2025 French Open: ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೆ ಸೆಲೆಬ್ರಿಟಿಗಳ ಗ್ರ್ಯಾಂಡ್ ಎಂಟ್ರಿ
2025ರ ಫ್ರೆಂಚ್ ಓಪನ್ ಟೆನಿಸ್ ಪಂದ್ಯಕ್ಕೆ ಅನೇಕ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಕಾರ್ಲೋಸ್ ಅಲ್ಕರಾಜ್ ಮತ್ತು ಜಾನಿಕ್ ಸಿನ್ನರ್ ನಡುವೆ ಫೈನಲ್ ಪಂದ್ಯ ನಡೆಯಿತು. 5 ಗಂಟೆಗಿಂತ ದೀರ್ಘವಾಗಿ ನಡೆದ ಈ ಪಂದ್ಯದಲ್ಲಿ ಅಲ್ಕರಾಜ್ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದರು. ಈ ಫೈನಲ್ಸ್ ವಾರಾಂತ್ಯದಲ್ಲಿ ನಡೆದ ಕಾರಣ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

2025 French Open


ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಮ್ ಆದ್ಮಿ ಪಕ್ಷದ ರಾಜಕಾರಣಿ ರಾಘವ್ ಚಡ್ಡಾ ಪ್ರೀತಿಸಿ ವಿವಾಹವಾಗಿ ಎರಡು ವರ್ಷಗಳೇ ಕಳೆದಿದೆ. ಹಾಗಿದ್ದರೂ ಈಗಲೂ ನವದಂಪತಿಯಂತೆ ಅಲ್ಲಲ್ಲಿ ಸಾರ್ವಜನಿಕ ಸ್ಥಳಕ್ಕೆ ಇಬ್ಬರು ಜತೆಯಾಗಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಪರಿಣಿತಿ ಚೋಪ್ರಾ ಮತ್ತು ಅವರ ಪತಿ ರಾಘವ್ ಚಡ್ಡಾ ಫ್ರೆಂಚ್ ಓಪನ್ ಟೆನಿಸ್ ಪಂದ್ಯಕ್ಕೆ ಭಾಗಿಯಾಗಿದ್ದ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ನಟಿ ಪರಿಣಿತಿ ವೈಟ್ ಕಲರ್ ಮಾಡರ್ನ್ ಡ್ರೆಸ್ನಲ್ಲಿ ಮಿಂಚಿದ್ದಾರೆ. ಅವರ ಪತಿ ರಾಘವ ಚಡ್ಡಾ ಬಿಸಿನೆಸ್ ಮೆನ್ ಲುಕ್ನಲ್ಲಿ ಕಂಗೊಳಿಸಿದ್ದಾರೆ. ಫ್ರೀ ಹೇರ್ ಸ್ಟೈಲ್ ಲೈಟ್ ಮೇಕಪ್ನಲ್ಲಿ ನಟಿ ಪರಿಣಿತಿ ಗ್ಲಾಮರಸ್ ಆಗಿ ಅನೇಕ ಜನರ ಗಮನ ಸೆಳೆದಿದ್ದಾರೆ.

ಫ್ರೆಂಚ್ ಓಪನ್ 2025 ವಾರಾಂತ್ಯದ ಫೈನಲ್ನಲ್ಲಿ ಅಮೆರಿಕದ ನಟಿ ಲಿಲಿ ಕಾಲಿನ್ಸ್ ಮತ್ತು ಅವರ ಪತಿ ಚಾರ್ಲಿ ಮೆಕ್ ಡೊವೆಲ್ ಕೂಡ ಹಾಜರಿದ್ದರು. ನೆಟ್ಫ್ಲಿಕ್ಸ್ನಲ್ಲಿ ʼಎಮಿಲಿ ಇನ್ ಪ್ಯಾರಿಸ್ʼ ಎಂಬ ಸರಣಿ ಮೂಲಕ ಜನ ಮನ ಗೆದ್ದ ನಟಿ ಲಿಲಿ ಕಾಲಿನ್ಸ್ ಫ್ರೆಂಚ್ ಓಪನ್ ಟೆನ್ನಿಸ್ ಪಂದ್ಯಕ್ಕೆ ಗ್ಲಾಮರಸ್ ಲುಕ್ನಿಂದ ಕಂಗೊಳಿಸಿದ್ದಾರೆ.

ಇಸ್ರೇಲ್ ಮತ್ತು ಅಮೆರಿಕದ ಖ್ಯಾತ ನಟಿ, ಚಲನಚಿತ್ರ ನಿರ್ಮಾಪಕಿ ಮತ್ತು ನಿರ್ದೇಶಕಿನಟಾಲಿ ಪೋರ್ಟ್ಮ್ಯಾನ್ ಕೂಡ ಫ್ರೆಂಚ್ ಓಪನ್ ಫೈನಲ್ ಪಂದ್ಯಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವಿಶ್ವದ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾದ ಇವರು ಈ ಟೆನಿಸ್ ಪಂದ್ಯಕ್ಕೆ ಕ್ಯಾಶುವಲ್ ಔಟ್ ಫಿಟ್ನಲ್ಲಿ ಬಂದಿದ್ದರು. ಫ್ರೀ ಹೇರ್ ಸ್ಟೈಲ್ಗೆ ಹೊಂದಿಕೊಳ್ಳುವ ಕೂಲಿಂಗ್ ಗ್ಲಾಸ್ ಹಾಗೂ ಸನ್ ಹ್ಯಾಟ್ ಧರಿಸಿದ್ದರು.

