ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BSNL New Plan: BSNL ಗ್ರಾಹಕರಿಗೆ ಗುಡ್‌ನ್ಯೂಸ್‌! ಕೇವಲ ಕರೆ ಹಾಗೂ SMSಗಾಗಿಯೇ ಬಂತು ಹೊಸ ಪ್ಲ್ಯಾನ್‌

BSNL ಹೊಸ ಪ್ಲ್ಯಾನ್‌ ಜಾರಿಗೆ ತಂದಿದ್ದು, 439 ರೂ ಗೆ 90 ದಿನಗಳಿಗೆ ಫೋನ್‌ ಕರೆ ಹಾಗೂ SMS ಸಿಗಲಿವೆ. ಈ ಹಿಂದೆ ಜಿಯೋ, ಏರ್‌ಟೆಲ್ ಮತ್ತು ವಿಐ ಇತ್ತೀಚೆಗೆ ತಮ್ಮದೇ ಆದ ಧ್ವನಿ ಮತ್ತು SMS-ಮಾತ್ರ ಯೋಜನೆಗಳನ್ನು ಪರಿಚಯಿಸಿದ್ದವು. ಆದರೆ ಇವು ತುಂಬಾ ದುಬಾರಿಯಾಗಿವೆ. ಆದರೆ ಈ ಯೋಜನೆ ಗ್ರಾಹಕರಿಗೆ ಅನುಕೂಲಕರವಾಗಿದೆ.

BSNL ನಿಂದ ಹೊಸ ಪ್ಲ್ಯಾನ್‌ ಜಾರಿ;  ಟೆಲಿಕಾಂ ಕಂಪನಿಗಳಿಗೆ ಹುಟ್ಟಿದ ನಡುಕ

ಸಾಂದರ್ಭಿಕ ಚಿತ್ರ

Profile Vishakha Bhat Feb 19, 2025 5:06 PM

ನವದೆಹಲಿ: ಗ್ರಾಹಕರಿಗೆ ಅನುಕೂಲವಾಗುವಂತಹ ಪ್ಲಾನ್‌ಗಳನ್ನು ಬಿಎಸ್‌ಎನ್‌ಎಲ್‌ (BSNL New Plan) ಜಾರಿಗೊಳಿಸುತ್ತಿರುತ್ತದೆ. ಸದ್ಯ ಅದೇ ರೀತಿಯ ಮತ್ತೊಂದು ಹೊಸ ಪ್ಲಾನ್‌ ಜಾರಿಯಾಗಿದೆ. ಇನ್ನು ಮುಂದೆ ಕೇವಲ ಫೋನ್‌ ಕಾಲ್‌ ಹಾಗೂ SMS ಗಳಿಗೆ ಇಂಟರ್ನೆಟ್ ಡೇಟಾ ಪ್ಯಾಕೇಜ್‌ ಇರುವ ಪ್ಲ್ಯಾನ್‌ಗಳನ್ನು ಮಾಡಬೇಕಾಗಿಲ್ಲ. 439 ರೂ ಗೆ 90 ದಿನಗಳಿಗೆ ಫೋನ್‌ ಕರೆ ಹಾಗೂ SMS ಸಿಗಲಿವೆ. ಟ್ರಾಯ್‌ ಆದೇಶದಂತೆ ಬಿಎಸ್‌ಎನ್‌ಎಲ್‌ ಈ ಯೋಜನೆಯನ್ನು ಜಾರಿಗೊಳಿಸಿದೆ. ಜಿಯೋ, ಏರ್‌ಟೆಲ್ ಮತ್ತು ವಿಐ ಇತ್ತೀಚೆಗೆ ತಮ್ಮದೇ ಆದ ಧ್ವನಿ ಮತ್ತು SMS-ಮಾತ್ರ ಯೋಜನೆಗಳನ್ನು ಪರಿಚಯಿಸಿದ್ದವು. ಆದರೆ ಇವು ತುಂಬಾ ದುಬಾರಿಯಾಗಿವೆ. ಇದೀಗ ಬಿಎಸ್‌ಎನ್‌ಎಲ್‌ ಈ ಪ್ಲ್ಯಾನ್‌ ಗ್ರಾಹಕರಿಗೆ ಅನುಕೂಲವಾಗಲಿದೆ.

