ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepti Sharma: ಪಂತ್‌ ಅವರಂತೆ ಒನ್ ಹ್ಯಾಂಡ್ ಸಿಕ್ಸರ್‌ ಬಾರಿಸಿದ ದೀಪ್ತಿ ಶರ್ಮ; ಇಲ್ಲಿದೆ ವಿಡಿಯೊ

Deepti Sharm aone-handed six: ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವುನಿ ರುವಾರಿಯಾಗಿದ್ದ ದೀಪ್ತಿ ಪಂದ್ಯದಲ್ಲಿ ಒಂದೇ ಕೈಯಲ್ಲಿ ಸಿಕ್ಸರ್‌ ಬಾರಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ಈ ಸಿಕ್ಸರ್‌ಗೆ ಪಂತ್‌ ಅವರು ಸ್ಫೂರ್ತಿ ಎಂದು ಹೇಳುವ ಮೂಲಕ ತಮ್ಮ ಸಿಕ್ಸರ್‌ ಸಾಧನೆಯನ್ನು ಪಂತ್‌ಗೆ ಅರ್ಪಿಸಿದ್ದಾರೆ. ಪಂತ್‌ ಅವರಂತೆ ದೀಪ್ತಿ ಕೂಡ ಎಡಗೈ ಬ್ಯಾಟರ್‌ ಎಂಬುದು ವಿಶೇಷ.

ಪಂತ್‌ ಅವರಂತೆ ಒನ್ ಹ್ಯಾಂಡ್ ಸಿಕ್ಸರ್‌ ಬಾರಿಸಿದ ದೀಪ್ತಿ ಶರ್ಮ

Profile Abhilash BC Jul 17, 2025 3:09 PM

ಲಂಡನ್‌: ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ರಿಷಭ್‌ ಪಂತ್‌(Rishabh Pant) ಅವರು ಒನ್ ಹ್ಯಾಂಡ್ ಸಿಕ್ಸ್(ಒಂದೇ ಕೈಯಲ್ಲಿ ಸಿಕ್ಸರ್‌) ಬಾರಿಸುವುದರಲ್ಲಿ ನಿಸ್ಸೀಮ. ಇದೀಗ ಪಂತ್‌ ಅವರಿಂದ ಸ್ಫೂರ್ತಿ ಪಡೆದ ಭಾರತ ಮಹಿಳಾ ತಂಡದ ಆಲ್‌ರೌಂಡರ್‌ ದೀಪ್ತಿ ಶರ್ಮ(Deepti Sharma) ಕೂಡ ಒನ್ ಹ್ಯಾಂಡ್ ಸಿಕ್ಸರ್‌ ಬಾರಿಸಿ ಮಿಂಚಿದ್ದಾರೆ. ಅವರ ಸಿಕ್ಸರ್‌ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(viral video) ಆಗಿದೆ.

ಇಂಗ್ಲೆಂಡ್‌ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ಗೆಲುವುನಿ ರುವಾರಿಯಾಗಿದ್ದ ದೀಪ್ತಿ ಪಂದ್ಯದಲ್ಲಿ ಒಂದೇ ಕೈಯಲ್ಲಿ ಸಿಕ್ಸರ್‌ ಬಾರಿಸಿದ್ದರು. ಪಂದ್ಯ ಮುಕ್ತಾಯದ ಬಳಿಕ ಈ ಸಿಕ್ಸರ್‌ಗೆ ಪಂತ್‌ ಅವರು ಸ್ಫೂರ್ತಿ ಎಂದು ಹೇಳುವ ಮೂಲಕ ತಮ್ಮ ಸಿಕ್ಸರ್‌ ಸಾಧನೆಯನ್ನು ಪಂತ್‌ಗೆ ಅರ್ಪಿಸಿದ್ದಾರೆ. ಪಂತ್‌ ಅವರಂತೆ ದೀಪ್ತಿ ಕೂಡ ಎಡಗೈ ಬ್ಯಾಟರ್‌ ಎಂಬುದು ವಿಶೇಷ.



"ನಾನು ಅಭ್ಯಾಸದಲ್ಲಿ ಈ ಹೊಡೆತಗಳನ್ನು (ಒಂದು ಕೈಯಿಂದ ಸಿಕ್ಸ್) ಆಡಿದ್ದೇನೆ. ಆ ಹೊಡೆತವನ್ನು ನಾನು ರಿಷಭ್ ಪಂತ್ ಅವರಿಂದ ಕಲಿತಿದ್ದೇನೆ" ಎಂದು ದೀಪ್ತಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ನಂತರ ಹೇಳಿದರು.

ಭಾರತದ ಯಶಸ್ವಿ ರನ್ ಚೇಸಿಂಗ್‌ನ 38 ನೇ ಓವರ್‌ನಲ್ಲಿ ವೇಗಿ ಲಾರೆನ್ ಬೆಲ್ ಎಸೆದ ಲೆಂಗ್ತ್ ಬಾಲ್ ಅನ್ನು ದೀಪ್ತಿ ಡೀಪ್ ಮಿಡ್‌ವಿಕೆಟ್ ಮೂಲಕ ಒಂದೇ ಕೈಯಲ್ಲಿ ಸಿಕ್ಸರ್‌ ಬಾರಿಸಿದರು. ಪಂದ್ಯದಲ್ಲಿ ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರ ಅವರು 64 ಎಸೆತಗಳಲ್ಲಿ 62 ರನ್ ಗಳಿಸಿದರು. ಅವರ ಈ ಅಮೂಲ್ಯ ಬ್ಯಾಟಿಂಗ್‌ನಿಂದ ಭಾರತ 259 ರನ್‌ಗಳ ಗುರಿಯನ್ನು ತಲುಪಲು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಸಹಾಯ ಮಾಡಿತು.

ಬುಧವಾರ ರಾತ್ರಿ ನಡೆದಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್ ಸೋಫಿಯಾ ಡಂಕ್ಲಿ ಮತ್ತು ಅಲೈಸ್‌ ಡೇವಿಡ್‌ಸನ್‌ ರಿಚರ್ಡ್ಸ್‌ ಅವರ ಶತಕದ‌ ಜತೆಯಾಟದಿಂದಾಗಿ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 258 ರನ್ ಗಳಿಸಿತು. ಅದಕ್ಕುತ್ತರವಾಗಿ ಬ್ಯಾಟಿಂಗ್‌ ನಡೆಸಿದ ಭಾರತ ತಂಡವು 48.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 262 ರನ್ ಗಳಿಸಿ ಗೆಲುವು ತನ್ನದಾಗಿಸಿಕೊಂಡಿತು.