸ್ಥೆಗಳಿಂದ ಷೇರುದಾರರಿಗೆ ಡಿವಿಡೆಂಡ್‌ ವಿತರಿಸಲಿದ್ದು, ಈ ಕುರಿತ ವಿವರ ಇಲ್ಲಿದೆ.

ಲಾರ್ಸನ್‌ ಆಂಡ್‌ ಟೂಬ್ರೊ ಲಿಮಿಟೆಡ್‌

Larsen & Toubro Ltd : 34/- ಅಂತಿಮ ಡಿವಿಡೆಂಡ್‌

ದಿನಾಂಕ: ಜೂನ್‌ 3, 2025

ನುವಾಮಾ ವೆಲ್ತ್‌ ಮ್ಯಾನೇಜ್‌ಮೆಂಟ್‌

Nuvama Wealth Management Ltd: 69/-

Interim dividend, ಮಧ್ಯಂತರ ಡಿವಿಡೆಂಡ್.‌

ದಿನಾಂಕ: ಜೂನ್‌ 3, 2025

ಸನ್‌ ಶೀಲ್ಡ್‌ ಕೆಮಿಕಲ್ಸ್‌ ಲಿಮಿಟೆಡ್‌

Sunshield Chemicals Ltd: 2.5/-

ಫೈನಲ್‌ ಡಿವಿಡೆಂಡ್‌

ದಿನಾಂಕ: ಜೂನ್‌ 3, 2025

ಐನಾಕ್ಸ್‌ ಇಂಡಿಯಾ ಲಿಮಿಟೆಡ್‌

INOX India Ltd: 2/-

ಫೈನಲ್‌ ಡಿವಿಡೆಂಡ್‌

ದಿನಾಂಕ: 4 ಜೂನ್‌, 2025

‌ಶೇಷ ಸಾಯಿ ಪೇಪರ್‌ ಆಂಡ್‌ ಬೋರ್ಡ್ಸ್‌ ಲಿಮಿಟೆಡ್‌

Seshasayee Paper and Boards Ltd: 2.5/-

ಫೈನಲ್‌ ಡಿವಿಡೆಂಡ್‌

ದಿನಾಂಕ: 4 ಜೂನ್‌ 2025

ಟಾಟಾ ಮೋಟಾರ್ಸ್‌

Tata Motors Ltd: 6/-

ಫೈನಲ್‌ ಡಿವಿಡೆಂಡ್‌

ದಿನಾಂಕ: 4 ಜೂನ್‌ 2025

ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ ಲಿಮಿಟೆಡ್‌

Tata Consultancy Services Ltd: 30/-

ಫೈನಲ್‌ ಡಿವಿಡೆಂಡ್‌

ದಿನಾಂಕ: 4 ಜೂನ್‌ 2025

ಜಿಂದಾಲ್‌ ಸಾ ಲಿಮಿಟೆಡ್‌

Jindal Saw Ltd: 2/-

ಪೈನಲ್‌ ಡಿವಿಡೆಂಡ್‌

ದಿನಾಂಕ: 5 ಜೂನ್‌ 2025

ರಾಲಿಸ್‌ ಇಂಡಿಯಾ ಲಿಮಿಟೆಡ್‌

Rallis India Ltd: 2.5/-

ದಿನಾಂಕ: 5 ಜೂನ್‌ 2025

ಬ್ಯಾಂಕ್‌ ಆಫ್‌ ಬರೋಡಾ

Bank of Baroda: 8.3/-

ಫೈನಲ್‌ ಡಿವಿಡೆಂಡ್‌

ದಿನಾಂಕ: 6 ಜೂನ್‌ 2025

ಕಂಟೈನರ್ ಕಾರ್ಪೊರೇಷನ್‌ ಆಫ್‌ ಇಂಡಿಯಾ‌

Container Corporation of India Ltd: 2/-

