ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SIRA (Tumkur) News: ಎಲ್ಲಾ ಚೆಕ್ ಡ್ಯಾಮ್ ಹಾಗೂ ಕೆರೆಗಳು ತುಂಬುವ ವಿಶ್ವಾಸವಿದೆ

ಮಾರಮ್ಮನ ಗುಡಿಯ ಪಕ್ಕದಲ್ಲಿರುವ ಜಾಗದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚ ಮಾಡಿ ಸಮುದಾಯ ಭವನವನ್ನು ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿದೆ, ಈ ಭಾಗದಲ್ಲಿ ಬಡವರ ಸಂಖ್ಯೆಹೆಚ್ಚಾಗಿರುವ ಕಾರಣ ಶುಭ ಕಾರ್ಯಗಳಿಗೆ ಅನುಕೂಲವಾಗಲಿ ಎಂದು ಈ ನಿರ್ಧಾರ ಸರ್ಕಾರ ಕೈಗೊಂಡಿದೆ

ಎಲ್ಲಾ ಚೆಕ್ ಡ್ಯಾಮ್ ಹಾಗೂ ಕೆರೆಗಳು ತುಂಬುವ ವಿಶ್ವಾಸವಿದೆ

Profile Ashok Nayak Jul 17, 2025 12:41 AM

ಶಿರಾ: ಗ್ರಾಮ ದೇವತೆ ಮಾರಮ್ಮ ದೇವಿಯ ಆಶೀರ್ವಾದದಿಂದ ಈ ವರ್ಷ ಉತ್ತಮ ಮಳೆಯಾಗು ತ್ತಿದ್ದು, ತಾಲೂಕಿನ ಎಲ್ಲಾ ಚೆಕ್ ಡ್ಯಾಮ್ ಹಾಗೂ ಎಲ್ಲಾ ಕೆರೆಗಳು ತುಂಬುವ ವಿಶ್ವಾಸವಿದೆ ಎಂದು ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಹಾಗೂ ಶಾಸಕ ಟಿಬಿ ಜಯಚಂದ್ರ ತಿಳಿಸಿದರು.

ಅವರು ಜು.16ರ ಬುಧವಾರದಂದು ದೊಡ್ಡ ಮಾರಮ್ಮನ  ಹಬ್ಬದ ಪ್ರಯುಕ್ತ ಶಿರಾ ಕೋಟೆ ಮಾರಮ್ಮನ ದೇವಸ್ಥಾನದಲ್ಲಿ ನಡೆದ ಆರತಿ ಉತ್ಸವದಲ್ಲಿ ಪಾಲ್ಗೊಂಡು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ನಂತರ ಮಾತನಾಡಿದರು.

ಮಾರಮ್ಮನ ಗುಡಿಯ ಪಕ್ಕದಲ್ಲಿರುವ ಜಾಗದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚ ಮಾಡಿ ಸಮುದಾಯ ಭವನವನ್ನು ನಗರಸಭೆ ವತಿಯಿಂದ ನಿರ್ಮಿಸಲಾಗುತ್ತಿದೆ, ಈ ಭಾಗದಲ್ಲಿ ಬಡವರ ಸಂಖ್ಯೆಹೆಚ್ಚಾಗಿರುವ ಕಾರಣ ಶುಭ ಕಾರ್ಯಗಳಿಗೆ ಅನುಕೂಲವಾಗಲಿ ಎಂದು ಈ ನಿರ್ಧಾರ ಸರ್ಕಾರ ಕೈಗೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: SIRA (Tumkur) News: ಕಾಡುಗೊಲ್ಲ ಸಮುದಾಯ ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಬದ್ಧ: ಟಿಬಿ ಜಯಚಂದ್ರ

ಐದು ವರ್ಷಗಳಿಗೊಮ್ಮೆ ನಡೆಯುವ ದೊಡ್ಡ  ಮಾರಮ್ಮನ ದೇವಸ್ಥಾನದ ಆರತಿ ಉತ್ಸವವನ್ನು ಶಿರಾ ನಗರದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಬೆಳಿಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮಹಿಳೆಯರು ಹಾಗೂ ಯುವತಿಯರು ಆರತಿ ಪೂಜೆ ಸಲ್ಲಿಸಿದರು.

ವಿಧಾನ ಪರಿಷತ್ ಶಾಸಕ ಚಿದಾನಂದ ಗೌಡ, ಮಾಜಿ ಶಾಸಕ ರಾಜೇಶ್ ಗೌಡ, ನಗರ ಸಭೆ ಅಧ್ಯಕ್ಷ ಜಿಶಾನ್ ಮಹಮ್ಮದ್, ನಗರಸಭೆ ಆಯುಕ್ತ ರುದ್ರೇಶ್, ಕಾಂಗ್ರೆಸ್ ಪಕ್ಷದ ಮುಖಂಡ ಸಂತೋಷ್ ಜಯಚಂದ್ರ, ನಗರಸಭೆ ಸದಸ್ಯರುಗಳಾದ ರಫಿ, ಉಮಾ ವಿಜಯರಾಜ್, ಕೋಟೆ ಲೋಕೇಶ್, ಕಾಂಗ್ರೆಸ್ ಯುವ ಮುಖಂಡ ಅಂಜನ್ ಕುಮಾರ್, , ನಗರ ಸಭೆ ಸದಸ್ಯರುಗಳು ಹಾಗೂ ವಿವಿಧ ಪಕ್ಷಗಳ ಮುಖಂಡರುಗಳು ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.