ಹ್ಯಾಪಿಡೆಂಟ್ “ಚಮ್ಕಿಂಗ್ ಗಮ್: ಚಮ್ಕಾ ಮುಸ್ಕಾನ್, ಜಗ್‌ಮಗ್ ಜಹಾನ್” ಅಭಿಯಾನವು ವಿಶಿಷ್ಠ ಕಥಾನಕಕ್ಕೆ ಹೊಸ ರೂಪ
ಹೊಸ ಕ್ಯಾಂಪೇನ್‌ನ ಹೆಸರು “ಚಮ್ಕಿಂಗ್ ಗಮ್: ಚಮ್ಕಾ ಮುಸ್ಕಾನ್, ಜಗ್‌ಮಗ್ ಜಹಾನ್” ಎಂಬುದಾ ಗಿದ್ದು, ಹೊಸತನದ ಸಿನಿಮೀಯ ಸನ್ನಿವೇಶಗಳನ್ನು ಮತ್ತೆ ನೆನಪಿಸುತ್ತದೆ. ಆಕರ್ಷಕ ನಗು ಮತ್ತು ಸ್ಫೂರ್ತಿ ನೀಡುವ ಅದರ ಶಕ್ತಿಯನ್ನೂ ಇದು ಪ್ರತಿಬಿಂಬಿಸುತ್ತಿದ್ದು, ದೃಶ್ಯಾತ್ಮಕವಾಗಿ ಅದ್ಭುತ ಜಗತ್ತನ್ನು ಇದು ಅನಾವರಣಗೊಳಿಸುತ್ತಿದೆ.


ಬೆಂಗಳೂರು: ಭಾರತದ ಅತ್ಯಂತ ಜನಪ್ರಿಯ ಚ್ಯೂಯಿಂಗ್ ಗಮ್ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಹಾಗೂ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ಬ್ರ್ಯಾಂಡ್ ಆಗಿರುವ ಹ್ಯಾಪಿಡೆಂಟ್ ಹೊಸ ಜಾಹೀರಾತು ವೀಡಿಯೋವನ್ನು ಬಿಡುಗಡೆ ಮಾಡಿದೆ.
ಹೊಸ ಕ್ಯಾಂಪೇನ್‌ನ ಹೆಸರು “ಚಮ್ಕಿಂಗ್ ಗಮ್: ಚಮ್ಕಾ ಮುಸ್ಕಾನ್, ಜಗ್‌ಮಗ್ ಜಹಾನ್” ಎಂಬುದಾಗಿದ್ದು, ಹೊಸತನದ ಸಿನಿಮೀಯ ಸನ್ನಿವೇಶಗಳನ್ನು ಮತ್ತೆ ನೆನಪಿಸುತ್ತದೆ. ಆಕರ್ಷಕ ನಗು ಮತ್ತು ಸ್ಫೂರ್ತಿ ನೀಡುವ ಅದರ ಶಕ್ತಿಯನ್ನೂ ಇದು ಪ್ರತಿಬಿಂಬಿಸುತ್ತಿದ್ದು, ದೃಶ್ಯಾತ್ಮಕವಾಗಿ ಅದ್ಭುತ ಜಗತ್ತನ್ನು ಇದು ಅನಾವರಣಗೊಳಿಸುತ್ತಿದೆ.
ಮೆಕ್ಯಾನ್ ವರ್ಲ್ಡ್‌ಗ್ರೂಪ್ ಇಂಡಿಯಾ ಪರಿಕಲ್ಪನೆ ರೂಪಿಸಿದ ಅಭಿಯಾನವನ್ನು ಸಾಹಿತಿ ಪ್ರಸೂನ್ ಜೋಷಿ ಮುನ್ನಡೆಸುತ್ತಿದ್ದಾರೆ. ಇವರು ಹಿನ್ನೆಲೆ ಹಾಡಿಗೆ ಸಾಹಿತ್ಯ ಬರೆದಿದ್ದು, ಅದಕ್ಕೆ ಸ್ವತಃ ಹಾಡಿ ದ್ದಾರೆ. ಬಾಲಿವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಶಂತನು ಮೋಯಿತ್ರಾ ಇದಕ್ಕೆ ಸಂಗೀತ ನೀಡಿದ್ದಾರೆ. ಅಸಲೀತನ, ರೋಚಕತೆ ಮತ್ತು ಗುರಿಗೆ ಹೆಚ್ಚು ಮೌಲ್ಯವನ್ನು ನೀಡುವ ಹೊಸ ತಲೆಮಾರಿನ ಗ್ರಾಹಕರಿಗೆ ಮೆಚ್ಚುಗೆಯಾಗುವಂತೆ ಅಭಿಯಾನವನ್ನು ರಚಿಸಲಾಗಿದೆ.
