ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Grand Wedding; ಫ್ರಾನ್ಸ್ ನಲ್ಲಿ ನಡೆಯಿತು ಭಾರತೀಯ ಮೂಲದ ಉದ್ಯಮಿಯ ಮಗಳ ಅದ್ದೂರಿ ವಿವಾಹ

ಭಾರತೀಯ ಮೂಲದ ಬಿಲಿಯನೇರ್ ಉದ್ಯಮಿ ಸುನಿಲ್ ವಾಸ್ವಾನಿ (Billionaire Sunil Vaswani’s daughter wedding) ಅವರ ಮಗಳು ಸರೀನಾ ವಾಸ್ವಾನಿ ಭಾರತೀಯ ಶೈಲಿಯ ಅದ್ದೂರಿ ವಿವಾಹದ ಮೂಲಕ ಉದ್ಯಮಿ ಲವೀನ್ ಹೆಮ್ಲಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು. ಬಹು ದಿನಗಳ ವಿವಾಹ ಕಾರ್ಯಕ್ರಮದಲ್ಲಿ ಸ್ವಾಗತ ಭೋಜನ, ಮೆಹೆಂದಿ ಸಮಾರಂಭ ಮತ್ತು ಗಾಯಕ ಜೇಸನ್ ಡೆರುಲೊ ಅವರ ಸಂಗೀತ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಉದ್ಯಮಿಯ ಮಗಳ ಅದ್ದೂರಿ ವಿವಾಹದ ಝಲಕ್‌ ನೋಡಿ

ಫ್ರಾನ್ಸ್: ಭಾರತೀಯ ಮೂಲದ ಉದ್ಯಮಿ, ಕೋಟ್ಯಧಿಪತಿ ಸುನಿಲ್ ವಾಸ್ವಾನಿ (Billionaire Sunil Vaswani) ಅವರ ಮಗಳ ವಿವಾಹ (Sunil Vaswani daughter wedding) ಫ್ರಾನ್ಸ್ ನ (France) ಕೇನ್ಸ್‌ನಲ್ಲಿ ( Cannes ) ಅದ್ದೂರಿಯಾಗಿ ನೆರವೇರಿತು. ಸುನಿಲ್ ವಾಸ್ವಾನಿ ಅವರ ಮಗಳು ಸರೀನಾ ವಾಸ್ವಾನಿ (Sarina Vaswani) ಮತ್ತು ಎಡ್‌ಟೆಕ್ ಉದ್ಯಮಿ ಲವೀನ್ ಹೆಮ್ಲಾನಿ (Lavine Hemlani) ಅವರ ಮೆಹಂದಿ, ಸಂಗೀತ ಕಾರ್ಯಕ್ರಮಗಳು ಸೇರಿದಂತೆ ಬಹುದಿನಗಳ ವಿವಾಹ ಕಾರ್ಯಕ್ರಮಗಳಲ್ಲಿ ಹಲವಾರು ಭಾರತೀಯ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ಈ ಮದುವೆ ಸಮಾರಂಭವು ಫ್ರಾನ್ಸ್ ನ ರಿವೇರಿಯಾಕ್ಕೆ ಭಾರತೀಯ ಗ್ಲಾಮರ್‌ ನ ಸ್ಪರ್ಶವನ್ನು ನೀಡಿತ್ತು.

ಭಾರತೀಯ ಮೂಲದ ಬಿಲಿಯನೇರ್ ಉದ್ಯಮಿ ಸುನಿಲ್ ವಾಸ್ವಾನಿ ಅವರ ಮಗಳು ಸರೀನಾ ವಾಸ್ವಾನಿ ಭಾರತೀಯ ಶೈಲಿಯ ಅದ್ದೂರಿ ವಿವಾಹದ ಮೂಲಕ ಉದ್ಯಮಿ ಲವೀನ್ ಹೆಮ್ಲಾನಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಪಾದಾರ್ಪಣೆ ಮಾಡಿದರು.

