Star Fashion 2025: ಫಿಶ್ಟೇಲ್ ಫ್ಲೋರಲ್ ಡ್ರೆಸ್ನಲ್ಲಿ ಸೂಪರ್ ಮಾಡೆಲ್ನಂತೆ ಕಂಡ ನಟಿ ಮಯೂರಿ
Star Fashion 2025: ಸ್ಯಾಂಡಲ್ವುಡ್ ನಟಿ ಮಯೂರಿ ಅತ್ಯಾಕರ್ಷಕ ಫಿಶ್ ಟೇಲ್ ಬಾಡಿಕಾನ್ ಫ್ಲೋರಲ್ ಡ್ರೆಸ್ನಲ್ಲಿ ಸೂಪರ್ ಮಾಡೆಲ್ನಂತೆ ಪೋಸ್ ನೀಡಿದ್ದಾರೆ. ಅವರ ಈ ಲುಕ್ ಹೇಗಿದೆ? ಸ್ಟೈಲಿಂಗ್ ಹೇಗಿದೆ? ಎಂಬುದರ ಬಗ್ಗೆ ಫ್ಯಾಷನ್ ವಿಮರ್ಶಕರು ಇಲ್ಲಿ ವಿಮರ್ಶಿಸಿದ್ದಾರೆ.

ಚಿತ್ರಗಳು: ಮಯೂರಿ, ಸ್ಯಾಂಡಲ್ವುಡ್ ನಟಿ., ಫೋಟೋಗ್ರಾಫಿ: ಕುಶಾಲ್ ಫೋಟೋಗ್ರಾಫಿ


ಸ್ಯಾಂಡಲ್ವುಡ್ ನಟಿ ಮಯೂರಿ ಅತ್ಯಾಕರ್ಷಕ ಫಿಶ್ಟೇಲ್ ಬಾಡಿಕಾನ್ ಫ್ಲೋರಲ್ ಡ್ರೆಸ್ನಲ್ಲಿ ಸೂಪರ್ ಮಾಡೆಲ್ನಂತೆ ಕಾಣಿಸಿಕೊಂಡಿದ್ದಾರೆ. ಹೌದು, ಸಖತ್ ಪೋಸ್ ನೀಡಿದ್ದಾರೆ.

ಫ್ಲೋರಲ್ ಪ್ರಿಂಟ್ ಫಿಶ್ಟೇಲ್ ಡ್ರೆಸ್ನಲ್ಲಿ ಮಯೂರಿ
ಅಂದಹಾಗೆ, ಈ ಫೋಟೋಶೂಟ್ನಲ್ಲಿ ನಟಿ ಮಯೂರಿ ಧರಿಸಿರುವ ಫ್ಲೋರಲ್ ಫಿಶ್ಟೇಲ್ ಡ್ರೆಸ್ ಅಥವಾ ಗೌನ್ ಇಲ್ಲವೇ ಮ್ಯಾಕ್ಸಿ ಶೈಲಿಯ ಔಟ್ಫಿಟ್ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ವೆಸ್ಟರ್ನ್ ಲುಕ್ ನೀಡಿದೆ. ಬಿಗ್ ರಿಂಗ್ಲೇಟ್ಸ್ ಶಾರ್ಟ್ ಹೇರ್ಸ್ಟೈಲ್ ಹಾಗೂ ಮಿನಿಮಲ್ ಆಕ್ಸೆಸರೀಸ್ ಇವರ ಲುಕ್ಕನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ನೋಡಲು ಬಾಡಿಕಾನ್ ವಿನ್ಯಾಸದಲ್ಲಿರುವ ಈ ಫ್ಲೋರಲ್ ಸಾಫ್ಟ್ ಫ್ಯಾಬ್ರಿಕ್ನ ಡ್ರೆಸ್ ಪಾರ್ಟಿವೇರ್ ಲುಕ್ಕನ್ನು ಹೈಲೈಟ್ ಮಾಡಿದೆ. ಇನ್ನು ಅವರ ಸೂಪರ್ ಮಾಡೆಲ್ ಲುಕ್ ನೀಡುವಂತಹ ಪೋಸ್ ಫ್ಯಾಷನ್ ಪ್ರಿಯರನ್ನು ಸೆಳೆದಿದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ನಟಿ ಮಯೂರಿ ಕಮ್ಬ್ಯಾಕ್
ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದ ನಟಿ ಮಯೂರಿ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಮದುವೆಯಾದ ನಂತರ ಕೆಲಕಾಲ ಬ್ರೇಕ್ ತೆಗೆದುಕೊಂಡಿದ್ದ ಅವರು ಮಗುವಾದ ನಂತರ ಮತ್ತೇ ಸೋಷಿಯಲ್ ಮೀಡಿಯಾದಲ್ಲಿ ಫ್ಯಾಷನ್ ಫೋಟೋಶೂಟ್ಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಪರ್ಸನಲ್ ಲೈಫ್ನ ಕಾಂಟ್ರವರ್ಸಿಗೆ ಸಿಲುಕಿ, ನಲುಗಿದ ಮಯೂರಿ ತನ್ನ ತಾಯಿಯ ಬೆಂಬಲದಿಂದ ಮತ್ತೊಮ್ಮೆ ಫಿನಿಕ್ಸ್ನಂತೆ ಎದ್ದು ನಿಂತಿದ್ದಾರೆ. ಈ ವಿಷಯವನ್ನು ಖುದ್ದು ಅವರೇ ಈ ಹಿಂದೆ ವಿಶ್ವವಾಣಿ ನ್ಯೂಸ್ನೊಂದಿಗೆ ಹಂಚಿಕೊಂಡಿದ್ದರು.

