Viral News: ಡೆಲ್ಲಿಯಲ್ಲಿ ಶುರುವಾಗಿದೆ ಡಿಜಿಟಲ್ ಮೋಮೊ ಸರ್ವಿಸ್; ಏನಿದು ವೈರಲ್ ನ್ಯೂಸ್?
ಫಿಟ್ ಆಗಿರಬೇಕು ಎಂದು ಎಲ್ಲರಿಗೂ ಆಸೆ ಇರುತ್ತೆ. ಆದರೆ ಮೊಮೊಸ್, ಪಿಜ್ಜಾ ಅಥವಾ ಗೋಲ್ಗಪ್ಪದಂತಹ ಆಹಾರಗಳನ್ನು ನೋಡಿದ್ರೆ ತಿನ್ನುವ ಆಸೆ ಆಗುತ್ತೆ. ಅಂಥವರಿಗಾಗಿ ಇಲ್ಲಿದೆ ನೋಡಿ ಡಿಜಿಟಲ್ ಮೋಮೊ ಸೇವೆ! ಇದು ತಮಾಷೆಗಾಗಿ ಮಾಡಿದ ವಿಡಿಯೊ ಆಗಿದ್ದು, ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.


ನವದೆಹಲಿ: ಫಿಟ್ ಆಗಿರಬೇಕು ಎಂದು ಕೆಲವರು ಡಯೆಟ್ ಮಾಡುತ್ತಾರೆ. ಆದರೆ ಕೆಲವೊಂದು ಆಹಾರ ಪದಾರ್ಥ ಕಂಡರೆ ಬಾಯಿ ಚಪಲ ತಡೆಯುವುದಕ್ಕೆ ಆಗಲ್ಲ! ಅಂಥವರಿಗೆ ಇಲ್ಲೊಂದು ಒಳ್ಳೆಯ ಪರಿಹಾರವಿದೆ. ನೀವು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸುತ್ತಿದ್ದು, ಮೋಮೊ, ಪಿಜ್ಜಾ ಅಥವಾ ಗೋಲ್ಗಪ್ಪದಂತಹ ಆಹಾರಗಳನ್ನು ತಿನ್ನುವ ಬಯಕೆ ಆಗ್ತಿದೆಯಾ...? ಅಂಥವರಿಗಾಗಿ ದೆಹಲಿಯ ಈ ಉಪಹಾರಗೃಹವು ಡಿಜಿಟಲ್ ಮೊಮೊ ಸೇವೆಯನ್ನು ಆಯೋಜಿಸಿದೆ. ಪ್ರಯಾಗ್ರಾಜ್ನ ಡಿಜಿಟಲ್ ಸ್ನಾನದ ನಂತರ ದೆಹಲಿಯ ಡಿಜಿಟಲ್ ಮೊಮೊ ಸರ್ವಿಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ, ವ್ಯಕ್ತಿಯೊಬ್ಬ ಈ ವಿಭಿನ್ನ ಸೇವೆಯ ಬಗ್ಗೆ ಜಾಹೀರಾತು ಮಾಡುತ್ತಿರುವುದು ಸೆರೆಯಾಗಿದೆ. ಈ ವೈರಲ್ ವಿಡಿಯೊವನ್ನು ತಮಾಷೆಗಾಗಿ ಮಾಡಲಾಗಿದ್ದು, ಇದನ್ನು ಮೊಮೊ ಪ್ರಿಯರಿಗಾಗಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೊದಲ್ಲಿ ಒಬ್ಬ ವ್ಯಕ್ತಿ ಎರಡು ಪ್ಲೇಟ್ಗಳಲ್ಲಿ ಮೋಮೊಗಳನ್ನು ಬಡಿಸಿಕೊಂಡು ಕುಳಿತಿದ್ದು, ಮತ್ತೊಬ್ಬ ವ್ಯಕ್ತಿಯ ಫೋಟೋವನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ. ಜೊತೆಗೆ, “ನಾವು ಡಿಜಿಟಲ್ ಮೋಮೊ ಸೇವೆಯನ್ನು ಒದಗಿಸುತ್ತಿದ್ದೇವೆ. ಜಂಕ್ಫುಡ್ನ ಕಡುಬಯಕೆಗಳನ್ನು ನಿಮಗೆ ನಿಯಂತ್ರಿಸಲು ಸಾಧ್ಯವಾಗದಿದ್ದರೆ, ನಿಮ್ಮ ಫೋಟೋವನ್ನು ನಮಗೆ ಕಳುಹಿಸಿ ಮತ್ತು ನಾವು ನಿಮಗೆ ಮೋಮೊಸ್ ಅನ್ನು ಡಿಜಿಟಲ್ ರೂಪದಲ್ಲಿ ತಿನ್ನಿಸುತ್ತೇವೆ" ಎಂದು ಹೇಳಿದ್ದಾನೆ.