ದಿನಾಂಕ: 6 ಜೂನ್‌ 2025

ಎಚ್‌ಡಿಎಫ್‌ಸಿ ಅಸೆಟ್‌ ಮ್ಯಾನೇಜ್‌ಮೆಂಟ್‌ ಕಂಪನಿ ಲಿಮಿಟೆಡ್‌

HDFC Asset Management Company Ltd- 90/-

ಫೈನಲ್‌ ಡಿವಿಡೆಂಡ್‌

ದಿನಾಂಕ: 6 ಜೂನ್‌ 2025

ಇಂಡಿಯಾ ಮಾರ್ಟ್‌ ಇಂಟರ್‌ಮೆಶ್‌ ಲಿಮಿಟೆಡ್‌

IndiaMART InterMESH Ltd: 30/-

ದಿನಾಂಕ: 6 ಜೂನ್‌ 2025

ಜೆಎಸ್‌ಡಬ್ಲ್ಯು ಎನರ್ಜಿ: ಪ್ರತಿ ಷೇರಿಗೆ 2/- ಫೈನಲ್‌ ಡಿವಿಡೆಂಡ್‌ ಅನ್ನು ಜೂನ್‌ 6ಕ್ಕೆ ಘೋಷಿಸಲಿದೆ. ಇದೇ ದಿನ ಡಾ. ಲಾಲ್‌ ಪಥ್‌ ಲ್ಯಾಬ್‌ ಪ್ರತಿ ಷೇರಿಗೆ 6/- ಡಿವಿಡೆಂಡ್‌ ಡಿಕ್ಲೇರ್‌ ಮಾಡಲಿದೆ. ಮೈಥಾನ್‌ ಅಲಾಯ್ಸ್‌ ಲಿಮಿಟೆಡ್‌ ಕೂಡ ಇದೇ ದಿನ ಪ್ರತಿ ಷೇರಿಗೆ 7/- ಡಿವಿಡೆಂಡ್‌ ಡಿಕ್ಲೇರ್‌ ಮಾಡಲಿದೆ. ಜೂನ್‌ 6ಕ್ಕೆ TALL Enterprises ltd ಪ್ರತಿ ಷೇರಿಗೆ 30/- ಡಿವಿಡೆಂಡ್‌ ಘೋಷಿಸಲಿದೆ. ಟೆಕ್ನೊಕ್ರಾಫ್ಟ್‌ ಇಂಡಸ್ಟ್ರೀಸ್‌ ಕೂಡ ಇದೇ ದಿನ ಪ್ರತಿ ಷೇರಿಗೆ 20/- ಡಿವಿಡೆಂಡ್‌ ಘೋಷಿಸಲಿದೆ.

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಇದೇ ಶುಕ್ರವಾರ, ಜೂನ್‌ 6ಕ್ಕೆ ತನ್ನ ರೆಪೊ ದರದಲ್ಲಿ0.25% ಇಳಿಕೆ ಮಾಡುವ ನಿರೀಕ್ಷೆ ಇದೆ. ಇದರಿಂದ ರೆಪೊದರ ಅಧರಿತ ಗೃಹ ಸಾಲ, ಬಿಸಿನೆಸ್‌ ಸಾಲದ ಬಡ್ಡಿ ದರ ಇಳಿಯಲಿದೆ. ಸದ್ಯ ರೆಪೊ ರೇಟ್‌ 6% ಮಟ್ಟದಲ್ಲಿದೆ.

ನೀವು ಲಾಂಗ್‌ ಟರ್ಮ್‌ಗೆ ಹೂಡಿಕೆ ಮಾಡುತ್ತಿದ್ದರೆ ಬಜಾಜ್‌ ಆಟೊ, ಸೇಲ್‌ ಸೇರಿದಂತೆ 5 ಸ್ಟಾಕ್ಸ್‌ಗಳನ್ನು ತಜ್ಞರು ಖರೀದಿಸಲು ಶಿಫಾರಸು ಮಾಡಿದ್ದಾರೆ. ಈ ಷೇರುಗಳು 1 ವರ್ಷದಲ್ಲಿ 10-20% ರಿಟರ್ನ್‌ ಕೊಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಇಕನಾಮಿಕ್‌ ಟೈಮ್ಸ್‌ ಈ ಕುರಿತ ವರದಿ ಪ್ರಕಟಿಸಿದ್ದು, ವಿವರ ಇಲ್ಲಿದೆ.

