ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stock Market: ರಿಲಯನ್ಸ್‌ ಸೋಲಾರ್‌ ಕ್ರಾಂತಿ; ಟಾರ್ಗೆಟ್‌ ಪ್ರೈಸ್‌ ಏರಿಸಿದ ನುವಾಮಾ, ಅದಾನಿ ಬಾಂಡ್‌ನಲ್ಲಿ 9.15% ಬಡ್ಡಿ

Reliance Industries: ಡೊಮೆಸ್ಟಿಕ್‌ ಬ್ರೋಕರೇಜ್‌ ಸಂಸ್ಥೆಯಾದ ನುವಾಮಾ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌, ಇದೀಗ ರಿಲಯನ್ಸ್‌ ಇಂಡಸ್ಟ್ರೀಸ್‌ನ ಟಾರ್ಗೆಟ್‌ ಪ್ರೈಸ್‌ ಅನ್ನು ಗಣನೀಯವಾಗಿ ಏರಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಸೋಲಾರ್‌ ಮಾಡ್ಯುಲ್ಸ್‌ಗಳನ್ನು ಅಥವಾ ಸೌರ ಫಲಕಗಳನ್ನು ಉತ್ಪಾದಿಸಲು ಆರಂಭಿಸಿರುವುದು ಇದಕ್ಕೆ ಕಾರಣ. ನುವಾಮಾ ಬ್ರೋಕರೇಜ್‌ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಟಾರ್ಗೆಟ್‌ ಪ್ರೈಸ್‌ ಅನ್ನು 1,801 ರುಪಾಯಿಗೆ ಏರಿಸಿದೆ.

ರಿಲಯನ್ಸ್‌ ಸೋಲಾರ್‌ ಕ್ರಾಂತಿ; ಟಾರ್ಗೆಟ್‌ ಪ್ರೈಸ್‌ ಏರಿಸಿದ ನುವಾಮಾ

Profile Siddalinga Swamy Jul 1, 2025 9:00 PM

ಕೇಶವ ಪ್ರಸಾದ್‌ ಬಿ.

ಮುಂಬೈ: ಡೊಮೆಸ್ಟಿಕ್‌ ಬ್ರೋಕರೇಜ್‌ ಸಂಸ್ಥೆ ನುವಾಮಾ ಇನ್‌ಸ್ಟಿಟ್ಯೂಷನಲ್‌ ಈಕ್ವಿಟೀಸ್‌, ಇದೀಗ ರಿಲಯನ್ಸ್‌ ಇಂಡಸ್ಟ್ರೀಸ್‌ನ ಟಾರ್ಗೆಟ್‌ ಪ್ರೈಸ್‌ ಅನ್ನು ಗಣನೀಯವಾಗಿ ಏರಿಸಿದೆ. ರಿಲಯನ್ಸ್‌ (Reliance Industries) ಇಂಡಸ್ಟ್ರೀಸ್‌ ಸೋಲಾರ್‌ ಮಾಡ್ಯುಲ್ಸ್‌ಗಳನ್ನು ಅಥವಾ ಸೌರ ಫಲಕಗಳನ್ನು ಉತ್ಪಾದಿಸಲು ಆರಂಭಿಸಿರುವುದು ಇದಕ್ಕೆ ಕಾರಣ. ನುವಾಮಾ ಬ್ರೋಕರೇಜ್‌ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರಿನ ಟಾರ್ಗೆಟ್‌ ಪ್ರೈಸ್‌ ಅನ್ನು 1,801 ರುಪಾಯಿಗೆ ಏರಿಸಿದೆ. ರಿಲಯನ್ಸ್‌ ಜಿಯೊ ಬಿಡುಗಡೆಯಾದ ಬಳಿಕ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ದರ (Stock Market ) ಏರಿಕೆಯಾಗಿದ್ದ ರೀತಿಯಲ್ಲಿಯೇ, ಮತ್ತೊಮ್ಮೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ನುವಾಮಾ ಬ್ರೋಕರೇಜ್‌ ತಿಳಿಸಿದೆ.



ರಿಲಯನ್ಸ್‌ ಷೇರಿನ ಈಗಿನ ದರ

1,526 ರುಪಾಯಿ.