ಫ್ಯಾರೆಲ್ ವಿಲಿಯಮ್ಸ್ ಮತ್ತು ಅವರ ಪತ್ನಿ ಹೆಲೆನ್ ಲಸಿಚಾನ್ ಕೂಡ ಫ್ರೆಂಚ್ ಓಪನ್ ಫೈನಲ್ಸ್ಗೆ ಆಗಮಿಸಿದ್ದರು. ಅಮೆರಿಕದ ಪ್ರಖ್ಯಾತ ಗಾಯಕ, ರ್ಯಾಪರ್, ಸಂಗೀತ ನಿರ್ಮಾಪಕ ಮತ್ತು ಫ್ಯಾಷನ್ ಡಿಸೈನರ್ ಆದ ಫ್ಯಾರೆಲ್ ವಿಲಿಯಮ್ಸ್ಗೆ ಪ್ರಪಂಚದಾದ್ಯಂತ ಅಭಿಮಾನಿಗಳಿದ್ದಾರೆ. ಅಷ್ಟೆಲ್ಲ ಫೇಮಸ್ ಆಗಿದ್ದರೂ ಅವರು ಸಾಮಾನ್ಯ ಔಟ್ ಫಿಟ್ನಲ್ಲಿ ಸಿಂಪಲ್ಲಾಗಿ ಇವರು ಹೈಲೈಟ್ ಆಗಿದ್ದಾರೆ.

ಅಮೆರಿಕ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ, ನಟರಾದ ಸ್ಪೈಕ್ ಲೀ ಕೂಡ ಅವರ ಪತ್ನಿ ಟೋನ್ಯಾ ಜತೆಗೆ ಫ್ರೆಂಚ್ ಓಪನ್ ಫೈನಲ್ಸ್ ಭಾಗಿಯಾಗಿದ್ದಾರೆ. ಗ್ರೀನ್ ಕಲರ್ ಪ್ಯಾಂಟ್, ಶರ್ಟ್ನಲ್ಲಿ ಸ್ಪೈಕ್ ಲೀ ಮಾಡರ್ನ್ ಲುಕ್ನಿಂದ ಗಮನ ಸೆಳೆದಿದ್ದರು. ಇನ್ನು ಅವರ ಪತ್ನಿ ಟೋನ್ಯಾ ವೈಟ್ ಕಲರ್ ನಿಲುವಂಗಿಯಲ್ಲಿ ಮಿಂಚಿದ್ದರು.

ಅಮೆರಿಕದ ಖ್ಯಾತ ನಟ ಡಸ್ಟಿನ್ ಹಾಫ್ಮನ್ ಕೂಡ ಫೈನಲ್ ಪಂದ್ಯದಲ್ಲಿ ಮಾಡರ್ನ್ ಲುಕ್ನಿಂದ ಕಂಗೊಳಿಸಿದ್ದಾರೆ. ʼವ್ಯಾಗ್ ದಿ ಡಾಗ್ʼ, ʼಲಿಟಲ್ ಬಿಗ್ ಮ್ಯಾನ್ʼ, ʼಮ್ಯಾರಥಾನ್ ಮ್ಯಾನ್ʼ ಮುಂತಾದ ಸಿನಿಮಾ ಮೂಲಕ ಜನ ಮನ ಗೆದ್ದ ಇವರು ಬ್ಲ್ಯಾಕ್ ಕಲರ್ ಔಟ್ ಫಿಟ್ನಲ್ಲಿ ಯಂಗ್ ಆಗಿ ಕಾಣಿಸಿಕೊಂಡಿದ್ದರು.

ಅಮೆರಿಕದ ಸಿನಿಮಾ ಹಾಗೂ ವೆಬ್ ಸೀರಿಸ್ ಮೂಲಕ ಫೇಮಸ್ ಆದ ನಟ ಟೇಲರ್ ಜಖರ್ ಪೆರೆಜ್ ಕೂಡ ಫ್ರೆಂಚ್ ಓಪನ್ ಫೈನಲ್ನಲ್ಲಿ ಭಾಗಿಯಾಗಿದ್ದರು. ಅಮೆರಿಕದ್ ಚಲನಚಿತ್ರ ನಿರ್ದೇಶಕ ಸ್ಪೈಕ್ ಲಿ ಸಾಥ್ ನೀಡಿದ್ದರು. ಟೇಲರ್ ಜಖರ್ ಪೆರೆಜ್ ಗ್ರೀನ್ ಕಲರ್ ವೆಸ್ಟರ್ನ್ ಔಟ್ ಲುಕ್ನಲ್ಲಿ ಹೆಚ್ಚು ಗ್ಲಾಮರಸ್ ಆಗಿ ಕಂಗೊಳಿಸಿದ್ದರು.