ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion: ಗ್ಲಾಮರಸ್ ಬ್ಲ್ಯಾಕ್ ಹೈ ಸ್ಲಿಟ್ ರೆಡಿ ಸೀರೆಯಲ್ಲಿ ನಟಿ ಸೋಫಿ ಚೌಧರಿಯ ಮಾದಕ ಲುಕ್!

Star Saree Fashion: ಗ್ಲಾಮರಸ್ ಹೈ ಸ್ಲಿಟ್ ರೆಡಿ ಸೀರೆಯಲ್ಲಿ ನಟಿ ಸೋಫಿ ಚೌಧರಿ, ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಮನಮೋಹಕವಾಗಿ ಬಿಂಬಿಸುತ್ತಿರುವ ಈ ಸೀರೆಯಾದರೂ ಯಾವುದು? ವಿನ್ಯಾಸ ಯಾರದ್ದು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಸೀರೆಯಲ್ಲಿ ನಟಿ ಸೋಫಿ ಚೌಧರಿಯ ಮಾದಕ ಲುಕ್

ಚಿತ್ರಗಳು: ಸೋಫಿ ಚೌಧರಿ, ನಟಿ.‌, ಫೋಟೋಗ್ರಾಫಿ: ಹ್ಯಾರಿ ರಜಪೂತ್

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸೀರೆಯಲ್ಲೂ ಸಖತ್ ಮಾದಕವಾಗಿ ಕಾಣಿಸಿಕೊಂಡಿದ್ದಾರೆ ನಟಿ ಸೋಫಿ ಚೌಧರಿ. ಹೌದು, ಕಾಲನ್ನು ತೋರ್ಪಡಿಸುವ ಈ ಗ್ಲಾಮರಸ್ ಹೈ ಸ್ಲಿಟ್ ರೆಡಿ ಸೀರೆಯಲ್ಲಿ ನಟಿ ಸೋಫಿ, ಕಂಪ್ಲೀಟ್ ಮಾದಕ ಲುಕ್‌ನಲ್ಲಿ (Star Saree Fashion) ಕಾಣಿಸಿಕೊಂಡಿದ್ದಾರೆ. ಈ ಸೀರೆಗೆ ಡಿಸೈನರ್ ಪ್ರಿಂಟೆಡ್ ಬಿಕಿನಿ ಬ್ಲೌಸ್ ಧರಿಸಿದ್ದಾರೆ. ನೋಡಲು ಲಾಂಗ್ ಸ್ಕರ್ಟ್ ಶೈಲಿಯಲ್ಲಿರುವ ಸೀರೆಯ ವಿನ್ಯಾಸವು ಈ ಸೀರೆಗೆ ಇಂಡೋ-ವೆಸ್ಟರ್ನ್ ಟಚ್ ನೀಡಿದೆ. ಅಂದಹಾಗೆ, ಇದೇನು ಸಾಮಾನ್ಯವಾದ ರೆಡಿ ಸೀರೆಯಲ್ಲ! ಡಿಸೈನರ್ ರಿತಿಕಾ ಮೀರ್ಚಾಂದನಿ ಡಿಸೈನ್‌ನ ಹಾಗೂ ಲೆಬೆಲ್‌ನದ್ದು. ಈ ಸೀರೆಯ ತದ್ರೂಪದ ಸೀರೆಯನ್ನು ಕಳೆದ ವರ್ಷ ನಟಿ ರಕುಲ್ ಪ್ರೀತ್ ಸಿಂಗ್ ಕೂಡ ಧರಿಸಿದ್ದರು. ಆ ಸಮಯದಲ್ಲೂ ಈ ಸೀರೆ ಸೆಲೆಬ್ರೆಟಿಗಳ ಫೇವರೇಟ್ ಲಿಸ್ಟ್‌ಗೆ ಸೇರಿತ್ತು. ಈ ಡಿಸೈನ್‌ನಲ್ಲೆ ಸಾಕಷ್ಟು ಶೇಡ್‌ಗಳಲ್ಲಿ ಹಾಗೂ ಡಿಸೈನ್‌ನಲ್ಲಿ ರೆಡಿ ಸೀರೆಗಳಲ್ಲಿ ಸೆಲೆಬ್ರೆಟಿಗಳು ಕೂಡ ಕಾಣಿಸಿಕೊಂಡಿದ್ದರು.