ಬಜಾಜ್‌ ಆಟೊ

Bajaj Auto

ಷೇರಿನ ಈಗಿನ ದರ: 8446/-

ಟಾರ್ಗೆಟ್‌ ದರ: 10,700/-

upside ಎಷ್ಟು: 20%

ನುವಾಮಾ ಬ್ರೋಕರೇಜ್‌

ಸುಮಿಟೊಮೊ ಕೆಮಿಕಲ್‌ ಇಂಡಿಯಾ

Sumitomo Chemical India Ltd

ಷೇರಿನ ಈಗಿನ ದರ: 509/-

ಟಾರ್ಗೆಟ್‌ ದರ: 620/-

ಏರಿಕೆ ಎಷ್ಟು: 23%

ಆನಂದ್‌ ರಾತಿ ಸಲಹೆ

ಎಚ್‌ಪಿಎಲ್‌ ಎಲೆಕ್ಟ್ರಿಕ್‌ & ಪವರ್‌

HPL Electric & Power Ltd

ಷೇರಿನ ಈಗಿನ ದರ : 576/-

ಟಾರ್ಗೆಟ್‌ ದರ: 710/-

ಏರಿಕೆ ಎಷ್ಟು: 22%

ಆನಂದ್‌ ರಾತಿ ಸಲಹೆ

ಕಮಿನ್ಸ್‌ ಇಂಡಿಯಾ

Cummins India

ಷೇರಿನ ಈಗಿನ ದರ: 3,317/-

ಟಾರ್ಗೆಟ್‌ ದರ : 3,500/-

ಏರಿಕೆ ಸಾಧ್ಯತೆ ಎಷ್ಟು: 10%

ನುವಾಮಾ ಸಲಹೆ

ಸನ್‌ಸೇರಾ ಎಂಜಿನಿಯರಿಂಗ್‌

Sansera Engineering

ಷೇರಿನ ಈಗಿನ ದರ: 1,373/-

ಟಾರ್ಗೆಟ್‌ ದರ : 1,509/-

ಏರಿಕೆ ಸಾಧ್ಯತೆ ಎಷ್ಟು: 11%

ನುವಾಮಾ ಸಲಹೆ

ಜಪಾನ್‌ ಮೂಲದ ಬ್ರೋಕರೇಜ್‌ ದಿಗ್ಗಜ ನೊಮುರಾ, ನಿಫ್ಟಿಯ ಮುಂದಿನ ಟಾರ್ಗೆಟ್‌ ಅನ್ನು 26,140ಕ್ಕೆ ಏರಿಕೆ ಮಾಡಿದೆ. ಅಂದರೆ 1,170 ಅಂಕ ಏರಿಸಿದೆ. ದೇಶೀಯ ಆರ್ಥಿಕತೆ ಚೇತರಿಸುತ್ತಿರುವುದು, ಕಳೆದ ಜನವರಿ-ಮಾರ್ಚ್‌ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಕಂಪನಿಗಳ ಉತ್ತಮ ಗಳಿಕೆಯನ್ನು ಪ್ರಸ್ತಾಪಿಸಿದೆ.

ನೊಮುರಾ 17 ಷೇರುಗಳನ್ನು ಖರೀದಿಸಬಹುದು ಎಂದು ಲಿಸ್ಟ್‌ ಮಾಡಿದೆ. ಇದು ಕುತೂಹಲಕರವಾಗಿದೆ. ಈ ಕುರಿತ ವಿವರ ಇಲ್ಲಿದೆ.

ಲಾರ್ಜ್‌ ಕ್ಯಾಪ್‌ ಷೇರುಗಳಾದ

ಐಸಿಐಸಿಐ ಬ್ಯಾಂಕ್‌

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ

ಎಕ್ಸಿಸ್‌ ಬ್ಯಾಂಕ್‌

ಬಜಾಜ್ ಫೈನಾನ್ಸ್‌

ಗೋದ್ರೇಜ್‌ ಕನ್ ಸ್ಯೂಮರ್‌

ಮಹೀಂದ್ರಾ & ಮಹೀಂದ್ರಾ

ಸಿಜಿ ಪವರ್‌

ರಿಲಯನ್ಸ್‌ ಇಂಡಸ್ಟ್ರೀಸ್‌

ಟಾಟಾ ಪವರ್‌

ಷೇರುಗಳನ್ನು ಖರೀದಿಸಬಹುದು ಎಂದು ನೊಮುರಾ ತಿಳಿಸಿದೆ.

ಸ್ಮಾಲ್‌ ಮತ್ತು ಮಿಡ್‌ ಕ್ಯಾಪ್‌ ಷೇರುಗಳ ಪೈಕಿ

ಮ್ಯಾರಿಕೊ

ಡಿಕ್ಸಾನ್‌

ಯುನೊ ಮಿಂಡಾ

ಗ್ಲಾಂಡ್‌ ಫಾರ್ಮಾ

ಲುಪಿನ್‌

ಮೆಡ್‌ ಪ್ಲಸ್‌

ಒಬೆರಾಯ್‌ ರಿಯಾಲ್ಟಿ

ಡಾ. ಲಾಲ್‌ ಪ್ಯಾಥಲಾಬ್ಸ್‌
ಷೇರುಗಳನ್ನು ಖರೀದಿಸಬಹುದು ಎಂದು ನೊಮುರಾ ತಿಳಿಸಿದೆ.

ಈ ಸುದ್ದಿಯನ್ನೂ ಓದಿ | HPCL Recruitment 2025: ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿಮಿಟೆಡ್‌ನಲ್ಲಿದೆ 411 ಹುದ್ದೆ; ದ್ವಿತೀಯ ಪಿಯು ಪಾಸಾದವರು ಅಪ್ಲೈ ಮಾಡಿ