ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aditya Roy Kapur: ಗಾಯಕನಾದ ನಾಯಕ; ಲೈವ್ ಶೋದಲ್ಲಿ ಹಾಡಿನ ಮೂಲಕ ಗಮನ ಸೆಳೆದ ನಟ ಆದಿತ್ಯ ರಾಯ್ ಕಪೂರ್‌

ʼಆಶಿಕಿ 2ʼ, ʼಯೇ ಜವಾನಿ ಹೆ ದಿವಾನಿʼ, ʼಕಳಂಕ್‌ʼ ಸಿನಿಮಾ ಖ್ಯಾತಿಯ ನಟ ಆದಿತ್ಯ ರಾಯ್ ಕಪೂರ್ ಇತ್ತೀಚೆಗಷ್ಟೇ ಅನುರಾಗ್ ಬಸು ಅವರ 'ಮೆಟ್ರೋ ಇನ್ ದಿನೋ' ಚಿತ್ರದ ಆಲ್ಬಂ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಆಲ್ಬಂ ಬಿಡುಗಡೆ ಸಮಾರಂಭದಲ್ಲಿ ನಟ ಆದಿತ್ಯ ರಾಯ್ ಹಾಡೊಂದನ್ನು ಹಾಡಿ ಭರ್ಜರಿಯಾಗಿ ಮನರಂಜಿಸಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ವೈರಲ್ ಆಗುತ್ತಿದೆ.

ಬಾಲಿವುಡ್ ನಟ ಆದಿತ್ಯ ರಾಯ್ ಕಪೂರ್ ಹಾಡಿಗೆ ಮನಸೋತ ಫ್ಯಾನ್ಸ್‌

Aditya Roy Kapur

Profile Pushpa Kumari Jun 24, 2025 7:50 PM

ನವದೆಹಲಿ: ʼಆಶಿಕಿ 2ʼ, ʼಯೇ ಜವಾನಿ ಹೆ ದಿವಾನಿʼ, ʼಕಳಂಕ್‌ʼ ಸಿನಿಮಾ ಖ್ಯಾತಿಯ ನಟ ಆದಿತ್ಯ ರಾಯ್ ಕಪೂರ್ (Aditya Roy Kapur) ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಅವರು ಅನುರಾಗ್ ಬಸು ಅವರ ʼಮೆಟ್ರೋ ಇನ್ ದಿನೋʼ ಚಿತ್ರದ ಆಲ್ಬಂ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದಿತ್ಯ ರಾಯ್ ಕಪೂರ್ ಜತೆಗೆ ಸಾರಾ ಅಲಿ ಖಾನ್, ನೀನಾ ಗುಪ್ತಾ, ಅಲಿ ಫಜಲ್, ಫಾತಿಮಾ ಸನಾ ಶೇಖ್ ಸೇರಿದಂತೆ ಬಾಲಿವುಡ್‌ ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು‌. ಈ ಸಮಾರಂಭದಲ್ಲಿ ಆದಿತ್ಯ ರಾಯ್ ಹಾಡೊಂದನ್ನು ಹಾಡಿ ಜನರನ್ನು ಮನರಂಜಿಸಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಆದಿತ್ಯ ರಾಯ್ ನಟನ ಜತೆಗೆ ಗಾಯಕ ಎನ್ನುವುದು ಬಹುತೇಕರಿಗೆ ಗೊತ್ತಿತ್ತು. ಆದರೆ ಅವರು ಲೈವ್ ಶೋ ಎಲ್ಲಿಯೂ ಇದುವರೆಗೆ ನೀಡಿರಲಿಲ್ಲ. ಇದೀಗ ಆಡಿಯೊ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ʼಇಷ್ಕ್ ಹೈ ಯಾ ಥರಕ್ʼ ಹಾಡನ್ನು ಹಾಡುವ ಮೂಲಕ ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ‌. ಅಭಿಮಾನಿಗಳು ಅವರ ಗಾಯನಕ್ಕೆ ಮನ ಸೋತಿದ್ದಾರೆ.