Star Saree Fashion 1

ಲೆಹೆಂಗಾ ಸೀರೆ ವರ್ಸಸ್ ರೆಡಿ ಸೀರೆ

ತಕ್ಷಣಕ್ಕೆ ನೋಡಲು ಇದು ಸೀರೆಯಂತೆಯೂ ಕಾಣಿಸುವುದಿಲ್ಲ! ಇತ್ತ ಲೆಹೆಂಗಾದಂತೆಯೂ ಕಾಣಿಸುವುದಿಲ್ಲ! ಎಂಬ ಸಾಕಷ್ಟು ಟೀಕೆ ಟಿಪ್ಪಣಿಗಳು ಈ ಹಿಂದೆ ಕೇಳಿ ಬಂದಿದ್ದವು. ಇವೆಲ್ಲದರ ಮಧ್ಯೆ ನಾನಾ ಬ್ರಾಂಡ್‌ಗಳು ಹಾಗೂ ಲೆಬೆಲ್‌ಗಳು ಮಾತ್ರ ಕೊಂಚ ಡಿಸೈನ್ ಬದಲಾವಣೆ ಮಾಡಿ ಸೀರೆಯನ್ನು ಬಿಡುಗಡೆಗೊಳಿಸಿದ್ದವು. ಈ ಮಧ್ಯೆ ಕೆಲವು ಬ್ರಾಂಡ್‌ಗಳು ಈ ಡಿಸೈನನ್ನು ಲೆಹೆಂಗಾ ಸೀರೆಯೆಂದು ಲೆಬೆಲ್ ಅಂಟಿಸಿ ಬಿಡುಗಡೆಗೊಳಿಸಿದವು. ಇನ್ನು ಕೆಲವು ಹೈ ಸ್ಲಿಟ್ ಸೀರೆಯೆಂದು ಬಿಡುಗಡೆಗೊಳಿಸಿದ್ದವು. ಒಟ್ಟಾರೆ, ಈ ಸೀರೆ ಕೆಲಕಾಲ ಸೆಲೆಬ್ರೆಟಿಗಳ ಫೇವರೇಟ್ ಲಿಸ್ಟ್‌ಗಲ್ಲಿತ್ತು ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Star Saree Fashion 2

ಇದೀಗ ಮತ್ತೊಮ್ಮೆ ನಟಿ ಸೋಫಿ ಧರಿಸಿದ ನಂತರ ಮರು ಎಂಟ್ರಿ ನೀಡುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸೋಫಿ ಚೌಧರಿಯ ಸ್ಯಾಸಿ ಸೀರೆ

ಸೋಫಿ ಧರಿಸಿರುವ ಈ ಸೀರೆ ಪ್ರಿ ಡ್ರೇಪ್ ಆಗಿರುವಂತಹ ಇಂಡೋ-ವೆಸ್ಟರ್ನ್ ಶೈಲಿಯ ಹೈ ಸ್ಲಿಟ್ ಇರುವಂತಹ ಸೀರೆ. ಇದಕ್ಕೆ ಬಿಕಿನಿ ಬ್ಲೌಸ್ ಮ್ಯಾಚ್ ಮಾಡಿರುವುದು ವೆಸ್ಟರ್ನ್ ಟಚ್ ನೀಡಿದೆ. ಸೋಫಿ ಇದನ್ನು ಸ್ಯಾಸಿ ಸೀರೆಯೆಂದು ಬಣ್ಣಿಸಿದ್ದಾರೆ.

Star Saree Fashion 3

ಬ್ಲ್ಯಾಕ್ ಶೇಡ್‌ನ ಈ ಸೀರೆ ತಕ್ಷಣಕ್ಕೆ ಸಿಕ್ವೀನ್ಸ್ ಸೀರೆಯಂತೆ ಕಾಣುವಂತೆ ಡಿಸೈನ್ ಮಾಡಲಾಗಿದೆ ಎನ್ನುತ್ತಾರೆ ಡಿಸೈನರ್ಸ್. ಟ್ರಾನ್ಸಪರೆಂಟ್ ಆಗಿ ಕಾಣಿಸುವ ಫ್ಯಾಬ್ರಿಕ್‌ನದ್ದಾಗಿದ್ದು, ಈ ಸೀರೆಗೆ ವಿಕ್ಟೋರಿಯನ್ ಜ್ಯುವೆಲರಿಗಳನ್ನು ಸೋಫಿ ಮ್ಯಾಚ್ ಮಾಡಿದ್ದಾರೆ.

(ಲೇಖಕಿ: ಫ್ಯಾಷನ್ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | High Waist Pants Fashion: ಕ್ಲಾಸಿಕ್‌ ಲುಕ್‌ ಪ್ರಿಯರನ್ನು ಸವಾರಿ ಮಾಡುತ್ತಿರುವ ಹೈ ವೇಸ್ಟ್‌ ಪ್ಯಾಂಟ್‌ ಫ್ಯಾಷನ್‌!