ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attacks: ಛೇ ಎಂತಾ ದುರ್ವಿಧಿ...!; ಊಟಕ್ಕೆಂದು ಕುಳಿತಾಗಲೇ ಹೃದಯಾಘಾತದಿಂದ ಪ್ರಾಣ ಬಿಟ್ಟ ಬಾಲಕಿ

ರಾಜಸ್ಥಾನದ ಸಿಕರ್ ಜಿಲ್ಲೆಯ ಆದರ್ಶ ವಿದ್ಯಾ ಮಂದಿರ ಶಾಲೆಯಲ್ಲಿ 9 ವರ್ಷದ ಬಾಲಕಿಯೊಬ್ಬಳು ಊಟದ ಬಾಕ್ಸ್ ತೆರೆಯುತ್ತಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಬಾಲಕಿ, ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಲೆಯ ಊಟದ ವಿರಾಮದ ಸಂದರ್ಭದಲ್ಲಿ ಬಾಕ್ಸ್‌ ಓಪನ್ ಮಾಡುವಾಗ ಘಟನೆ ನಡೆದಿದೆ.

ಊಟಕ್ಕೆ ಕುಳಿತಲ್ಲೇ ಪುಟ್ಟ ಕಂದಮ್ಮನ ಪ್ರಾಣ ಪಕ್ಷಿ ಹಾರಿಹೋಯ್ತು!

Profile Sushmitha Jain Jul 17, 2025 5:31 PM

ಸಿಕರ್: ರಾಜಸ್ಥಾನದ (Rajasthan) ಸಿಕರ್ (Sikar) ಜಿಲ್ಲೆಯ ಆದರ್ಶ ವಿದ್ಯಾ ಮಂದಿರ ಶಾಲೆಯಲ್ಲಿ 9 ವರ್ಷದ ಬಾಲಕಿಯೊಬ್ಬಳು ಊಟದ ಬಾಕ್ಸ್ ತೆರೆಯುತ್ತಿದ್ದ ವೇಳೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 4ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಈ ಬಾಲಕಿ, ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಶಾಲೆಯ ಊಟದ ವಿರಾಮದ ಸಂದರ್ಭದಲ್ಲಿ ಬಾಕ್ಸ್‌ ಓಪನ್ ಮಾಡುವಾಗ ಘಟನೆ ನಡೆದಿದೆ. ಶಾಲೆಯ ಪ್ರಾಂಶುಪಾಲ ನಂದಕಿಶೋರ್ ಪ್ರಕಾರ, ಎಲ್ಲ ವಿದ್ಯಾರ್ಥಿಗಳು ತರಗತಿಯೊಳಗೆ ಊಟ ಮಾಡುತ್ತಿದ್ದಾಗ, ಬಾಲಕಿ ತನ್ನ ಊಟದ ಡಬ್ಬವನ್ನು ತೆರೆಯುವಾಗ ಆಕಸ್ಮಿಕವಾಗಿ ಪ್ರಜ್ಞೆ ತಪ್ಪಿ ಕುಸಿದುಬಿದ್ದಿದ್ದಾಳೆ.

“ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಘಟನೆ ಸಂಭವಿಸಿತು. ಆಕೆ ಊಟದ ಡಬ್ಬವನ್ನು ಕೈಗೆ ತೆಗೆದುಕೊಂಡಾಗ ಕುಸಿದು, ಆಹಾರ ನೆಲಕ್ಕೆ ಚೆಲ್ಲಿತು. ನಾವೆಲ್ಲರೂ ಶಾಲಾ ಆವರಣದಲ್ಲಿದ್ದೆವು. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕೊಂಡುಹೋದ್ವಿ” ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಶಾಲೆಯಲ್ಲಿ ಮಕ್ಕಳು ಪ್ರಜ್ಞೆ ತಪ್ಪುವುದು ಅಪರೂಪವಲ್ಲ ಎಂದವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral Video: ಆಸ್ಪತ್ರೆಯಿಂದ ನೇರ ಪರಲೋಕಕ್ಕೆ! ಐಸಿಯುನಲ್ಲೇ ನಡೀತು ಶೂಟೌಟ್‌-ರೌಡಿ ಶೀಟರ್‌ನ ಬರ್ಬರ ಹತ್ಯೆ!

ಶಾಲಾ ಸಿಬ್ಬಂದಿ ಪ್ರಜ್ಞೆ ತಪ್ಪಿದ ಬಾಲಕಿಯನ್ನು ತಕ್ಷಣ ದಂತರಾಮಗಢ ಸಮುದಾಯ ಆರೋಗ್ಯ ಕೇಂದ್ರಕ್ಕೆ (CHC) ಕೊಂಡೊಯ್ದರು. ವೈದ್ಯರು ಆರಂಭಿಕ ಚಿಕಿತ್ಸೆ ನೀಡಿ, ಮುಂದಿನ ಚಿಕಿತ್ಸೆಗಾಗಿ ಸಿಕರ್‌ನ ಎಸ್‌ಕೆ ಆಸ್ಪತ್ರೆಗೆ ರವಾನಿಸಲು ನಿರ್ಧರಿಸಿದರು. ಆದರೆ, ಆಂಬುಲೆನ್ಸ್‌ಗೆ ಸ್ಥಳಾಂತರಿಸುವಾಗ ಬಾಲಕಿಗೆ ಮತ್ತೊಂದು ಹೃದಯಾಘಾತ ಸಂಭವಿಸಿ, ಸ್ಥಳದಲ್ಲೇ ಸಾವನ್ನಪ್ಪಿದಳು.

ಈ ಘಟನೆಯು ಶಾಲೆಯ ಆಡಳಿತ ಮಂಡಳಿ ಮತ್ತು ಕುಟುಂಬದವರನ್ನು ಆಘಾತಕ್ಕೆ ಒಡ್ಡಿದೆ. ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಘಟನೆಯ ಕಾರಣಗಳ ಕುರಿತು ತನಿಖೆ ಆರಂಭಿಸಿದ್ದಾರೆ. ಈ ದುರಂತವು ಶಾಲೆಗಳಲ್ಲಿ ಮಕ್ಕಳ ಆರೋಗ್ಯ ಮೇಲ್ವಿಚಾರಣೆಯ ಮಹತ್ವವನ್ನು ಎತ್ತಿ ತೋರಿಸಿದೆ.