Viral Video: ಅಜ್ಜಿಯನ್ನು ಕಸದ ತೊಟ್ಟಿಗೆ ಎಸೆದ ಕ್ರೂರಿ ಮೊಮ್ಮಗ!
ಮುಂಬೈಯ ಗೋರೆಗಾಂವ್‌ನ ಆರೆ ಕಾಲೋನಿಯಲ್ಲಿ ಕಸದ ರಾಶಿಯಲ್ಲಿ ವೃದ್ಧೆಯೊಬ್ಬರು ಪತ್ತೆಯಾಗಿದ್ದಾರೆ. ಅವರ ಮುಖದ ಮೇಲೆ ಗಾಯವಾಗಿದ್ದು, ಚರ್ಮದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮೊಮ್ಮಗನ ತಂದು ಎಸೆದಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮುಂಬೈ: ವಯಸ್ಸಾದವರನ್ನು ಪ್ರೀತಿ ಹಾಗೂ ಕಾಳಜಿಯಿಂದ ನೋಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ಮೊಮ್ಮಗ ಕ್ಯಾನ್ಸರ್ (Cancer)ನಿಂದ ಬಳಲುತ್ತಿದ್ದ ಅಜ್ಜಿಯನ್ನು ಇತ್ತೀಚೆಗೆ ಗೋರೆಗಾಂವ್‌ನ ಆರೆ ಕಾಲೋನಿಯಲ್ಲಿ ಕಸದ ರಾಶಿಯಲ್ಲಿ ಎಸೆದು ಹೋಗಿದ್ದಾನೆ. ಪೊಲೀಸರು ಕೊಳೆತು ನಾರುತ್ತಿರುವ ಕಸದ ರಾಶಿಯಲ್ಲಿ ಬಿದ್ದಿದ್ದ ಅಜ್ಜಿಯನ್ನು ರಕ್ಷಿಸಿದ್ದಾರೆ. ಆಕೆಯ ಮುಖದಲ್ಲಿ ಗಾಯಗಳಿದ್ದು, ಅವರು ನೋವಿನಿಂದ ನರಳುತ್ತಿದ್ದರು ಎಂದು ತಿಳಿಸಿದ್ದಾರೆ. ಈ ಸುದ್ದಿ ಈಗ ವೈರಲ್ (Viral News) ಆಗಿದೆ.
ಪೊಲೀಸರು ತಕ್ಷಣ ಅವರನ್ನು ಜೋಗೇಶ್ವರಿ ಟ್ರಾಮಾ ಕೇರ್ ಮತ್ತು ನಂತರ ಕೂಪರ್ ಆಸ್ಪತ್ರೆಗೆ ಕರೆದೊಯ್ದದಿದ್ದಾರೆ. ಆ ಮಹಿಳೆ ತನ್ನನ್ನು ಮಲಾಡ್ ನಿವಾಸಿ ಯಶೋದಾ ಗಾಯಕ್ವಾಡ್ ಎಂದು ಪರಿಚಯಿಸಿಕೊಂಡಿದ್ದು, ಸ್ವಂತ ಮೊಮ್ಮಗನೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಿದ್ದಾರೆ. ಅವರ ಗುರುತನ್ನು ಪರಿಶೀಲಿಸಲು ಮತ್ತು ಅವರ ಸಂಬಂಧಿಕರನ್ನು ಪತ್ತೆಹಚ್ಚಲು ಪೊಲೀಸರು ಮಲಾಡ್ ಮತ್ತು ಕಂಡಿವ್ಲಿಯ ವಿಳಾಸಗಳಿಗೆ ಭೇಟಿ ನೀಡಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕ್ಲಾಸ್ ರೂಂನಲ್ಲಿ ಗಡದ್ದಾಗಿ ನಿದ್ದೆ ಮಾಡಿದ ಮೇಷ್ಟ್ರು; ಕಿಡಿಕಾರಿದ ನೆಟ್ಟಿಗರು
ಅವರ ಸಂಬಂಧಿಕರು ತಿಳಿಸಿದ ಪ್ರಕಾರ, ಅವರು ಮನೆ ಬಿಟ್ಟು ಹೋಗಿದ್ದರು ಮತ್ತು ಅವರನ್ನು ಅಲ್ಲಿ ಎಸೆದಿರಲಿಲ್ಲ. ಅವರು ಈ ಹಿಂದೆಯೂ ಇದೇ ರೀತಿ ಮನೆ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಅವರ ಹೇಳಿಕೆಗಳನ್ನು ಪರಿಶೀಲಿಸಲು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ ಎನ್ನಲಾಗಿದೆ.