ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Errol Musk: ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ಕೊಟ್ಟ ಎಲಾನ್‌ ಮಸ್ಕ್‌ ತಂದೆಯ ರಿಯಾಕ್ಷನ್‌ ಹೇಗಿತ್ತು ಗೊತ್ತಾ?

Errol Musk visit to Ayodhya: ಟೆಸ್ಲಾ (Tesla) ಮತ್ತು ಸ್ಪೇಸ್‌ಎಕ್ಸ್ (SpaceX) ಸಿಇಒ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಬುಧವಾರ ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ಇದೊಂದು ಅದ್ಬುತ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇಲ್ಲಿಗೆ ಭೇಟಿ ನೀಡಿರುವುದು ಅವರು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದು ಎಂದು ಹೇಳಿದರು.

ಅಯೋಧ್ಯೆಯಲ್ಲಿ ಎಲಾನ್‌ ಮಸ್ಕ್‌ ತಂದೆ! ವಿಡಿಯೊ ನೋಡಿ

ಅಯೋಧ್ಯೆ: ರಾಮ ಮಂದಿರ (Ayodhya Ram Mandir) ಅದ್ಭುತವಾಗಿದೆ. ನಾನು ಮಾಡಿರುವ ಅತ್ಯುತ್ತಮ ಕೆಲಸಗಳಲ್ಲಿ ಅಯೋಧ್ಯೆ ಭೇಟಿ ಕೂಡ ಒಂದು. ಅಯೋಧ್ಯೆ ನೋಡಲು ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ. ದೇವಾಲಯ ಪೂರ್ಣಗೊಳ್ಳುವವರೆಗೆ ಕಾಯಲು ಸಾಧ್ಯವಿಲ್ಲ. ದೊಡ್ಡ ದೇವಾಲಯ ಇದು ಪ್ರಪಂಚದ ಅದ್ಭುತದಂತೆ ಕಾಣುತ್ತದೆ ಎಂದು ಉದ್ಯಮಿ ಎಲೋನ್ ಮಸ್ಕ್ (Elon Musk) ಅವರ ತಂದೆ ಎರೋಲ್ ಮಸ್ಕ್ (Errol Musk) ಹೇಳಿದ್ದಾರೆ. ಬುಧವಾರ ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ ಅವರು ಬಳಿಕ ಹತ್ತಿರದ ಹನುಮಾನ್‌ಗಢಿ ದೇವಸ್ಥಾನಕ್ಕೂ ಭೇಟಿ ನೀಡಿ ಅಲ್ಲಿ ಪೂಜೆ ಸಲ್ಲಿಸಿದರು.

ಟೆಸ್ಲಾ (Tesla) ಮತ್ತು ಸ್ಪೇಸ್‌ಎಕ್ಸ್ (SpaceX) ಸಿಇಒ ಹಾಗೂ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ಬುಧವಾರ ಮಧ್ಯಾಹ್ನ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಿದ್ದು, ಇದೊಂದು ಅದ್ಬುತ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಇಲ್ಲಿಗೆ ಭೇಟಿ ನೀಡಿರುವುದು ಅವರು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದು ಎಂದು ಹೇಳಿದರು.

ರಾಮ ಮಂದಿರಕ್ಕೆ ಭೇಟಿ ನೀಡಿದ ಬಳಿಕ ಅವರು ಹತ್ತಿರದ ಹನುಮಾನ್‌ಗಢಿ ದೇವಸ್ಥಾನಕ್ಕೂ ತೆರಳಿ ಅಲ್ಲಿ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಆಗ್ರಾದ ತಾಜ್‌ಮಹಲ್‌ಗೆ ಭೇಟಿ ನೀಡಲು ನಿರ್ಧರಿಸಿದ್ದರು. ಆದರೆ ಈ ಪ್ರದೇಶದಲ್ಲಿನ ತೀವ್ರ ಶಾಖದಿಂದಾಗಿ ಯೋಜನೆಯನ್ನು ಕೈ ಬಿಟ್ಟಿರುವುದಾಗಿ ತಿಳಿಸಿದರು.

ಅಯೋಧ್ಯೆ ಸಂಪೂರ್ಣವಾಗಿ ಅದ್ಭುತವಾಗಿದೆ. ಅಯೋಧ್ಯಾ ಭೇಟಿ ನಾನು ಮಾಡಿದ ಅತ್ಯುತ್ತಮ ಕೆಲಸಗಳಲ್ಲಿ ಒಂದು ಎಂದ ಅವರು, ನಾನು ರಾಮ ಮಂದಿರವನ್ನು ನೋಡಲು ಬಂದಿರುವುದು ತುಂಬಾ ಸಂತೋಷ ಕೊಟ್ಟಿದೆ. ದೇವಾಲಯ ಪೂರ್ಣಗೊಳ್ಳುವವರೆಗೆ ಕಾಯಲು ಸಾಧ್ಯವಿಲ್ಲ. ದೊಡ್ಡ ದೇವಾಲಯ, ಇದು ಪ್ರಪಂಚದ ಅದ್ಭುತದಂತೆ ಕಾಣುತ್ತದೆ ಎಂದು ತಿಳಿಸಿದರು.

