ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muthappa Rai: ಮುತ್ತಪ್ಪ ರೈ ಮಗನ ಹತ್ಯೆಗೆ ಮಾಜಿ ಪತ್ನಿಯೇ ಸ್ಕೆಚ್‌ ಹಾಕಿದಳಾ? ಮೂವರ ಮೇಲೆ ದೂರು

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಮಾಡಿದ್ದು ಯಾರು, ಯಾಕೆ ಎನ್ನುವ ಪ್ರಶ್ನೆ ಮೂಡಿದೆ. ರಿಕ್ಕಿ ರೈ ಸಾಕಷ್ಟು ರಿಯಲ್ ಎಸ್ಟೇಟ್ ಡೀಲಿಂಗ್‌ ನಡೆಸುತ್ತಿದ್ದು, ಸಂಚಿನ ಹಿಂದೆ ರಿಯಲ್‌ ಎಸ್ಟೇಟ್‌ ಮಾಫಿಯಾ ಇರುವ ಶಂಕೆ ಮೂಡಿದೆ. ಜಮೀನು ವಿಚಾರಕ್ಕೆ ಈ ಹಿಂದೆ ಕೆಲವು ವಿವಾದಗಳಾಗಿದ್ದವು. ಪ್ರತಿಸ್ಪರ್ಧಿಗಳ ಮೇಲೂ ಶಂಕೆ ಇದೆ.

ಮುತ್ತಪ್ಪ ರೈ ಮಗನ ಹತ್ಯೆಗೆ ಮಾಜಿ ಪತ್ನಿಯದೇ ಸ್ಕೆಚ್‌? ಮೂವರ ಮೇಲೆ ದೂರು

ರಿಕ್ಕಿ ರೈ

ಹರೀಶ್‌ ಕೇರ ಹರೀಶ್‌ ಕೇರ Apr 19, 2025 9:59 AM

ಬೆಂಗಳೂರು: ಮಾಜಿ ಡಾನ್​​ ಮುತ್ತಪ್ಪ ರೈ (Muthappa Rai) ಕಿರಿಯ ಪುತ್ರ ರಿಕ್ಕಿ ರೈ (Rikcy Rai) ಮೇಲೆ ನಿನ್ನೆ ರಾತ್ರಿ ಫೈರಿಂಗ್ (firing) ನಡೆದಿದ್ದು, ಹತ್ಯೆ ಸಂಚಿನ ಹಿಂದೆ ರಿಕ್ಕಿ ರೈಯ ಮಾಜಿ ಪತ್ನಿಯೇ ಇದ್ದಾಳಾ ಎಂಬ ದಟ್ಟ ಅನುಮಾನ ಮೂಡಿದೆ. ರಿಕ್ಕಿ ಮೇಲೆ ನಡೆದ ಫೈರಿಂಗ್​ಗೆ (shoot out) ಸಂಬಂಧಿಸಿದಂತೆ ಕಾರು ಚಾಲಕ ಬಸವರಾಜು ಅವರು ಬಿಡದಿ (Ramanagara) ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಗುಂಡಿನ ದಾಳಿಯಲ್ಲಿ ಮೂವರ ಕೈವಾಡ ಇರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ರಿಕ್ಕಿ ರೈನ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ಎಂಬವರ ವಿರುದ್ಧ ದೂರು ದಾಖಲಾಗಿದೆ.

ರಾಮನಗರ ತಾಲೂಕಿನ ಬಿಡದಿಯ (Bidadi) ಮುತ್ತಪ್ಪ ರೈ ಮನೆ ಬಳಿ ಫೈರಿಂಗ್ ನಡೆದಿದೆ. ರಿಕ್ಕಿ ರೈ ಬೆಂಗಳೂರಿಗೆ ಕಾರಿನಲ್ಲಿ ಹೊರಟಿದ್ದ ವೇಳೆ ದುಷ್ಕರ್ಮಿಗಳು ಗುರಿಯಿಟ್ಟು ಫೈರಿಂಗ್ ಮಾಡಿದ್ದಾರೆ. ಗಾಯಗೊಂಡ ಮುತ್ತಪ್ಪ ರೈ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಕಿ ರೈಗೆ ಎಚ್ಎಎಲ್ ರಸ್ತೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಿಕ್ಕಿ ಸದ್ಯ ಐಸಿಯುನಲ್ಲಿದ್ದು, ಮೂಗಿಗೆ ಗಾಯವಾಗಿದೆ. ಮೂಗಿನ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಿಕ್ಕಿ ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುಂಡೇಟಿನಿಂದ ಮುತ್ತಪ್ಪ ರೈ ಮಗ ಜಸ್ಟ್ ಮಿಸ್ ಆಗಿದ್ದಾರೆ. ಮನೆಯಿಂದ ಗಾಡಿ ಹೊರ ಬರುತ್ತಿದ್ದಂತೆಯೇ ಕಾರು ಸ್ಲೋ ಮಾಡಲು ರಿಕ್ಕಿ ರೈ ಚಾಲಕ ರಾಜುಗೆ ಹೇಳಿದ್ದರು. ಬ್ಯಾಗ್​ನಲ್ಲಿ ಏನೋ ತೆಗೆದುಕೊಳ್ಳಬೇಕು ಸ್ಲೋ ಮಾಡು ಎಂದಿದ್ದರಂತೆ. ರಿಕ್ಕಿ ಕಾರಿನ ಹಿಂಬದಿ ಸೀಟ್‌ನ ಬಲಭಾಗದಲ್ಲಿ ಕುಳಿತಿದ್ದರು. ಎಡಭಾಗದ ಸೀಟ್ ಕೆಳಗೆ ಇದ್ದ ಬ್ಯಾಗ್ ಕಡೆಗೆ ಬಾಗುತ್ತಿದ್ದಂತೆ ಗುಂಡಿನ ದಾಳಿ ನಡೆದಿದೆ.