5 ವರ್ಷ ಹಿಂದಿನ ದರ: 893/-

ಮಾರುಕಟ್ಟೆ ಬಂಡವಾಳ: 20 ಲಕ್ಷದ 67 ಸಾವಿರ ಕೋಟಿ ರು.

52 wk high: 1,608/-

52 wk low: 1,114/-

ರಿಲಯನ್ಸ್‌ ಇಂಡಸ್ಟ್ರೀಸ್‌ ಗುಜರಾತಿನಲ್ಲಿ ಸೌರ ಫಲಕಗಳನ್ನು ತಯಾರಿಸುವ ಘಟಕವನ್ನು ಹೊಂದಿದೆ. ನವೀಕರಿಸಬಹುದಾದ ಇಂಧನ ವಲಯದಲ್ಲಿ ಉತ್ಪಾದನೆಯನ್ನು ಹೆಚ್ಚಿಸಲು ನಿರ್ಧರಿಸಿದೆ. ಭವಿಷ್ಯದಲ್ಲಿ ಈ ಘಟಕದ ಸಾಮರ್ಥ್ಯವನ್ನು 20 ಗಿಗಾ ವ್ಯಾಟ್‌ಗೆ ವೃದ್ಧಿಸಲು ಉದ್ದೇಶಿಸಿದೆ. ಈ ಘಟಕದಲ್ಲಿ ಮೊದಲ ಸೋಲಾರ್‌ ಪ್ಯಾನೆಲ್‌ ಮಾನ್ಯುಫಾಕ್ಚರಿಂಗ್‌ ಲೈನ್‌ ಈಗ ಉತ್ಪಾದನೆಯನ್ನು ಆರಂಭಿಸಿದೆ. ಬ್ಯಾಟರಿ ಸ್ಟೋರೇಜ್‌ ಫೆಸಿಲಿಟಿಯನ್ನೂ ಕಂಪನಿ ಅಭಿವೃದ್ಧಿಪಡಿಸುತ್ತಿದೆ.

ಮುಕೇಶ್‌ ಅಂಬಾನಿ ಅವರ ಸಾರಥ್ಯದಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ ಗುಜರಾತಿನ ಜಾಮ್‌ ನಗರದಲ್ಲಿ 5,000 ಎಕರೆ ಪ್ರದೇಶದಲ್ಲಿ "ಗಿಗಾ ಫ್ಯಾಕ್ಟರಿ” ಗಳನ್ನು ನಿರ್ಮಿಸುತ್ತಿದೆ. ರಿಲಯನ್ಸ್‌ ಜಿಯೊ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನು, ಪ್ರಗತಿಯನ್ನು ದಾಖಲಿಸಿರುವ ರಿಲಯನ್ಸ್‌ ಇಂಡಸ್ಟ್ರೀಸ್‌ ಇದೀಗ ಸೋಲಾರ್‌ ಪವರ್‌ ವಲಯದಲ್ಲಿ ಕ್ರಾಂತಿಗೆ ಮುಂದಾಗಿದೆ.