ತನ್ನ ಮೊದಲ ಹಾಡಿನ ಅನುಭವದ ಬಗ್ಗೆ ಸ್ವತಃ ಆದಿತ್ಯ ರಾವ್ ಮಾತನಾಡಿದ್ದಾರೆ. ʼʼನಾನು ಲೈವ್‌ನಲ್ಲಿ ಹಾಡುವುದನ್ನು ಅಭಿಮಾನಿಗಳು ಇದುವರೆಗೆ ನೋಡಿರಲಿಲ್ಲ. ಹಿಂದೆ ನನಗಾಗಿ ಮತ್ತು ಸ್ನೇಹಿತರಿಗಾಗಿ ಹಾಡಿದ್ದೇನೆ. ಆದರೆ ಯಾವುದೇ ಚಿತ್ರದಲ್ಲಿ ಅಧಿಕೃತವಾಗಿ ಹಾಡಿಲ್ಲ. ನಾನು ಚಿತ್ರವೊಂದರಲ್ಲಿ ಹಾಡುತ್ತಿರುವುದು ಇದೇ ಮೊದಲು. ಇದಕ್ಕೆ ನಿಮ್ಮೆಲ್ಲರ ಬೆಂಬಲ ಬಯಸುತ್ತೇನೆ. ʼಮೆಟ್ರೋ ಇನ್ ದಿನೋʼ ಚಿತ್ರದಲ್ಲಿ ಸಂಗೀತಕ್ಕೂ ಪ್ರಾಮುಖ್ಯತೆ ಇದೆ. ಇದು ನನಗೆ ಸಿಕ್ಕ ಅತ್ಯತ್ತಮ ಅವಕಾಶʼʼ ಎಂದು ಹೇಳಿದರು.

ಇದನ್ನು ಓದಿ: Just Married Movie: ‘ಜಸ್ಟ್ ಮ್ಯಾರೀಡ್’ ಚಿತ್ರದ ‘ಶಿಶುಪಾಲ’ ಪಾತ್ರದಲ್ಲಿ ದಕ್ಷಿಣ ಭಾರತದ ಖ್ಯಾತ ನಟ ಶ್ರೀಮನ್

ಇವರು ಹಾಡಿದ್ದ ಹಾಡು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಹಾಗಿದ್ದರೂ ಈಗಲೇ ಈ ಹಾಡು ಜನಪ್ರಿಯವಾಗುತ್ತಿದೆ. ಈ ವೈರಲ್ ವಿಡಿಯೊ ಕಂಡು ನೆಟ್ಟಿಗರು ನಾನಾ ರೀತಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಬಳಕೆದಾರರೊಬ್ಬರು ʼಆಶಿಕಿ 2ʼ ಸಿನಿಮಾದ ರಾಹುಲ್ ಜಯ್ಕರ್ ಪಾತ್ರವನ್ನು ನೋಡಿದಂತಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಅನುರಾಗ್ ಬಸು ನಿರ್ದೇಶನ 'ಮೆಟ್ರೋ ಇನ್ ದಿನೋʼ ಸಿನಿಮಾದಲ್ಲಿ ಬಹುತಾರಾಗಣವಿದೆ. ಆದಿತ್ಯ ರಾಯ್ ಕಪೂರ್, ಸಾರಾ ಅಲಿ ಖಾನ್, ಪಂಕಜ್ ತ್ರಿಪಾಠಿ, ನೀನಾ ಗುಪ್ತಾ, ಕೊಂಕಣ ಸೇನ್‌ ಶರ್ಮಾ, ಅನುಪಮ್ ಖೇರ್, ಫಾತಿಮಾ ಸನಾ ಶೇಖ್, ಅಲಿ ಫಜಲ್, ಶಾಶ್ವತ ಚಟರ್ಜಿ ಸೇರಿದಂತೆ ಅನೇಕ ತಾರೆಯರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವು ಜುಲೈ 4ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.