BSNL ನ ಈ ಪ್ಲ್ಯಾನ್‌ ಬೆಲೆ 439 ರೂ.ಗಳಾಗಿದ್ದು, ಇದು ಪ್ರಸ್ತುತ ಭಾರತದಲ್ಲಿ ಕೇವಲ ಫೋನ್‌ ಕರೆ ಮತ್ತು SMS ಗಾಗಿ ಅತ್ಯಂತ ಕೈಗೆಟುಕುವ ಆಯ್ಕೆಯಾಗಿದೆ. ಈ ಪ್ಲಾನ್ 90 ದಿನಗಳ ಮಾನ್ಯತೆ ಹೊಂದಿದ್ದು, ಅನಿಯಮಿತ ಕರೆಗಳು ಮತ್ತು SMS ಗಳನ್ನು ಹೊಂದಿದೆ. ಸದ್ಯ ಇದೇ ಯೋಜನೆ ಜಿಯೋದಲ್ಲಿ 448 ರೂ. ಮತ್ತು 1748 ರೂ. ಬೆಲೆಯ ಎರಡು ರೀತಿಯ ಯೋಜನೆಗಳನ್ನು ಹೊಂದಿದ್ದು, ಇವು ಕ್ರಮವಾಗಿ 84 ದಿನಗಳು ಮತ್ತು 336 ದಿನಗಳ ಮಾನ್ಯತೆಯನ್ನು ಹೊದಿದೆ. ಏರ್ಟೆಲ್ 469 ರೂ. ಮತ್ತು 1849 ರೂ ಗಳ ಯೋಜನೆಯನ್ನು ಹೊಂದಿದೆ.



ಈ ಸುದ್ದಿಯನ್ನೂ ಓದಿ: Jio Hotstar: ಜಿಯೋ ಸಿನಿಮಾ ಜತೆ ಹಾಟ್‌ಸ್ಟಾರ್‌ ವಿಲೀನ; ಪ್ರೇಕ್ಷಕರ ಜೇಬಿಗೆ ಬಿತ್ತು ಕತ್ತರಿ!

ಇತ್ತೀಚೆಗೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ರೂ. 345 ಪ್ರಿಪೇಯ್ಡ್ ಯೋಜನೆ ಘೋಷಿಸಿದೆ. ಇಷ್ಟು ಕಡಿಮೆ ಬೆಲೆಗೆ ಒಟ್ಟು 60 ದಿನಗಳವರೆಗೆ (ಎರಡು ತಿಂಗಳ) ಈ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯಿಂದ ನೀವು ಅನಿಯಮಿತವಾಗಿ ಧ್ವನಿ ಕರೆ ಪಡೆಯಬಹುದು. ಎರಡು ತಿಂಗಳು ಅನ್‌ಲಿಮಿಟೆಡ್ ಕರೆಗಳ ಜೊತೆಗೆ ದೈನಂದಿನ 100 ಎಸ್‌ಎಂಎಸ್‌ ಹಾಗೂ ಪ್ರತಿ ದಿನ 1ಜಿಬಿ ಡೇಟಾ ಪಡೆಯಲಾಗುತ್ತದೆ. ಇನ್ನು ರೂ. 347 ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಅನಿಯಮಿತ ಧ್ವನಿ ಕರೆಗಳು, ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯವು ಸಿಗಲಿದೆ. ಈ ಪ್ಲಾನ್ 54 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಗಳ ಮಧ್ಯ ಅಂತಹ ದೊಡ್ಡ ವ್ಯತ್ಯಾಸವೇನು ಇಲ್ಲ. ಆದರೆ ಇವು ಬಳಕೆದಾರರಿಗೆ ಅನುಕೂಲಕರವಾಗಿವೆ.