RBL ಬ್ಯಾಂಕ್‌ ಷೇರಿನ ದರ 1 ತಿಂಗಳಿನಲ್ಲಿ 21% ಹೆಚ್ಚಳ

RBL ಬ್ಯಾಂಕ್‌ ಷೇರಿನ ದರ ಕಳೆದ 1 ತಿಂಗಳಿನಲ್ಲಿ 21% ಏರಿಕೆ ಆಗುವುದರ ಮೂಲಕ ಗಮನ ಸೆಳೆದಿದೆ. ಕಳೆದ 6 ತಿಂಗಳಿನಲ್ಲಿ ಷೇರಿನ ದರದಲ್ಲಿ 64% ಏರಿಕೆ ಆಗಿತ್ತು. ಬ್ಯಾಂಕಿನ "ರಿಟರ್ನ್‌ ಆನ್‌ ಅಸೆಟ್‌” ಗಣನೀಯ ಸುಧಾರಣೆಯಾಗಿದೆ. RBL ಬ್ಯಾಂಕ್‌ ವಾಣಿಜ್ಯ ವಾಹನಗಳಿಗೆ ಸಾಲ ವಿತರಣೆಯನ್ನೂ ಆರಂಭಿಸಲಿದೆ. ಖಾಸಗಿ ವಲಯದ RBL ಬ್ಯಾಂಕ್‌ 1943ರಲ್ಲಿ ಸ್ಥಾಪನೆಯಾಗಿದ್ದು, 81 ವರ್ಷಗಳ ಇತಿಹಾಸವನ್ನು ಹೊಂದಿದೆ. ಮುಂಬಯಿನಲ್ಲಿ ಇದರ ಪ್ರಧಾನ ಕಚೇರಿ ಇದೆ. 2024ರಲ್ಲಿ 15,437 ಕೋಟಿ ರುಪಾಯಿ ಆದಾಯ ಗಳಿಸಿತ್ತು.

RBL ಬ್ಯಾಂಕ್‌ ಷೇರಿನ ಈಗಿನ ದರ: 259/-

1 ತಿಂಗಳಿನ ಹಿಂದಿನ ದರ: 213/-

ಏರಿಕೆ ಎಷ್ಟು: 21%

ಉದ್ಯಮಿ ಗೌತಮ್‌ ಅದಾನಿ ನೇತೃತ್ವದ ಅದಾನಿ ಎಂಟರ್‌ ಪ್ರೈಸಸ್‌, ಮುಂದಿನ ವಾರ 1,000 ಕೋಟಿ ರುಪಾಯಿಗಳ ಬಾಂಡ್‌ ಯೋಜನೆಯನ್ನು ಬಿಡುಗಡೆಗೊಳಿಸಲಿದೆ. ಜುಲೈ 9ರಿಂದ ಜುಲೈ 22ರ ತನಕ ಅದಾನಿ ಬಾಂಡ್‌ಗಳ ಸಬ್‌ ಸ್ಕೃಪ್ಷನ್‌ ಅವಧಿ ಇರಲಿದೆ. ಈ ಬಾಂಡ್‌ಗಳು ಎರಡು ವರ್ಷ-ಮೂರು ವರ್ಷ ಮತ್ತು ಐದು ವರ್ಷಗಳ ಅವಧಿಯನ್ನು ಒಳಗೊಂಡಿರುತ್ತದೆ. ಈಗ ಅದಾನಿ ಬಾಂಡ್‌ ಗಳ ಬಡ್ಡಿ ದರ ಎಷ್ಟು ಎಂಬುದನ್ನು ನೋಡೋಣ. ಇದು ಅವಧಿಯನ್ನು ಅಧರಿಸಿ ವ್ಯತ್ಯಾಸವಾಗಲಿದೆ. ಅದಾನಿ ಬಾಂಡ್‌ ಖರೀದಿಸುವವರಿಗೆ 2 ವರ್ಷಗಳ ಅವಧಿಗೆ 8.95% ಬಡ್ಡಿ ಸಿಗಲಿದೆ. 3 ವರ್ಷಗಳ ಅವಧಿಗೆ 9.15% ಬಡ್ಡಿ ಸಿಗಲಿದೆ. 5 ವರ್ಷಗಳ ಅವಧಿಗೆ 9.30% ಬಡ್ಡಿ ಸಿಗಲಿದೆ.

ಕರ್ಣಾಟಕ ಬ್ಯಾಂಕ್‌ ತನ್ನ ಷೇರುದಾರರನ್ನು ಉದ್ದೇಶಿಸಿ ನೀಡಿರುವ ಹೇಳಿಕೆಯಲ್ಲಿ, ಬ್ಯಾಂಕ್‌ ಸದೃಢವಾಗಿದೆ. ತನ್ನ ಬದ್ಶತೆ ಮತ್ತು ಪಾರದರ್ಶಕತೆಯನ್ನು ಉಳಿಸಿಕೊಂಡಿದೆ ಎಂದು ಭರವಸೆ ನೀಡಿದೆ. ಷೇರು ವಿನಿಮಯ ಕೇಂದ್ರಕ್ಕೆ ಕರ್ಣಾಟಕ ಬ್ಯಾಂಕ್‌ ನೀಡಿರುವ ವಿವರಣೆಯಲ್ಲಿ, ಬ್ಯಾಂಕಿನ ಕ್ಯಾಪಿಟಲ್‌ ಅಡೆಕ್ವಸಿ ರೇಶಿಯೊ ಅಥವಾ CAR 19.85% ರ ಆರೋಗ್ಯಕರ ಮಟ್ಟದಲ್ಲಿ ಇದೆ. ಬ್ಯಾಂಕಿನ ಆರ್ಥಿಕ ಪರಿಸ್ಥಿತ ಬಲಾಢ್ಯವಾಗಿದೆ ಎಂದು ವಿವರಿಸಿದೆ.

