Physical assault: ಐಸಿಯುನಲ್ಲೇ ನಡೀತು ಹೀನ ಕೃತ್ಯ! ಮತ್ತು ಬರೋ ಇಂಜೆಕ್ಷನ್ ಕೊಟ್ಟು ಮಹಿಳೆ ಮೇಲೆ ಅತ್ಯಾಚಾರ
ಐಸಿಯು ವಾರ್ಡ್ (ICU Ward) ನಲ್ಲಿ ದಾಖಲಾಗಿದ್ದ 32 ವರ್ಷದ ಮಹಿಳೆಗೆ ನಿದ್ರೆ ಬರುವ ಇಂಜೆಕ್ಷನ್ ನೀಡಿ ನರ್ಸಿಂಗ್ ಸಿಬ್ಬಂದಿಯೊಬ್ಬ (Nursing Staff) ಅತ್ಯಾಚಾರ (Physical assault) ನಡೆಸಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 4ರಂದು ರಾತ್ರಿ ನಡೆದಿದೆ. ಮಹಿಳೆಯು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗೆ ದಾಖಲಾಗಿದ್ದರು.


ರಾಜಸ್ಥಾನ: ಐಸಿಯು ವಾರ್ಡ್ (ICU Ward) ನಲ್ಲಿ ದಾಖಲಾಗಿದ್ದ 32 ವರ್ಷದ ಮಹಿಳೆಗೆ ನಿದ್ರೆ ಬರುವ ಇಂಜೆಕ್ಷನ್ ನೀಡಿ ನರ್ಸಿಂಗ್ ಸಿಬ್ಬಂದಿಯೊಬ್ಬ (Nursing Staff) ಅತ್ಯಾಚಾರ (Physical assault) ನಡೆಸಿರುವ ಘಟನೆ ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ಜೂನ್ 4ರಂದು ರಾತ್ರಿ ನಡೆದಿದೆ. ಮಹಿಳೆಯು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಯನ್ನು ಸುಭಾಷ್ ಗಠಲಾ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಕಾಲೇಜಿನ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಈವರೆಗೆ ಬಂಧಿಸಲಾಗಿಲ್ಲ ಎನ್ನಲಾಗಿದೆ.
ನಿದ್ರೆ ಬರುವ ಇಂಜೆಕ್ಷನ್ ನೀಡಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು ಘಟನೆಯ ಸಮಯದಲ್ಲಿ ಆಕೆಯ ಕುಟುಂಬಸ್ಥರು ಹೊರಗೆ ಕಾಯುತ್ತಿದ್ದರು. ಆಕೆ ಇದ್ದ ಐಸಿಯು ಹಾಸಿಗೆಯ ಸುತ್ತ ಪರದೆಗಳನ್ನು ಹಾಕಲಾಗಿತ್ತು. ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆ ತಮ್ಮ ಮನೆಯವರನ್ನು ಕರೆಯಲು ಪ್ರಾರಂಭಿಸಿದಳು. ಆದರೆ ಅವರು ಬಂದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಆಕೆ ಸ್ಪಷ್ಟವಾಗಿ ಮಾತನಾಡಲು ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲಿಸಿದ ಬಳಿಕ ಮಾಹಿತಿ ನೀಡಿದ ಸಹಾಯಕ ಸಬ್-ಇನ್ಸ್ಪೆಕ್ಟರ್ ಮಹಾವೀರ್ ಸಿಂಗ್, ಜೂನ್ 4 ರಂದು ರಾತ್ರಿ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಐಸಿಯುಗೆ ದಾಖಲಾಗಿದ್ದ 32 ವರ್ಷದ ಮಹಿಳೆ ಮೇಲೆ ನರ್ಸಿಂಗ್ ಸಿಬ್ಬಂದಿ ಅತ್ಯಾಚಾರ ನಡೆಸಿದ್ದಾರೆ ಎಂದು ಆಕೆಯ ಪತಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಆಕೆಯ ಪತಿ ಮೊದಲು ಕಾಲೇಜು ಆಡಳಿತವನ್ನು ಸಂಪರ್ಕಿಸಿದರು. ಆದರೆ ಅಧಿಕಾರಿಗಳು ವಿಷಯವನ್ನು ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಅವರು ಹೇಳಿದರು.
ದೂರಿನ ಪ್ರಕಾರ ಆರೋಪಿ ಅಧಿಕಾರಿಗಳ ಮುಂದೆ ಕ್ಷಮೆಯಾಚಿಸಿದರು. ಆದರೆ ಯಾವುದೇ ತಕ್ಷಣದ ಕ್ರಮ ಕೈಗೊಳ್ಳಲಾಗಿಲ್ಲ. ಮಹಿಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಮಾಹಿತಿ ನೀಡಿದ ಅನಂತರ ಅವರು ತಕ್ಷಣ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು ಎಂದರು.
ಇದಕ್ಕೂ ಮುನ್ನವೇ ಪೊಲೀಸರು ಎಫ್ಐಆರ್ ದಾಖಲಿಸಿ ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿ, ಆಕೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದರು. ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಇತರ ಐಸಿಯು ರೋಗಿಗಳ ವಿಚಾರಣೆ ನಡೆಸಲು ಪ್ರಾರಂಭಿಸಿದ್ದಾರೆ. ಸಿಆರ್ಪಿಸಿಯ ಸೆಕ್ಷನ್ 164 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಇಎಸ್ಐಸಿ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅಸೀಮ್ ದಾಸ್, ನಮಗೆ ಮಾಹಿತಿ ಬಂದ ತಕ್ಷಣ ನಾವು ತನಿಖಾ ತಂಡವನ್ನು ರಚಿಸಿದ್ದೇವೆ. ತಂಡವು ಶನಿವಾರದೊಳಗೆ ತನ್ನ ವರದಿಯನ್ನು ಸಲ್ಲಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: Physical assault: ರಾಜ್ಯವನ್ನೇ ಬೆಚ್ಚಿ ಬೀಳಿಸೋ ಘಟನೆ; ಬಾಲಕಿ ಮೇಲೆ ಗ್ಯಾಂಗ್ರೇಪ್
ಸದ್ಯ ಆಡಳಿತವು ಶಸ್ತ್ರಚಿಕಿತ್ಸಾ ಐಸಿಯುನಲ್ಲಿ ನಿಯೋಜಿಸಲಾದ ಸುಭಾಷ್ ಗಠಲಾ ನನ್ನು ಅಮಾನತುಗೊಳಿಸಿದೆ ಮತ್ತು ಇಎಸ್ಐಸಿ ಪ್ರಧಾನ ಕಚೇರಿಗೆ ಮಾಹಿತಿ ನೀಡಿದೆ. ಘಟನೆಯ ರಾತ್ರಿ ಎಂಟು ಐಸಿಯು ಹಾಸಿಗೆಗಳಲ್ಲಿ ಏಳು ಹಾಸಿಗೆಗಳಲ್ಲಿ ಮೂರು ಹಾಸಿಗೆಗಳಲ್ಲಿ ಮಹಿಳಾ ರೋಗಿಗಳೇ ಇದ್ದರು ಎಂದು ಅವರು ಹೇಳಿದ್ದಾರೆ.
ಈ ಘಟನೆಯನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ವಿರೋಧ ಪಕ್ಷದ ನಾಯಕ ಟಿಕರಾಮ್ ಜಲ್ಲಿ ಸೇರಿದಂತೆ ಕಾಂಗ್ರೆಸ್ ನಾಯಕರು ಖಂಡಿಸಿದ್ದಾರೆ.