ದೇವಾಲಯ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ನನ್ನ ಅನುಭವ ಅದ್ಭುತವಾಗಿದೆ. ಸರ್ವೋಟೆಕ್‌ನೊಂದಿಗೆ ಕೆಲಸ ಮಾಡಲು ನಾನು ಇಲ್ಲಿ ಬಂದಿದ್ದೇನೆ. ದೇಶದಲ್ಲಿ ಸಾಕಷ್ಟು ಸಮಯ ಕಳೆಯಲು ಎದುರು ನೋಡುತ್ತಿದ್ದೇನೆ. ದೇವಾಲಯಗಳು ಅದ್ಭುತವಾಗಿವೆ ಮತ್ತು ಇಲ್ಲಿನ ಜನರು ಕೂಡ.



ತಮ್ಮ ಮಗಳು ಅಲೆಕ್ಸಾಂಡ್ರಾ ಮಸ್ಕ್ ಜೊತೆಗೂಡಿ ಎರೋಲ್ ಮಸ್ಕ್ ಬುಧವಾರ ಮಧ್ಯಾಹ್ನ 2.30 ರ ಸುಮಾರಿಗೆ ಅಯೋಧ್ಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿ ಸಂಜೆ 4 ಗಂಟೆಯ ಅನಂತರ ಹೊರಟರು. ರಾಮ ಮಂದಿರಕ್ಕೆ ಭೇಟಿ ನೀಡಿದಾಗ ಅವರು ಕುರ್ತಾ-ಪೈಜಾಮ ಧರಿಸಿದ್ದರು.

ಎರೋಲ್ ಮಸ್ಕ್ ಭೇಟಿಯ ಸಮಯದಲ್ಲಿ ದೇವಾಲಯ ಪಟ್ಟಣದಲ್ಲಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು. ಅಯೋಧ್ಯೆಯಲ್ಲಿ ಈಗಾಗಲೇ ಮೂರು ಹಂತದ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆ ಇದೆ. ಇದರಲ್ಲಿ ಅನಧಿಕೃತ ವೈಮಾನಿಕ ಚಟುವಟಿಕೆಯನ್ನು ಪತ್ತೆ ಹಚ್ಚುವ ಮತ್ತು ತಟಸ್ಥಗೊಳಿಸುವ ಸಾಮರ್ಥ್ಯವಿರುವ ಹೈಟೆಕ್ ವಿರೋಧಿ ಡ್ರೋನ್ ವ್ಯವಸ್ಥೆ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿರುತ್ತದೆ. ಅಲ್ಲದೆ ದೇವಾಲಯ ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಭದ್ರತಾ ವ್ಯವಸ್ಥೆಗಳಲ್ಲಿ ಸಿಸಿಟಿವಿ ಕಣ್ಗಾವಲು, ಸಂದರ್ಶಕರ ನಿಯಮಿತ ತಪಾಸಣೆ ಮತ್ತು ವಿಶೇಷವಾಗಿ ತರಬೇತಿ ಪಡೆದ ಸಿಬ್ಬಂದಿಯ ನಿಯೋಜನೆಯನ್ನು ಒಳಗೊಂಡಿದೆ. ಹೀಗಾಗಿ ಎರೋಲ್ ಅವರ ಭೇಟಿಗೆ ಅಧಿಕೃತವಾಗಿ ಯಾವುದೇ ಹೆಚ್ಚುವರಿ ಭದ್ರತಾ ವ್ಯವಸ್ಥೆಯನ್ನು ವಿಸ್ತರಿಸಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Stampede: ಆರ್‌ಸಿಬಿ ಪೆರೇಡ್ ಕಾಲ್ತುಳಿತಕ್ಕೆ ಬ್ರಿಟನ್‌ ಮಾಜಿ ಪ್ರಧಾನಿ ರಿಷಿ ಸುನಕ್‌ ಸಂತಾಪ

ಸರ್ವೋಟೆಕ್ ನವೀಕರಿಸಬಹುದಾದ ವಿದ್ಯುತ್ ವ್ಯವಸ್ಥೆ ಲಿಮಿಟೆಡ್‌ನ ಜಾಗತಿಕ ಸಲಹೆಗಾರರಾಗಿರುವ ಎರೋಲ್ ಅವರು ಜೂನ್ 1ರಿಂದ ಭಾರತ ಪ್ರವಾಸವನ್ನು ಕೈಗೊಂಡಿದ್ದು, ಜೂನ್ 6 ರವರೆಗೆ ದೇಶದಲ್ಲಿರುತ್ತಾರೆ ಎಂದು ಹರಿಯಾಣ ಮೂಲದ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ. ಅವರ ಭೇಟಿಯು ಭಾರತದ ಬೆಳೆಯುತ್ತಿರುವ ಹಸಿರು ತಂತ್ರಜ್ಞಾನ ಮತ್ತು ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ ಎಂದು ಕಂಪೆನಿ ತಿಳಿಸಿದೆ.