ಈ ನಡುವೆ ಆಲ್‌ ಇಂಡಿಯಾ ಬ್ಯಾಂಕ್‌ ಎಂಪ್ಲಾಯೀಸ್‌ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಜಿ.ಎಚ್‌. ವೆಂಕಟೇಶನ್‌ ಅವರು ನೀಡಿರುವ ಹೇಳಿಕೆಯಲ್ಲಿ, ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕಾರ್ಯಕಾರಿ ನಿರ್ದೇಶಕರ ರಾಜೀನಾಮೆಗೂ, ಬ್ಯಾಂಕಿನ ಆರ್ಥಿಕ ಸ್ಥಿತಿಗೂ ಯಾವುದೇ ಸಂಬಂಧವಿಲ್ಲ. ಕರ್ಣಾಟಕ ಬ್ಯಾಂಕ್‌ ಅತ್ಯಂತ ಸುರಕ್ಷಿತವಾಗಿದೆ. ಯಾವುದೇ ಹಣಕಾಸು ಹಗರಣಗಳಿಂದ ಮುಕ್ತವಾಗಿದೆ. ಗ್ರಾಹಕರು ಮತ್ತು ಠೇವಣಿದಾರರು ಆತಂಕ ಪಡಬೇಕಾಗಿಲ್ಲ ಎಂದು ವಿವರಿಸಿದ್ದಾರೆ.

ಕರ್ಣಾಟಕ ಬ್ಯಾಂಕ್‌ 100 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದೆ. 950 ಶಾಖೆಗಳನ್ನು ಒಳಗೊಂಡಿದೆ. ಸುಮಾರು 9,000 ಉದ್ಯೋಗಿಗಳು ಮತ್ತು ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟು 1 ಲಕ್ಷದ 82 ಸಾವಿರ ಕೋಟಿ ರುಪಾಯಿಗೂ ಹೆಚ್ಚು ವಹಿವಾಟು ನಡೆಸುತ್ತಿದೆ. ಒಟ್ಟು 76,000 ಕೋಟಿ ಸಾಲ ಮತ್ತು ಮುಂಗಡವನ್ನು ನೀಡಿದೆ. ವಸೂಲಾಗದ ಸಾಲ ಅಥವಾ ಎನ್‌ಪಿಎ ಪ್ರಮಾಣ ಕೇವಲ 1,000 ಕೋಟಿ ರುಪಾಯಿ ಆಗಿದ್ದು, ಅತ್ಯಲ್ಪವಾಗಿದೆ. ಕ್ಯಾಪಿಟಲ್‌ ಅಡಕ್ವಸಿ ರೇಶಿಯೊ ಸುಮಾರು 20% ಇದ್ದು, ಬ್ಯಾಂಕಿನ ಆರ್ಥಿಕ ಆರೋಗ್ಯ ಉತ್ತಮವಾಗಿರುವುದನ್ನು ಬಿಂಬಿಸಿದೆ ಎಂದು ವಿವರಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | LV Autorikshaw Handbag 2025: ಆಟೋರಿಕ್ಷಾ ಹ್ಯಾಂಡ್‌ಬ್ಯಾಗ್‌ ಅನಾವರಣಗೊಳಿಸಿದ ಲೂಯಿಸ್‌ ವ್ಯುಟನ್‌; ಬೆಲೆ ಕೇಳಿದ್ರೆ ದಂಗಾಗುತ್ತೀರಾ!