ಈ ವೇಳೆ ಮೂಗು ಮತ್ತು ಭುಜಕ್ಕೆ ಗುಂಡು ತಾಗಿ ಪಾಸ್ ಆಗಿದ್ದು, ಜಸ್ಟ್ ಮಿಸ್ ಆಗಿದೆ. ರಿಕ್ಕಿ ಕುಳಿತ ಸೀಟ್ ಕಡೆಗೆ ಗುರಿಯಿಟ್ಟು ಫೈರಿಂಗ್ ಮಾಡಲಾಗಿದೆ. ಫೈರಿಂಗ್ ಸಂಬಂಧಿಸಿ ಪೊಲೀಸರು, ರಿಕ್ಕಿ ಚಾಲಕ ರಾಜು ವಿಚಾರಣೆ ನಡೆಸಿದ್ದಾರೆ. ಕಾರಿನಲ್ಲಿ ಒಟ್ಟು ಮೂವರು ಪ್ರಯಾಣಿಸುತ್ತಿದ್ದರು- ಚಾಲಕ ರಾಜು, ಒಬ್ಬ ಭದ್ರತಾ ಸಿಬ್ಬಂದಿ ಹಾಗೂ ರಿಕ್ಕಿ ರೈ. ಕಾರಿನ ಎಡಭಾಗದ ಮುಂಬದಿ ಸೀಟ್‌ನಲ್ಲಿ ಭದ್ರತಾ ಸಿಬ್ಬಂದಿ ಇದ್ದ. ಫೈರಿಂಗ್ ಮಾಡಿದ ಶೂಟರ್‌ಗಳಿಗೆ ತೀವ್ರ ಶೋಧ ನಡೆಸಲಾಗ್ತಿದೆ.

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಮಾಡಿದ್ದು ಯಾರು, ಯಾಕೆ ಎನ್ನುವ ಪ್ರಶ್ನೆ ಮೂಡಿದೆ. ರಿಕ್ಕಿ ರೈ ಸಾಕಷ್ಟು ರಿಯಲ್ ಎಸ್ಟೇಟ್ ಡೀಲಿಂಗ್‌ ನಡೆಸುತ್ತಿದ್ದು, ಸಂಚಿನ ಹಿಂದೆ ರಿಯಲ್‌ ಎಸ್ಟೇಟ್‌ ಮಾಫಿಯಾ ಇರುವ ಶಂಕೆ ಮೂಡಿದೆ. ಜಮೀನು ವಿಚಾರಕ್ಕೆ ಈ ಹಿಂದೆ ಕೆಲವು ವಿವಾದಗಳಾಗಿದ್ದವು. ಪ್ರತಿಸ್ಪರ್ಧಿಗಳ ಮೇಲೂ ಶಂಕೆ ಇದೆ.

ಶೂಟಿಂಗ್ ಆರೋಪಿ ಪತ್ತೆಗೆ ಸ್ಪೆಷಲ್ ಟೀಂ ರಚನೆ ಮಾಡಿದ್ದು, ನಾಲ್ಕು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ, ಹಳೇ ದ್ವೇಷ, ತಂದೆ ಮೇಲಿನ ವೈಷಮ್ಯ, ಹಣಕಾಸು ವಿಚಾರಗಳು ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಆರೋಪಿಗಳು ಸಾಕಷ್ಟು ಪ್ಲಾನ್ ಮಾಡಿ ಹೊಂಚು ಹಾಕಿ ಕಾದು ಕುಳಿತಿದ್ದರು. ಸ್ಥಳದಲ್ಲೇ ಬೇಸಿಕ್ ಮೊಬೈಲ್ ಫೋನ್ ಸಿಕ್ಕಿದೆ. ಅದರ ಟೆಕ್ನಿಕಲ್ ಅನಾಲಿಸಿಸ್ ನಡೆಸಲಾಗುತ್ತಿದೆ.

ಇದನ್ನೂ ಓದಿ: Muthappa Rai: ಮುತ್ತಪ್ಪ ರೈ ಪುತ್ರನ ಮೇಲೆ ಗುಂಡಿನ ದಾಳಿ, ಆಸ್ಪತ್ರೆಗೆ ದಾಖಲು