Vishwavani Editorial: ಜಿಎಸ್‌ಟಿ ಹೊರೆ ಇಳಿಸಲಿ
ಪೂರ್ಣ ಪ್ರಮಾಣದ ಅವಧಿ ವಿಮಾ ಯೋಜನೆಗಳ ಮೇಲೆ ಜಿಎಸ್‌ಟಿ ರದ್ದುಗೊಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆ ಕಳೆದ ವರ್ಷ ಡಿಸೆಂಬರ್ 2024ರಲ್ಲಿ ನಡೆದಿತ್ತು. ಅಂದಿನಿಂದಲೂ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಬೇಕು ಎಂಬ ಬೇಡಿಕೆ ಇತ್ತು.


ಇನ್ನೆರಡು ವಾರಗಳಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿಯ 56ನೇ ಸಭೆ ಅತ್ಯಂತ ಮಹತ್ವ ದ್ದಾಗಿದೆ. ಈ ಸಭೆಯಲ್ಲಿ ಎಲ್ಲ ವರ್ಗದ ಉತ್ಪನ್ನಗಳ ಜಿಎಸ್‌ಟಿ ದರಗಳನ್ನು ಮರು ಪರಿಶೀಲಿಸ ಲಾಗುವುದು ಎಂದು ನಿರೀಕ್ಷಿಸಲಾಗಿದೆ. ಮುಖ್ಯವಾಗಿ ಜಿಎಸ್‌ಟಿ ದರಗಳಲ್ಲಿ 12 ಪ್ರತಿಶತ ಸ್ಲ್ಯಾಬ್ ತೆಗೆದುಹಾಕುವ ಸಾಧ್ಯತೆಯಿದೆ. ಎಸಿ ಮತ್ತು ಟ್ರ್ಯಾಕ್ಟರ್‌ಗಳು ಸೇರಿದಂತೆ ಹಲವು ಉತ್ಪನ್ನಗಳ ಮೇಲಿನ ಜಿಎಸ್‌ಟಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಪೂರ್ಣ ಪ್ರಮಾಣದ ಅವಧಿ ವಿಮಾ ಯೋಜನೆಗಳ ಮೇಲೆ ಜಿಎಸ್‌ಟಿ ರದ್ದುಗೊಳಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿದೆ. ಜಿಎಸ್‌ಟಿ ಕೌನ್ಸಿಲ್‌ನ 55ನೇ ಸಭೆ ಕಳೆದ ವರ್ಷ ಡಿಸೆಂಬರ್ 2024ರಲ್ಲಿ ನಡೆದಿತ್ತು. ಅಂದಿನಿಂದಲೂ ಜಿಎಸ್‌ಟಿ ದರಗಳನ್ನು ತರ್ಕಬದ್ಧಗೊಳಿಸಬೇಕು ಎಂಬ ಬೇಡಿಕೆ ಇತ್ತು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಈ ಬಾರಿ ಈ ಸಂಬಂಧ ಒಂದಷ್ಟು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: Vishwavani Editorial: ಮೂಗನ್ನು ಹಿಡಿದಾಗ ತೆರೆದ ಬಾಯಿ!
ಆರೋಗ್ಯ ಮತ್ತು ಶುದ್ಧ ಇಂಧನದ ಹೆಸರಿನಲ್ಲಿ ಸೆಸ್ ಸಂಗ್ರಹಿಸುವ ಸಾಧ್ಯತೆಯಿದೆ. ಇಲ್ಲಿಯವರೆಗೆ 12 ಪ್ರತಿಶತ ಸ್ಲ್ಯಾಬ್‌ನಲ್ಲಿರುವ ಅನೇಕ ಸರಕುಗಳು ಮತ್ತು ಉತ್ಪನ್ನಗಳನ್ನು 5 ಪ್ರತಿಶತ ಅಥವಾ 18 ಪ್ರತಿಶತ ಸ್ಲ್ಯಾಬ್‌ಗಳಲ್ಲಿ ಸೇರಿಸುವ ಪ್ರಸ್ತಾಪವಿದೆ. ಆದರೆ ಮೂಲ ಸೌಕರ‍್ಯಗಳಿಗೆ ಬಳಸುವ ಅನೇಕ ಉತ್ಪನ್ನಗಳ ಜಿಎಸ್‌ಟಿ ದರವನ್ನು ಇಳಿಸಬೇಕಾದ ತುರ್ತು ಅಗತ್ಯವಿದೆ.
ಸದ್ಯ ನಿರ್ಮಾಣ ಚಟುವಟಿಕೆಯ ಅಗತ್ಯ ಮೂಲವಸ್ತು ಆಗಿರುವ ಸಿಮೆಂಟ್ ಮೇಲೆ ಶೇ 28ರಷ್ಟು ಜಿಎಸ್‌ಟಿ ದರವಿದೆ. ಇದೇ ರೀತಿ ಕಬ್ಬಿಣ ಮತ್ತು ಉಕ್ಕಿನ ಉತ್ಪನ್ನಗಳು, ವೈರಿಂಗ್ ಮತ್ತು ವಿದ್ಯುತ್ ಫಿಟ್ಟಿಂಗ್‌ಗಳು, ಸೆರಾಮಿಕ್ ಉತ್ಪನ್ನಗಳು, ಶೌಚಾಲಯ ಸಾಮಗ್ರಿಗಳ ಮೇಲೆ ಶೇ. 18ರಿಂದ 28ರ ತನಕ ಜಿಎಸ್‌ಟಿ ವಿಽಸಲಾಗುತ್ತಿದೆ. ದೇಶದ ಪ್ರತಿಯೊಬ್ಬರಿಗೂ ಸೂರು ಕೊಡಿಸಬೇಕಾದ ಸರಕಾರ ಮನೆ ಕಟ್ಟುವವರ ಭಾರವನ್ನು ಇಳಿಸುವ ಅಗತ್ಯವಿದೆ.