vasvani1

ಬಹು ದಿನಗಳ ವಿವಾಹ ಕಾರ್ಯಕ್ರಮದಲ್ಲಿ ಸ್ವಾಗತ ಭೋಜನ, ಮೆಹೆಂದಿ ಸಮಾರಂಭ ಮತ್ತು ಗಾಯಕ ಜೇಸನ್ ಡೆರುಲೊ ಅವರ ಸಂಗೀತ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನೂರಾರು ಬಿಳಿ ಗುಲಾಬಿ ಮತ್ತು ಇತರ ಹೂವುಗಳಿಂದ ಮದುವೆ ಮಂಟಪವನ್ನು ಅಲಂಕರಿಸಲಾಗಿತ್ತು.

ಯಾರು ಸುನಿಲ್ ವಾಸ್ವಾನಿ?

ಭಾರತೀಯ ಮೂಲದ ಸುನಿಲ್ ವಾಸ್ವಾನಿ ನೈಜೀರಿಯಾದಲ್ಲಿ ವಾಸವಾಗಿರುವ ಬಿಲಿಯನೇರ್ ಉದ್ಯಮಿ. ಸುನಿಲ್ ದುಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ವೈವಿಧ್ಯಮಯ ಬಹುರಾಷ್ಟ್ರೀಯ ಸಮೂಹವಾಗಿರುವ ಸ್ಟಾಲಿಯನ್ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಇದು ಆಫ್ರಿಕಾ, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಕಾರ್ಯಾಚರಣೆ ನಡೆಸುತ್ತಿದೆ. ಫೋರ್ಬ್ಸ್ ಪಟ್ಟಿಯ ಪ್ರಕಾರ 2020ರಲ್ಲಿ ಅವರ ನಿವ್ವಳ ಮೌಲ್ಯ 13.68 ಕೋಟಿ ರೂ. ಎಂದು ಅಂದಾಜಿಸಿದೆ.

ಜೈಪುರದಲ್ಲಿ ಜನಿಸಿದ ವಾಸ್ವಾನಿ ನೈಜೀರಿಯಾದಲ್ಲಿ ಬೆಳೆದಿದ್ದು ಲಂಡನ್‌ನಲ್ಲಿ ಶಿಕ್ಷಣ ಪಡೆದರು. ಅವರು ಮತ್ತು ಅವರ ಪತ್ನಿ ರೀಟಾ ದುಬೈನಲ್ಲಿ ವಾಸವಾಗಿದ್ದಾರೆ. ಇವರಿಗೆ ಸೋನಮ್, ಸರೀನಾ ಮತ್ತು ಸಾಹಿಲ್ ವಾಸ್ವಾನಿ ಎಂಬ ಮೂವರು ಮಕ್ಕಳಿದ್ದಾರೆ. ಸುನಿಲ್ ವಾಸ್ವಾನಿ ಅವರ ಕಿರಿಯ ಮಗಳಾಗಿರುವ ಕೋಟ್ಯಧಿಪತಿ ಸರೀನಾ ವಾಸ್ವಾನಿ ಸ್ಟಾಲಿಯನ್ ಗ್ರೂಪ್‌ನ ಲೋಕೋಪಕಾರಿ ವಿಭಾಗವಾದ ಸ್ಟಾಲಿಯನ್ ಎಂಪವರ್‌ನ ಸ್ಥಾಪಕಿ ಮತ್ತು ಟ್ರಸ್ಟಿಯಾಗಿದ್ದಾರೆ. ಅಲ್ಲದೇ ಇವರು ಹ್ಯಾಚ್ ಇಂಪ್ಯಾಕ್ಟ್ ಅಡ್ವೈಸರಿಯ ಸಂಸ್ಥಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲಂಡನ್‌ನ ಎಸ್ ಒಎಎಸ್ ವಿಶ್ವವಿದ್ಯಾಲಯದಿಂದ ಅಭಿವೃದ್ಧಿ ಅಧ್ಯಯನ ಮತ್ತು ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಸ್ ಮತ್ತು ರಾಜಕೀಯ ವಿಜ್ಞಾನದಿಂದ ಸ್ನಾತಕೋತ್ತರ ಪದವಿ ಪಡೆದಿರುವ ಸರೀನಾ ವಾಸ್ವಾನಿ ಫ್ರಾನ್ಸ್‌ನ ಕೇನ್ಸ್‌ನಲ್ಲಿರುವ ಚಾಟಿಯೊ ಡೆ ಲಾ ಕ್ರೋಯಿಕ್ಸ್ ಡೆಸ್ ಗಾರ್ಡೆಸ್‌ನಲ್ಲಿ ಅದ್ದೂರಿಯಾಗಿ ಎಡ್‌ಟೆಕ್ ಉದ್ಯಮಿ ಲವೀನ್ ಹೆಮ್ಲಾನಿ ಅವರೊಂದಿಗೆ ವಿವಾಹವಾದರು.