ಫ್ಯಾಷನ್ ಫೋಟೋಶೂಟ್ಗಳಲ್ಲಿ ಮಯೂರಿ
ಆಗಾಗ್ಗೆ ಸಾಕಷ್ಟು ಫ್ಯಾಷನ್ ಫೋಟೋಶೂಟ್ಗಳಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಸೆಲೆಬ್ರೆಟಿ ಇವೆಂಟ್ಗಳಲ್ಲೂ ಕಾಣಿಸಿಕೊಳ್ಳುತ್ತಿರುವ ಮಯೂರಿ ಅವರಿಗೆ ಮೊದಲಿನಿಂದಲೂ ಫ್ಯಾಷನ್ ಸ್ಟೇಟ್ಮೆಂಟ್ಗಳ ಬಗ್ಗೆ ಆಸಕ್ತಿ ಇದೆ. ಇದಕ್ಕೆ ಪೂರಕ ಎಂಬಂತೆ, ಸಾಕಷ್ಟು ಮೇಕೋವರ್ ಹಾಗೂ ಮೇಕಪ್ ಸ್ಟುಡಿಯೋಗಳು ಹಾಗೂ ಫ್ಯಾಷನ್ವೇರ್ ಬೋಟಿಕ್ಗಳ ಬ್ರಾಂಡ್ ಪ್ರಮೋಷನ್ಗಳಲ್ಲಿ ಇತ್ತೀಚೆಗೆ ಮಯೂರಿ ಸತತವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಇವರನ್ನು ಸಕ್ರಿಯವಾಗಿರಿಸಿದೆ. ಇದು ಉತ್ತಮ ಬೆಳವಣಿಗೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸ್ಯಾಂಡಲ್ವುಡ್ ನಟಿ ಮಯೂರಿ ಧರಿಸಿರುವ ಫ್ಲೋರಲ್ ಫಿಶ್ಟೇಲ್ ಡ್ರೆಸ್ ಅಥವಾ ಗೌನ್ ಇಲ್ಲವೇ ಮ್ಯಾಕ್ಸಿ ಶೈಲಿಯ ಔಟ್ಫಿಟ್ ಅವರನ್ನು ಮತ್ತಷ್ಟು ಆಕರ್ಷಕವಾಗಿಸಿದೆ. ವೆಸ್ಟರ್ನ್ ಲುಕ್ ನೀಡಿದೆ.