ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ ಗುಣಮಟ್ಟ, ಸುರಕ್ಷತೆಯ ಕಣ್ಗಾವಲು ಸಂಸ್ಥೆ : ಸುಷ್ಮಾ ರಾವ್ ಮಂತ್ರಾಡಿ

ಬಿಐಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಸುಷ್ಮಾ ರಾವ್ ಮಂತ್ರಾಡಿ ಮಾತನಾಡಿ, ಬಿಐಎಸ್ನ ಸಾರ್ವಜನಿಕ ಸೇವೆಗಳು ಮತ್ತು ಉತ್ಪನ್ನಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಎಲ್ಲಾ ಹಂತಗಳಲ್ಲಿ ಬಿಐಎಸ್ ಕಣ್ಗಾವಲು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬಿಐಎಸ್ ಪಾತ್ರ ಅತ್ಯಂತ ನಿರ್ಣಾಯಕ ಎಂದರು.

ಗುಣಮಟ್ಟ, ಸುರಕ್ಷತೆಯ ಕಣ್ಗಾವಲು ಸಂಸ್ಥೆ ಬಿ.ಐ.ಎಸ್

Profile Ashok Nayak Jul 17, 2025 12:11 PM

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಿಗೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಸ್ – ಬಿಐಎಸ್ ಬೆಂಗಳೂರು ಶಾಖೆಯಿಂದ ಕಾಸಿಯ ಸಭಾಂಗಣದಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಮಹಿಳೆಯರು ಮತ್ತು ಮಕ್ಕಳ ಆರೈಕೆಗೆ ಸಂಬಂಧಿಸಿದ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡ ಗಳ ಅರಿವು ಮತ್ತು ತಿಳುವಳಿಕೆಯನ್ನು ಹೆಚ್ಚಿಸಲು ಸೂಕ್ತ ಮಾಹಿತಿ ನೀಡಲಾಯಿತು.

ಬಿಐಎಸ್ ಬೆಂಗಳೂರು ವಿಭಾಗದ ಮುಖ್ಯಸ್ಥರು ಮತ್ತು ನಿರ್ದೇಶಕರಾದ ಸುಷ್ಮಾ ರಾವ್ ಮಂತ್ರಾಡಿ ಮಾತನಾಡಿ, ಬಿಐಎಸ್ನ ಸಾರ್ವಜನಿಕ ಸೇವೆಗಳು ಮತ್ತು ಉತ್ಪನ್ನಗಳಲ್ಲಿ ಗುಣಮಟ್ಟ, ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ಎಲ್ಲಾ ಹಂತಗಳಲ್ಲಿ ಬಿಐಎಸ್ ಕಣ್ಗಾವಲು ರೀತಿಯಲ್ಲಿ ಕೆಲಸ ಮಾಡುತ್ತಿದೆ. ಬಿಐಎಸ್ ಪಾತ್ರ ಅತ್ಯಂತ ನಿರ್ಣಾಯಕ ಎಂದರು.

ಇದನ್ನೂ ಓದಿ: Roopa Gururaj Column: ಭಗವದ್ಗೀತೆಯಂಥ ಧರ್ಮಗ್ರಂಥಗಳನ್ನು ಏಕೆ ಓದಬೇಕು ?

ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಮಾತನಾಡಿ, ಈ ಕಾರ್ಯಕ್ರಮ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ದೈನಂದಿನ ಕಾರ್ಯಾಚರಣೆಗಳಲ್ಲಿ ಗುಣಮಟ್ಟದ ಮಾನದಂಡಗಳನ್ನು ಸಂಯೋಜಿಸಲು ಅಗತ್ಯವಾದ ಜ್ಞಾನ ಮತ್ತು ಸಾಧನಗಳೊಂದಿಗೆ ಸಬಲೀಕರಣಗೊಳಿಸುವ ಗುರಿ ಹೊಂದಿದೆ. ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಮ್ಲಾ ಇಕ್ಬಾಲ್ ಅವರು ಈ ನಿಟ್ಟಿನಲ್ಲಿ ನಮಗೆ ಸೂಕ್ತ ಸಹಕಾರ ನೀಡುತ್ತಿದ್ದಾರೆ. ದೈನಂದಿನ ಕೆಲಸದಲ್ಲಿ ಗುಣಮಟ್ಟದ ಪ್ರಜ್ಞೆ ಹೆಚ್ಚಿಸಲು, ಅಂತಿಮವಾಗಿ ಸಾರ್ವಜನಿಕರಿಗೆ ಪ್ರಯೋಜನ ವಾಗುವಂತೆ ಅನುಷ್ಠಾನಗೊಳಿಸಬೇಕೆಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನಿರ್ದೇಶಕ ರಾಘವೇಂದ್ರ ಟಿ ಮಾತನಾಡಿ, ಇಲಾಖೆ ವ್ಯಾಪ್ತಿಯ ಉತ್ಪನ್ನಗಳು, ಸೇವೆಗಳಲ್ಲಿ ಗುಣಮಟ್ಟ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವುದು ನಿರ್ಣಾಯಕವಾಗಿದೆ. ಶಿಶು ಪೋಷಣೆ, ಆಹಾರ ಬಾಟಲಿಗಳು, ಆಟಿಕೆಗಳ ಸುರಕ್ಷತೆ ಮತ್ತು ಅಡುಗೆ ಪಾತ್ರೆಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಬಿಐಎಸ್ ಮಾನದಂಡಗಳನ್ನು ಅನುಸರಿಸಬೇಕು ಎಂದರು.

ಬೆಂಗಳೂರಿನ ಬಿಐಎಸ್ನ ಜಂಟಿ ನಿರ್ದೇಶಕ ಕರೀಮ್ ರಾಜಶೇಖರ್ ಮಾತನಾಡಿ, ಸೇವಾ ಗುಣಮಟ್ಟ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಸುಧಾರಿಸಲು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾನದಂಡ ಗಳನ್ನು ಅಳವಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಬಿಐಎಸ್ನ ಜಂಟಿ ನಿರ್ದೇಶಕರಾದ ಪ್ರೇಮಲತಾ ಸಿನ್ಹಾ, ವಿಷಯ ತಜ್ಞರಾದ ಡಾ.ಎಸ್.ಪ್ರೆಸಿಲಾ ಡೈಸಿ ಮತ್ತು ಡಾ. ಮಾಣಿಕ್ಕಂ ತಮಿಳುಸೆಲ್ವಿ ಅವರು ಮಕ್ಕಳ ಆರೈಕೆಗಾಗಿ ವೈದ್ಯಕೀಯ ಸಾಧನಗಳು ಮತ್ತು ವೈದ್ಯಕೀಯ ಜವಳಿ ಉತ್ಪನ್ನಗಳ ಕುರಿತು ಮಾಹಿತಿ ನೀಡಿದರು.

ತರಬೇತಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ 60 ಕ್ಕೂ ಹೆಚ್ಚು ಅಧಿಕಾರಿಗಳು ಭಾಗವಹಿಸಿದ್ದರು. ಚರ್ಚೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಕ್ಷೇತ್ರಮಟ್ಟದ ಅನುಭವಗಳನ್ನು ಹಂಚಿಕೊಂಡರು.

ಗುಣಮಟ್ಟ ಮತ್ತು ಪ್ರಮಾಣೀಕರಣದ ಸಂಸ್ಕೃತಿಯನ್ನು ಬೆಳೆಸುವ ತನ್ನ ನಿರಂತರ ಬದ್ಧತೆಯನ್ನು ಬಿಐಎಸ್ ಪ್ರತಿಬಿಂಬಿಸುತ್ತದೆ. ಈ ಪ್ರಯತ್ನದ ಭಾಗವಾಗಿ, ಎರಡನೇ ಸಾಮರ್ಥ್ಯ ನಿರ್ಮಾಣ ಕಾರ್ಯಕ್ರಮವನ್ನು ಜು.18, ರಂದು ಮೈಸೂರಿನ ಹೋಟೆಲ್ ಮಯೂರದಲ್ಲಿ ಆಯೋಜಿಸಲಾಗಿದೆ.