ಇದನ್ನೂ ಓದಿ: Pak Prisoners: ಭೂಕಂಪನದ ಲಾಭ ಪಡೆದು ಜೈಲಿನಿಂದ ತಪ್ಪಿಸಿಕೊಂಡ 216 ಕೈದಿಗಳು-ಪಾಕ್‌ನಲ್ಲಿ ಇದೆಂಥಾ ಅವ್ಯವಸ್ಥೆ!?

ಚಾಟಿಯೊ ಡೆ ಲಾ ಕ್ರೋಯಿಕ್ಸ್ ಡೆಸ್ ಗಾರ್ಡೆಸ್ ಫ್ರಾನ್ಸ್‌ನ ಕೇನ್ಸ್‌ನಲ್ಲಿರುವ ಒಂದು ದೊಡ್ಡ ಐತಿಹಾಸಿಕ ಅರಮನೆಯಾಗಿದೆ. ಇದನ್ನು 1919ರಲ್ಲಿ ಸ್ವಿಸ್ ಕೈಗಾರಿಕೋದ್ಯಮಿ ಪಾಲ್ ಗಿರೋಡ್ ನಿರ್ಮಿಸಿದರು. ಬೆಟ್ಟದ ಮೇಲೆ ನಿರ್ಮಾಣಗೊಂಡಿರುವ ಈ ಅರಮನೆಯಿಂದ ಸಮುದ್ರದ ಅದ್ಭುತ ನೋಟವನ್ನು ಕಾಣಬಹುದು. 25 ಎಕರೆ ಉದ್ಯಾನ ಮತ್ತು ಅರಣ್ಯದಿಂದ ಇದು ಆವೃತವಾಗಿದೆ.

vasvani2

ಸರೀನಾ ವಾಸ್ವಾನಿ ಮತ್ತು ಲವೀನ್ ಹೆಮ್ಲಾನಿ ಅವರ ವಿವಾಹ ಕಾರ್ಯಕ್ರಮಗಳು ಭಾರತೀಯ ಶೈಲಿಯಲ್ಲಿ ನಡೆಯಿತು. ವಧುವರರು ಬಿಳಿ ಬಣ್ಣದ ಉಡುಪುಗಳನ್ನು ಧರಿಸಿದ್ದರು. ಸಾವಿರಾರು ಬಿಳಿ ಹೂವುಗಳಿಂದ ಸುಂದರವಾಗಿ ಅಲಂಕರಿಸಲ್ಪಟ್ಟ ಮಂಟಪದಲ್ಲಿ ಸರೀನಾ ಅವರು ಬಿಳಿ ಹೂವಿನಿಂದ ಅಲಂಕೃತವಾದ ಲೆಹೆಂಗಾದಲ್ಲಿ ಮೋಡಿ ಮಾಡುವಂತೆ ಕಾಣುತ್ತಿದ್ದರು. ಇವರ ವಿವಾಹ ಸಮಾರಂಭದಲ್ಲಿ ನಟ ಸಂಜಯ್ ದತ್, ಗಾಯಕ ಸೋನು ನಿಗಮ್, ವಿನ್ಯಾಸಕ ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವಾರು ಭಾರತೀಯ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.