ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Phoenix Movie: ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

Phoenix Movie: ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರ ʼಫೀನಿಕ್ಸ್’. ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ ʼಫೀನಿಕ್ಸ್ʼ ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ಬ್ಯುಸಿಯಾಗಿದೆ.

ಓಂ ಪ್ರಕಾಶ್ ರಾವ್ ನಿರ್ದೇಶನದ ‘ಫೀನಿಕ್ಸ್’ ಸಿನಿಮಾ ಚಿತ್ರೀಕರಣ ಪೂರ್ಣ

Profile Siddalinga Swamy Jun 27, 2025 3:11 PM

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನದ 49ನೇ ಚಿತ್ರ ʼಫೀನಿಕ್ಸ್ʼ (Phoenix Movie). ಆರ್. ವಾಸುದೇವ ರೆಡ್ಡಿ ಅರ್ಪಿಸುವ, ಶ್ರೀಗುರು ಚಿತ್ರಾಲಯ ಲಾಂಛನದಲ್ಲಿ ತ್ರಿಶಾ ಪ್ರಕಾಶ್ ಅವರು ನಿರ್ಮಾಣ ಮಾಡುತ್ತಿರುವ ಮಹಿಳಾ ಪ್ರಧಾನ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು, ಹಿಮವದ್ ಗೋಪಾಲಸ್ವಾಮಿ ಬೆಟ್ಟ ಹಾಗೂ ಉತ್ತರ ಕರ್ನಾಟಕದ ಹಲವು ಕಡೆ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿರುವ ʼಫೀನಿಕ್ಸ್ʼ ಈಗ ಪೋಸ್ಟ್ ಪ್ರೊಡಕ್ಷನ್ ವರ್ಕ್‌ನಲ್ಲಿ ಬ್ಯುಸಿಯಾಗಿದೆ.

ಬಹಳ ದಿನಗಳ ನಂತರ ಓಂ ಪ್ರಕಾಶ್ ರಾವ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ʼಫೀನಿಕ್ಸ್ʼ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಓಂಪ್ರಕಾಶ್ ರಾವ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆಯನ್ನು ದೀಪು ಪಿ.ಆರ್. ಬರೆದಿದ್ದಾರೆ. ರವಿಕುಮಾರ್ ಛಾಯಾಗ್ರಹಣ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನವಿರುವ ʼಫೀನಿಕ್ಸ್ʼ ಚಿತ್ರದಲ್ಲಿ ಮೈನವಿರೇಳಿಸುವ ಸಾಹಸ ಸನ್ನಿವೇಶಗಳಿದ್ದು, ಹೆಸರಾಂತ ಸಾಹಸ ನಿರ್ದೇಶಕರು ರವಿವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ | Jumka Fashion 2025: ಮಾನಿನಿಯರ ಮನ ಗೆದ್ದ ಬ್ಲ್ಯಾಕ್ ಮೆಟಲ್ ಜುಮಕಿಗಳು

ನಿಮಿಕಾ ರತ್ನಾಕರ್, ಭಾಸ್ಕರ್ ಶೆಟ್ಟಿ, ಕೃತಿಕ ಲೋಗೊ, ಎಸ್ತರ್ ನರೋನ, ರಂಗಾಯಣ ರಘು, ಅವಿನಾಶ್, ಚಿತ್ರಾ ಶೆಣೈ, ಶ್ರೀಧರ್ (ಈ ಟಿವಿ), ಪ್ರಸನ್ನ, ವಿನೋದ್ ಕಿನ್ನಿ, ಮೇಘನಾ ಎಸ್.ಕೆ. ಮುಂತಾದವರು ʼಫೀನಿಕ್ಸ್ʼ ಚಿತ್ರದ ತಾರಾಬಳಗದಲ್ಲಿದ್ದಾರೆ.