Kannada Serial TRP: ಟಿಆರ್ಪಿಯಲ್ಲಿ ದಾಖಲೆ ಬರೆದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ನಾಯಕನಾಗಿ ತ್ರಿವಿಕ್ರಮ್ ಹಾಗೂ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಸಂಜೆ 7.30ಕ್ಕೆ ಪ್ರಸಾರವಾಗುತ್ತಿರುವ ಈ ಸೀರಿಯಲ್ ಇದೀಗ ಈವರೆಗೆ ಅತಿ ಹೆಚ್ಚು ಟಿವಿಆರ್ ದಾಖಲಿಸಿದೆ.

Muddu Sose serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 23ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ ಇತ್ತೀಚೆಗಷ್ಟೆ ಪ್ರಸಾರ ಶುರುವಾಗಿ 50 ಸಂಚಿಕೆ ಪೂರೈಸಿರುವ ಬಿಗ್ ಬಾಸ್ ರನ್ನರ್-ಅಪ್ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ ಹೊಸ ದಾಖಲೆ ಬರೆದಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಬಾಲ್ಯವಿವಾಹದ ಕಥೆ ಆಗಿದೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಸಂಜೆ 7.30ಕ್ಕೆ ಪ್ರಸಾರವಾಗುತ್ತಿರುವ ಈ ಸೀರಿಯಲ್ ಇದೀಗ ಈವರೆಗೆ ಅತಿ ಹೆಚ್ಚು ಟಿವಿಆರ್ ದಾಖಲಿಸಿದೆ.
ರೂರಲ್‌ನಲ್ಲಿ ಬರೋಬ್ಬರಿ 7.0 ಟಿವಿಆರ್, ಅರ್ಬನ್‌ನಲ್ಲಿ 4.6 ಟಿವಿಆರ್, ಅರ್ಬನ್ + ರೂರಲ್ - 5.8 ಟಿವಿಆರ್ ಗಳಿಸುವಲ್ಲಿ ಮುದ್ದು ಸೊಸೆ ಯಶಸ್ವಿಯಾಗಿದ್ದಾಳೆ. ಲಾಂಚ್ ಆದಾಗಿನಿಂದ ಈವರೆಗೂ ಮುದ್ದು ಸೊಸೆ ಸೀರಿಯಲ್ ದಾಖಲಿಸಿರುವ ಹೈಯೆಸ್ಟ್ ಟಿಆರ್‌ಪಿ ಇದೇ ಆಗಿದೆ. ಇದರ ಜೊತೆಗೆ ಮತ್ತೊಂದು ಧಾರಾವಾಹಿ ಭಾರ್ಗವಿ ಎಲ್ಎಲ್ಬಿ ಕೂಡ ದಾಖಲೆ ನಿರ್ಮಿಸಿದೆ. ಈ ಸೀರಿಯಲ್ ರೂರಲ್‌ನಲ್ಲಿ 6.3 ಟಿವಿಆರ್, ಅರ್ಬನ್‌ನಲ್ಲಿ 3.7 ಟಿವಿಆರ್, ಅರ್ಬನ್ + ರೂರಲ್‌ನಲ್ಲಿ 5.0 ಟಿವಿಆರ್ ದಾಖಲಿಸಿ ಲಾಂಚ್ ಆದಾಗಿನಿಂದ ಹೈಯೆಸ್ಟ್ ಟಿಆರ್‌ಪಿ ದಾಖಲಿಸಿದೆ.
Dhanraj Achar: ದರ್ಶನ್ ಭೇಟಿ ಕೊಟ್ಟ ದೇವಾಲಯದಲ್ಲಿ ಧನರಾಜ್ ಆಚಾರ್ ಕುಟುಂಬ
ಇನ್ನು ಒಟ್ಟಾರೆಯಾಗಿ ನಂಬರ್ ಒನ್ ಸೀರಿಯಲ್ ಯಾವುದು ಎಂಬುದನ್ನು ನೋಡುವುದಾದರೆ, ಝೀ ಕನ್ನಡದ ನಾ ನಿನ್ನ ಬಿಡಲಾರೆ ನಂಬರ್ ಒನ್ ಸ್ಥಾನಕ್ಕೇರಿದೆ. ಇದು 7.9 ಟಿವಿಆರ್ ಪಡೆದುಕೊಂಡಿದೆ. ಎರಡನೇ ಸ್ಥಾನದಲ್ಲಿ ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಇದ್ದು, ಇದು 7.3 ಟಿವಿಆರ್ ದಾಖಲಿಸಿದೆ. 6.8 ಟಿವಿಆರ್ ಪಡೆದು ಬ್ರಹ್ಮಗಂಟು ಸೀರಿಯಲ್ ಮೂರನೇ ಸ್ಥಾನದಲ್ಲಿದೆ. ಲಕ್ಷ್ಮೀ ನಿವಾಸ ಧಾರಾವಾಹಿ 6.6 ಟಿವಿಆರ್ನೊಂದಿಗೆ ನಾಲ್ಕನೇ ಸ್ಥಾನ, ಅಣ್ಣಯ್ಯ 6.3 ಟಿವಿಆರ್ ಪಡೆದು ಐದನೇ ಸ್ಥಾನಕ್ಕೆ ಕುಸಿದಿದೆ.