Bengaluru Power Cut: ಜೂ.25, 26ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ
Bengaluru Power Cut: ಆಡುಗೋಡಿ ಮತ್ತು ಆಸ್ಟೀನ್ ಟೌನ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.25 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ. ಈ ಕುರಿತ ವಿವರ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಆಡುಗೋಡಿ ಮತ್ತು ಆಸ್ಟೀನ್ ಟೌನ್ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.25 ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Bengaluru Power Cut) ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ನಗರದ ಆಡುಗೋಡಿ, ಸಲಾಪುರಿಯಾ ಟವರ್, ಬಿಗ್ ಬಜಾರ್, ಆಕ್ಸೆಂಚರ್, ಕೆ.ಎಂ.ಎಫ್ ಗೋಡೌನ್, ನಂಜಪ್ಪ ಲೇಔಟ್, ನ್ಯೂ ಮೈಕೋ ರಸ್ತೆ, ಚಿಕ್ಕಲಕ್ಷ್ಮೀ ಲೇಔಟ್, ಮಹಲಿಂಗೇಶ್ವರ ಬಡಾವಣೆ, ಬೆಂಗಳೂರು ಡೈರಿ, ಫೋರಂ, ರಂಗದಾಸಪ್ಪ ಲೇಔಟ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಚಿನ್ನಯ್ಯನ್ನ ಪಾಳ್ಯ, ಚಂದ್ರಪ್ಪ ನಗರ, ನಿಮ್ಹಾನ್ಸ್ ಅಡ್ಮಿನಿಸ್ಟ್ರೇಟಿವ್ ಬ್ಲಾಕ್, ಬಂಡೆ ಸ್ಲಮ್, ಸುಣ್ಣದಕಲ್ಲು, ಲಾಲ್ಜಿ ನಗರ, ಶಾಮಣ್ಣ ಗಾರ್ಡನ್, ಎನ್ ಡಿ ಆರ್ ಐ, ಪೊಲೀಸ್ ವಸತಿ ಗೃಹಗಳು ಮತ್ತು ಸುತ್ತಮುತ್ತಲ ಪ್ರದೇಶಗಳು, ರಿಚ್ ಮಂಡ್ ಟೌನ್, ರಿಚ್ ಮಂಡ್ ಸರ್ಕಲ್, ಜಾನ್ಸನ್ ಮಾರ್ಕೆಟ್, ನಾರೀಸ್ ರಸ್ತೆ, ಅರಬ್ ಲೈನ್, ವೆಲ್ಂಗ್ಟನ್ ಸ್ಟ್ರೀಟ್, ಕರ್ಲಿ ಸ್ಟ್ರೀಟ್, ಲಿಯೋನಾರ್ಡ್ ಸ್ಟ್ರೀಟ್, ರಿನಿಯಸ್ ಸ್ಟ್ರೀಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ
ಜೂ.26ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ
ಬಿ.ಎಂ.ಟಿ.ಸಿ ಉಪಕೇಂದ್ರ ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಜೂ.26ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ನಗರದ ವಿಲ್ಸನ್ ಗಾರ್ಡನ್, ಹೊಂಬೆಗೌಡ ನಗರ, ಸಂಪಂಗಿರಾಮ ನಗರ, ಜೆ.ಸಿ. ರಸ್ತೆ, ಶಾಂತಿನಗರ, ಬಿಟಿಎಸ್ ರಸ್ತೆ, ರಿಚ್ ಮಂಡ್ ಸರ್ಕಲ್, ರೆಸಿಡೆನ್ಸಿ ರೋಡ್, ಸುಧಾಮನಗರ, ಕೆ.