ಅಲ್ಲದೇ ಅವನು ತನ್ನ ಕೈಯಲ್ಲಿ ಹಿಡಿದಿದ್ದ ವ್ಯಕ್ತಿಯ ಫೋಟೊವನ್ನು ತೋರಿಸುತ್ತಾ, “ಈ ವ್ಯಕ್ತಿಯು ಹಬೆಯಲ್ಲಿ ಬೇಯಿಸಿದ ಮತ್ತು ಅಫ್ಘಾನಿ ಮೊಮೊವನ್ನು ಡಿಜಿಟಲ್ ರೂಪದಲ್ಲಿ ತಿನ್ನಬೇಕೆಂದು ಕೇಳಿಕೊಂಡಿದ್ದ ಹಾಗಾಗಿ ನಾವು ಅವನ ಫೋಟೊದ ಜೊತೆಗೆ ಹಬೆಯಾಡುತ್ತಿರುವ ಮೊಮೊ ಪ್ಲೇಟ್ ಹಿಡಿದುಕೊಂಡಿದ್ದೇವೆ" ಎಂದು ತಿಳಿಸಿದ್ದಾನೆ.
ಈ ಪೋಸ್ಟ್ ವೈರಲ್ ಆಗಿದ್ದು, ಅನೇಕ ನೆಟ್ಟಿಗರು ಈ ಹಾಸ್ಯಮಯ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಒಬ್ಬರು, “ ನನಗೆ ಒಂದು ತಂದೂರಿ ಚಿಕನ್ ಡಿಜಿಟಲ್ ಮೊಮೊ ಸರ್ವಿಸ್ ಬೇಕು” ಎಂದು ಬರೆದಿದ್ದಾರೆ. ಇನ್ನೊಬ್ಬರು, "ಖಂಡಿತವಾಗಿಯೂ ಆರ್ಡರ್ ಮಾಡ್ತಿದ್ದೆ. ಆದರೆ ನಿನ್ನೆಯಷ್ಟೇ ಮೊಮೊಸ್ ತಿಂದೆ" ಎಂದು ಹೇಳಿದ್ದಾರೆ. "ಮಾಸಿಕ ಚಂದಾದಾರಿಕೆ ವೆಚ್ಚ ಎಷ್ಟು?" ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವೃದ್ಧ ದಂಪತಿಯ ರೊಮ್ಯಾಂಟಿಕ್ ವಿಡಿಯೊ ಫುಲ್ ವೈರಲ್!
ಪ್ರಯಾಗ್ರಾಜ್ನಲ್ಲಿ ನಡೆದ ಮಹಾ ಕುಂಭಮೇಳದ ವೇಳೆ ಈ ಡಿಜಿಟಲ್ ಸೇವೆ ಶುರುವಾಯಿತು ಎಂದು ವರದಿಯಾಗಿದೆ. ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಸಾಧ್ಯವಾಗದವರಿಗೆ ಒಂದು ವಿಶಿಷ್ಟ ವಿಧಾನವನ್ನು ಘೋಷಿಸಲಾಗಿತ್ತು. ಅದೇನೆಂದರೆ 1,100 ರೂ. ಶುಲ್ಕಕ್ಕೆ 'ಡಿಜಿಟಲ್ ಸ್ನಾನ್' (ಪವಿತ್ರ ಸ್ನಾನ) ಸೇವೆಯನ್ನು ನೀಡುವ ಬಗ್ಗೆ ಹೇಳಿ ಉದ್ಯಮಿಯೊಬ್ಬರು ವೈರಲ್ ಆಗಿದ್ದರು. ಈ ಸೇವೆಯು ವಾಟ್ಸಾಪ್ ಮೂಲಕ ಭಕ್ತರ ಫೋಟೊಗಳನ್ನು ಸಂಗ್ರಹಿಸಿ ಅದನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಲಾಗಿತ್ತು.