ಇದನ್ನೂ ಓದಿ: IPL Celebration: ನಾಳೆ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆ; ಐಪಿಎಲ್ ಸಂಭ್ರಮಾಚರಣೆಗೆ ಹೊಸ ನಿಯಮ ಜಾರಿ ಸಾಧ್ಯತೆ!
ಕೆಂಪು ಪೇಂಟ್ ಹಿನ್ನೆಲೆಯಲ್ಲಿ ಆಕರ್ಷಕ ನಗು ಬೀರುವ ಒಂದು ತಂಡವು ತಮ್ಮ ಸುತ್ತಲಿನ ಪ್ರದೇಶದಲ್ಲಿ ಕಸ ಎಸೆಯುವುದರಿಂದ ಈ ಕ್ಯಾಂಪೇನ್ ವೀಡಿಯೋ ಆರಂಭವಾಗುತ್ತದೆ. ಇದು ಊಹಾತ್ಮಕವಾಗಿದ್ದರೂ ಅತ್ಯಂತ ಆಕರ್ಷಕವೂ ಆಗಿದ್ದು, ಒಂದು ಸಣ್ಣ ಕೃತ್ಯವೂ ಕೂಡಾ ದೊಡ್ಡ ಮಟ್ಟದ ಸಾಮಾಜಿಕ ಬದಲಾವಣೆಗೆ ಕಾರಣವಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.
ಈ ಬಿಡುಗಡೆಯ ಬಗ್ಗೆ ಮಾತನಾಡಿದ ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ನಿಖಿಲ್ ಶರ್ಮಾ “ಪರ್ಫೆಟ್ಟಿ ವ್ಯಾನ್ ಮೆಲ್ಲೆ ಇಂಡಿಯಾದಲ್ಲಿ ನಾವು ಸಾಂಸ್ಕೃತಿಕ ವಾಗಿ ಮತ್ತು ಭಾವನಾತ್ಮಕವಾಗಿ ಹೊಂದಿಕೆಯಾಗುವ ಬ್ರ್ಯಾಂಡ್ ಅನ್ನು ನಿರ್ಮಾಣ ಮಾಡುವುದು ನಮ್ಮ ಗುರಿಯಾಗಿರುತ್ತದೆ. ಈ ಧ್ಯೇಯಕ್ಕೆ ಹ್ಯಾಪಿಡೆಂಟ್ ಅತ್ಯುತ್ತಮವಾಗಿ ಹೊಂದಿಕೆಯಾಗುತ್ತದೆ. ಬ್ರ್ಯಾಂಡ್‌ನ ಮೂಲ ಧ್ಯೇಯದ ಜೊತೆಗೆ ಆಧುನಿಕ ಗ್ರಾಹಕರನ್ನೂ ಸೆಳೆಯುವ ಉದ್ದೇಶದಿಂದ ‘ಚಮ್ಕಾ ಮುಸ್ಕಾನ್, ಜಗ್‌ಮಗ್ ಜಹಾನ್’ ಘೋಷವಾಕ್ಯವು ಹೊರಬಂದಿದೆ. ಮೆಕ್ಯಾನ್ ವರ್ಲ್ಡ್ ಗ್ರೂಪ್ ಜೊತೆಗೆ ನಮ್ಮ ಪಾಲುದಾರಿಕೆಯು ಕ್ರಿಯಾಶೀಲ ಪರಿಣಿತಿಯನ್ನು ಇನ್ನೂ ಒದಗಿಸುತ್ತಲೇ ಇದೆ ಎಂದರು.