ಎಚ್. ರಸ್ತೆ, ಶಾಂತಿನಗರ, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಸುಬ್ಬಯ್ಯ ಸರ್ಕಲ್ ಸಿದ್ದಯ್ಯ ರಸ್ತೆ, ಲಾಲ್ ಬಾಗ್ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಕೋರಮಂಗಲ ವಿಭಾಗದ 66/11ಕೆವಿ ಆಸ್ಟಿನ್ ಟೌನ್ ಉಪಕೇಂದ್ರ ವ್ಯಾಪ್ತಿಯಲ್ಲಿ ಜೂ.25 ರಂದು ಬುಧವಾರ ಬೆಳಗ್ಗೆ10 ಗಂಟೆಯಿಂದ ಮಧ್ಯಾಹ್ನ 1ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಂಗಳೂರು ಉತ್ತರ ವೃತ್ತದ 66/11ಕೆವಿ ಎಲ್ ಆರ್ ಬಂಡೆ ಕೇಂದ್ರ, 66/11ಕೆವಿಎ ರಾಜನಕುಂಟೆ ಕೇಂದ್ರ ವ್ಯಾಪ್ತಿಯಲ್ಲಿನ ಹಲವೆಡೆ ಜೂ.26 ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಕೋರಮಂಗಲ ವಿಭಾಗದ ವಿಕ್ಟೋರಿಯ ಲೇಔಟ್, ಬಾಲಾಜಿ ಥಿಯೆಟರ್, ಅಗರಂ ವಿವೆಕನಗರ, ಸಣ್ಣೇಣಹಳ್ಳಿ, ವೊನ್ನರ್ ಪೇಟೆ, ಆಂಜನೇಯ ಟೆಂಪಲ್ ಸ್ಟ್ರೀಟ್, ಕೆಎಸ್ಆರ್ಪಿ ಕ್ವಾಟ್ರಸ್, ಲಿಂಡನ್ ಸ್ಟ್ರೀಟ್, ಪಾಮ್ ಗ್ರೂವು ರೋಡ್, ಯಲಗುಂಟೆ ಪಾಳ್ಯಮ್, ಏರ್ ಫೋರ್ಸ್ ಹಾಸ್ಪಿಟಲ್, ಲೈಫ್ ಸ್ಟೈಲ್, ಕ್ಯಾಂಬ್ಲ್ ರೋಡ್ ಜಂಕ್ಷನ್, ರಿಚ್ಮಂಡ್ ರೋಡ್, ರುದ್ರಪ್ಪ ಗಾರ್ಡನ್, ಎಂ ಜಿ ಗಾರ್ಡನ್, ಆಸ್ಟಿನ್ಟೌನ್, ನೀಲಸಂದ್ರ, ಬಜಾರ್ ಸ್ಟ್ರೀಟ್, ಆರ್ ಕೆ ಗಾರ್ಡನ್, ಬೆಂಗಳೂರು ಫರ್ನಿಚರ್, ರೋಸ್ ಗಾರ್ಡನ್, ಒ.ಆರ್.ಸಿ ರಸ್ತೆ, ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ.25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಬೆಂಗಳೂರು ಉತ್ತರ ವೃತ್ತ ಹೊನ್ನೇನಹಳ್ಳಿ, ಸಿಂಗನಾಯಕನಹಳ್ಳಿ, ರಾಜನಕುಂಟೆ, ಅಡ್ಡೇವಿಶ್ವನಾಥಪುರ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ಕರಲಾಪುರ, ಕೆಎಂಎಫ್, ಇಟಗಲ್ಪುರ, ಅರ್ಕೇರಿ, ಬೈರಾಪುರ, ಬುಡಮನಹಳ್ಳಿ, ದಿಬ್ಬೂರು, ಕಾಕೋಲು, ಸೊನ್ನೆನಹಳ್ಳಿ, ಸಿ.ಎಂ.ಎಲ್. ಎಲ್.ಆರ್.ಬಂಡೆ ಮುಖ್ಯರಸ್ತೆ, ಗಾಂಧಿನಗರ, ಚಿನ್ನಣ್ಣ ಲೇಔಟ್, ಅಂಬೇಡ್ಕರ್ ಲೇಔಟ್, ಅನ್ವರ್ ಲೇಔಟ್, ಕಾವೇರಿ ನಗರ, ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಸುಲ್ತಾನಪಾಳ್ಯ, ರಂಕಾನಗರಂ ಕನಕನಗರ, ಕೆಎಚ್ಬಿ ಮುಖ್ಯರಸ್ತೆ, ಭುವನೇಶ್ವರಿ ನಗರ, ಡಿಜೆ ಹಳ್ಳಿ, ಕೆ.ಜಿ.ಹಳ್ಳಿ, ಗಣೇಶ್ ಬ್ಲಾಕ್, ವಿ.ನಾಗನಹಳ್ಳಿ, ಅಡಮಾನಂದನಗರ, ಅಡಮಾನಂದ ಕಾಲೋನಿ, ವಿ. ವೃತ್ತ, ಶಾಂಪುರ, ಕುಶಾಲನಗರ, ಮೋದಿ ರಸ್ತೆ, ಮೋದಿ ಉದ್ಯಾನ, ದೊಡ್ಡಣ್ಣ ನಗರ, ಮುನಿವೀರಪ್ಪ ಲೇಔಟ್, ಸಕ್ಕರೆ ಮಂಡಿ, ಮುನೇಶ್ವರ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜೂ.26ರಂದು ಗುರುವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿಯನ್ನೂ ಓದಿ | Celebrity Monsoon Fashion 2025: ರೆಡ್ ಬ್ಲೇಜರ್ನಲ್ಲಿ ಕಿರುತೆರೆ ನಟ ರಾಮ್ ಪವನ್ ಶೇಟ್ ಮಾನ್ಸೂನ್ ಲುಕ್