ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dance Bars: ಅಶ್ಲೀಲ ನೃತ್ಯ, ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸ್‌ ದಾಳಿ

dance bars: ಓವರ್ ಟೈಂ, ಯುವತಿಯರು ಅಶ್ಲೀಲ ಬಟ್ಟೆ ತೊಟ್ಟು ಡ್ಯಾನ್ಸ್ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಉಪ್ಪಾರಪೇಟೆ ಸುತ್ತಮುತ್ತ ಪೊಲೀಸರು ದಾಳಿ ನಡೆಸಿದರು. ನಿಯಮ ಉಲ್ಲಂಘಿಸಿದ ಡ್ಯಾನ್ಸ್ ಬಾರ್‌ಗಳ ಮೇಲೆ ಪ್ರಕರಣ ದಾಖಲಾಗಿದೆ.

ಬೆಂಗಳೂರಿನ 17ಕ್ಕೂ ಹೆಚ್ಚು ಡ್ಯಾನ್ಸ್‌ ಬಾರ್‌ಗಳ ಮೇಲೆ ಪೊಲೀಸ್‌ ದಾಳಿ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jun 20, 2025 7:28 AM

ಬೆಂಗಳೂರು : ನಿಯಮಗಳನ್ನು ಉಲ್ಲಂಘಿಸಿ ಯುವತಿಯರನ್ನು ಬಳಸಿಕೊಂಡು ತಡರಾತ್ರಿ ಅಶ್ಲೀಲ ನೃತ್ಯ (obscene dance) ಪ್ರದರ್ಶನಕ್ಕೆ ಅವಕಾಶ ನೀಡಿದ್ದ 17ಕ್ಕೂ ಹೆಚ್ಚು ಬಾರ್‌, ಪಬ್‌, ಕ್ಲಬ್‌ಗಳ ಮೇಲೆ (Dance bars) ಬೆಂಗಳೂರು ಪೊಲೀಸರು (police raid) ನಿನ್ನೆ ರಾತ್ರಿ ವ್ಯಾಪಕ ದಾಳಿ ನಡೆಸಿದ್ದಾರೆ. ಬೆಂಗಳೂರು ನಗರದ ಕ್ಲಬ್ ಒನ್, ರಂಬಾ, ಬ್ರಿಗೇಡ್ ಬ್ಲೂ ಸೇರಿದಂತೆ 17 ಕ್ಕೂ ಹೆಚ್ಚು ಡ್ಯಾನ್ಸ್ ಬಾರ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಪರಿಶೀಲನೆ ನಡೆಸಿದ್ದಾರೆ.

ಓವರ್ ಟೈಂ, ಯುವತಿಯರು ಅಶ್ಲೀಲ ಬಟ್ಟೆ ತೊಟ್ಟು ಡ್ಯಾನ್ಸ್ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಹಿನ್ನೆಲೆಯಲ್ಲಿ ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಉಪ್ಪಾರಪೇಟೆ ಸುತ್ತಮುತ್ತ ಪೊಲೀಸರು ದಾಳಿ ನಡೆಸಿದರು. ಕೇಂದ್ರ ವಿಬಾಗ ಹಾಗೂ ಪಶ್ವಿಮ ವಿಭಾಗದ ಡ್ಯಾನ್ಸ್ ಬಾರ್‌ಗಳ ಮೇಲೂ ದಾಳಿ ನಡೆಸಲಾಗಿದ್ದು, ಕಬ್ಬನ್ ಪಾರ್ಕ್, ಅಶೋಕ್ ನಗರ ಸೇರಿದಂತೆ ನಗರದ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಿಯಮ ಉಲ್ಲಂಘಿಸಿದ ಡ್ಯಾನ್ಸ್ ಬಾರ್‌ಗಳ ಮೇಲೆ ಪ್ರಕರಣ ದಾಖಲಾಗಿದೆ.

ಈ ಡ್ಯಾನ್ಸ್‌ ಬಾರ್‌ಗಳಲ್ಲಿ ಈಶಾನ್ಯ ರಾಜ್ಯಗಳ ಹಲವು ಯುವತಿಯರನ್ನು ಕರೆತಂದು ತಡರಾತ್ರಿ ಡ್ಯಾನ್ಸ್‌ ಮಾಡಿಸಲಾಗುತ್ತಿತ್ತು. ಮದ್ಯದ ಹೊಳೆ ಯಥೇಚ್ಛವಾಗಿ ಹರಿಯುತ್ತಿದ್ದು, ಇದು ಕೆಲವು ಸ್ಥಳೀಯ ಪೊಲೀಸ್‌ ಅಧಿಕಾರಿಗಳಿಗೂ ತಿಳಿದಿದ್ದರೂ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ಗೊತ್ತಾಗಿದೆ. ಕೆಲವು ಕಡೆ ಗುಪ್ತ ಪ್ರದೇಶಗಳಲ್ಲಿ ಅಶ್ಲೀಲ ನೃತ್ಯದ ಬಳಿಕ ಹೈಟೆಕ್‌ ವೇಶ್ಯಾವಾಟಿಕೆಗೂ ಅವಕಾಶ ಕಲ್ಪಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪೊಲೀಸ್‌ ಇಲಾಖೆ ಈ ದಾಳಿಗಳ ಮೂಲಕ ಇಂಥವರಿಗೆ ಶಾಕ್‌ ನೀಡಿದೆ.

ಇದನ್ನೂ ಓದಿ: Murder Case: ಬಾರ್‌ನಲ್ಲಿ ಜೋರಾಗಿ ಮಾತನಾಡಬೇಡಿ ಎಂದದ್ದಕ್ಕೆ ಯುವಕನ ಕೊಲೆ