Viral Video: ಐತಿಹಾಸಿಕ ಹಿನ್ನೆಲೆಯುಳ್ಳ ಕೊಳದಲ್ಲಿ ಪ್ರವಾಸಿಗರ ಮೋಜು ಮಸ್ತಿ; ಇದೆಂಥಾ ಅನಾಗರಿಕ ವರ್ತನೆ ಎಂದು ಕಿಡಿಕಾರಿದ ನೆಟ್ಟಿಗರು
ಐತಿಹಾಸಿಕ ಹಿನ್ನೆಲೆಯುಳ್ಳ ದೆಹಲಿಯ ಸುಂದರ್ ನರ್ಸರಿಯಲ್ಲಿರುವ ಕೊಳದಲ್ಲಿ ಜನರು ಸ್ನಾನ ಮಾಡುತ್ತಿದ್ದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇದು ತುಂಬಾ ನಾಚಿಕೆಗೇಡಿನ ಸಂಗತಿ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಆದರೆ ಉದ್ಯಾನವನದ ಅಧಿಕಾರಿಗಳು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.


ದೆಹಲಿ: ದೆಹಲಿಯ ಐತಿಹಾಸಿಕ ಹಿನ್ನೆಲೆಯುಳ್ಳ ಸುಂದರ್ ನರ್ಸರಿ( Sunder Nursery )ಲ್ಲಿರುವ ಕೊಳವೊಂದರಲ್ಲಿ ಜನರು ಈಜುವುದು, ಆಟವಾಡುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ನೆಟ್ಟಿಗರು ಜನರ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ, ಸುಂದರ್ ನರ್ಸರಿಯಲ್ಲಿರುವ ಕೊಳದಲ್ಲಿ ಒಂದಷ್ಟು ಮಂದಿ ಸ್ನಾನ ಮಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆದರೆ ಉದ್ಯಾನವನದ ಅಧಿಕಾರಿಗಳು ಈ ಬಗ್ಗೆ ಇನ್ನೂ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಈಗಾಗಲೇ 326K ಕ್ಕೂ ಹೆಚ್ಚು ವ್ಯೂವ್ಸ್ ಮತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬರು, "ಸುಂದರ್ ನರ್ಸರಿ ದೆಹಲಿಯಲ್ಲಿ ಉಳಿದಿರುವ ಏಕೈಕ ಯೋಗ್ಯ ಉದ್ಯಾನವನವಾಗಿದೆ. ಈಗ ಅಧಿಕಾರಿಗಳು ಹೆಚ್ಚಿನ ನಿರ್ಬಂಧಗಳನ್ನು ವಿಧಿಸುತ್ತಾರೆ. ಆದರೆ ಅಲ್ಲಿಗೆ ಭೇಟಿ ನೀಡುವ ಜನರು ಅದನ್ನು ಹಾಳುಮಾಡುತ್ತಾರೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಈ ನಡವಳಿಕೆಯನ್ನು ಟೀಕಿಸುತ್ತಾ, "ಇದು ತುಂಬಾ ನಾಚಿಕೆಗೇಡಿನ ಸಂಗತಿ. ಸಾರ್ವಜನಿಕ ಸ್ಥಳಗಳಲ್ಲಿ ಗದ್ದಲ ಸೃಷ್ಟಿಸುವುದು ಮತ್ತು ವಸ್ತುಗಳನ್ನು ನಾಶಮಾಡುವುದನ್ನು ಈ ಇನ್‌ಸ್ಟಾಗ್ರಾಮ್ ಪೀಳಿಗೆಯವರು ಮೋಜಿನ ಸಂಗತಿ ಎಂದು ತಿಳಿದುಕೊಂಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಇನ್ನು ಕೆಲವರು ಇಂತಹ ಘಟನೆಗಳು ಹೆಚ್ಚಿನ ಪ್ರವೇಶ ಶುಲ್ಕ ಮತ್ತು ಕಠಿಣ ನಿಯಮಗಳಿಗೆ ಕಾರಣವಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಜನರಲ್ಲಿ ಇನ್ನೂ ತಿಳುವಳಿಕೆಯ ಕೊರತೆಯಿದೆ. ನಾವೆಲ್ಲರೂ ಈ ಸ್ಥಳಗಳ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕು” ಎಂದಿದ್ದಾರೆ.
ಈ ಸುದ್ದಿಯನ್ನೂ ಓಧಿ:Viral Video: ಪ್ರಾಣ ಉಳಿಸಿದವನು ಎದುರಿಗೆ ಬಂದಾಗ ಈ ಚಿಂಪಾಂಜಿ ಮಾಡಿದ್ದೇನು? ಹೃದಯಸ್ಪರ್ಶಿ ವಿಡಿಯೊ ವೈರಲ್
ಸುಂದರ್ ನರ್ಸರಿ ದೆಹಲಿಯ ಹುಮಾಯೂನ್ ಸಮಾಧಿಯ ಬಳಿ ಇದೆ. ಈ ಉದ್ಯಾನವನವು 16 ನೇ ಶತಮಾನದ ಹಿಂದಿನ 6 ವಿಶ್ವ ಪರಂಪರೆಯ ಸಮಾಧಿ-ಉದ್ಯಾನಗಳಿಗೆ ನೆಲೆಯಾಗಿದೆ. ಅಂದರೆ ಮೊಘಲ್ ಯುಗದ ಉದ್ಯಾನಗಳು, ಪುನಃಸ್ಥಾಪಿಸಲಾದ ಸ್ಮಾರಕಗಳು ಮತ್ತು ಜೀವವೈವಿಧ್ಯ ವಲಯಗಳಿಗೆ ಹೆಸರುವಾಸಿಯಾಗಿದೆ.ಈ ಉದ್ಯಾನವನವು ಇತ್ತೀಚಿನ ಸಭ್ಯತೆಯ ಉಲ್ಲಂಘನೆಯಿಂದ ಟೀಕೆಗೆ ಗುರಿಯಾಗಿದೆ.