Kannada Serial TRP: ಕೊನೆಯ ವಾರ ಸೀತಾ ರಾಮ ಧಾರಾವಾಹಿಗೆ ಸಿಕ್ಕ ಟಿಆರ್ಪಿ ಎಷ್ಟು?: ನಂಬರ್ ಒನ್ ಸೀರಿಯಲ್ ಯಾವುದು?
ಕಳೆದ ವಾರ ಝೀ ಕನ್ನಡದಲ್ಲಿ ಸೀತಾ ರಾಮ ಧಾರಾವಾಹಿ ಮುಕ್ತಾಯವಾಯಿತು. ಕೊನೆಯವಾರ ಆದ ಕಾರಣ ಇದಕ್ಕೆ ಉತ್ತಮ ಟಿಆರ್ಪಿ ಬರಬಹುದು ಎಂಬ ಲೆಕ್ಕಚಾರವಿತ್ತು. ಆದರೆ, ಅದು ಉಲ್ಟಾ ಆಗಿದೆ. ಕ್ಲೈಮ್ಯಾಕ್ಸ್ ವಾರದಲ್ಲಿ ಸೀತಾ ರಾಮ ಧಾರಾವಾಹಿಗೆ ಕೇವಲ 2.9 ಟಿವಿಆರ್ ಲಭಿಸಿದೆ.

Seetha rama

ಕನ್ನಡ ಕಿರುತೆರೆಯಲ್ಲಿ ಸೀರಿಯಲ್‌ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಇದರಲ್ಲಿ ಕೆಲವು ವರ್ಕೌಟ್ ಆದರೆ ಇನ್ನೂ ಕೆಲವು ಧಾರಾವಾಹಿಗೆ ಕೆಟ್ಟ ಕಮೆಂಟ್ಗಳು ಬರುತ್ತವೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್ಪಿ ಮೂಲಕ ತಿಳಿಯಲಿದೆ. ಒಂದೇ ಚಾನೆಲ್ನಲ್ಲಿ ಪ್ರಸಾರ ಆಗುವ ಧಾರಾವಾಹಿಗಳಾದರೂ ಅವುಗಳ ಮಧ್ಯೆ ಟಿಆರ್ಪಿ ಸ್ಪರ್ಧೆ ಇದ್ದೇ ಇರುತ್ತದೆ. ಒಳ್ಳೆಯ ಕ್ವಾಲಿಟಿ ಕಂಟೆಂಟ್ ಕೊಟ್ಟರೇ ವೀಕ್ಷಕರು ಖಂಡಿತ ಕೈ ಬಿಡೋದಿಲ್ಲ.
ಇದೀಗ 21ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಕೆಲ ಧಾರಾವಾಹಿಗಳ ಸಮಯ ಬದಲಾವಣೆಯಿಂದ ಟಿಆರ್ಪಿ ಕುಸಿದಿದೆ. ಅಲ್ಲದೆ ಕಳೆದ ಕೆಲವು ತಿಂಗಳುಗಳಿಂದ 2-3 ವರ್ಷಗಳಷ್ಟು ಹಳೆಯ ಸೀರಿಯಲ್‌ಗಳ ಟಿಆರ್‌ಪಿ ಕುಸಿದಿದ್ದು ಇನ್ನೂ ಮೇಲೆದ್ದಿಲ್ಲ. ಇದರ ಮಧ್ಯೆ ಕಳೆದ ವಾರ ಝೀ ಕನ್ನಡದಲ್ಲಿ ಸೀತಾ ರಾಮ ಧಾರಾವಾಹಿ ಮುಕ್ತಾಯವಾಯಿತು. ಕೊನೆಯವಾರ ಆದ ಕಾರಣ ಇದಕ್ಕೆ ಉತ್ತಮ ಟಿಆರ್ಪಿ ಬರಬಹುದು ಎಂಬ ಲೆಕ್ಕಚಾರವಿತ್ತು. ಆದರೆ, ಅದು ಉಲ್ಟಾ ಆಗಿದೆ.
ಕ್ಲೈಮ್ಯಾಕ್ಸ್ ವಾರದಲ್ಲಿ ಸೀತಾ ರಾಮ ಧಾರಾವಾಹಿಗೆ ಕೇವಲ 2.9 ಟಿವಿಆರ್ ಲಭಿಸಿದೆ. ಬರೀ ಅರ್ಬನ್ ಪ್ರದೇಶದಲ್ಲಿ ಸೀತಾ ರಾಮ ಫೈನಲ್ ಎಪಿಸೋಡ್‌ಗಳು 3.2 ಟಿವಿಆರ್ ದಾಖಲಿಸಿದೆ. ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಟ್ಟರೂ ಸೀತಾ ರಾಮ ಟಿಆರ್‌ಪಿ ಲೆಕ್ಕಾಚಾರದಲ್ಲಿ ಕಮಾಲ್ ಮಾಡಿಲ್ಲ. ಇನ್ನು ಕಿರುತೆರೆ ಲೋಕದ ನಂಬರ್ ಒನ್ ಧಾರಾವಾಹಿ ಯಾವುದು ಎಂಬುದನ್ನು ನೋಡುವುದಾದರೆ, ಮೊದಲ ಸ್ಥಾನದಲ್ಲಿ ಝೀ ಕನ್ನಡದ ಅಣ್ಣಯ್ಯ ಧಾರಾವಾಹಿ ಇದೆ. ಈ ಧಾರಾವಾಹಿ 7.9 ಟಿಆರ್‌ಪಿ ರೇಟಿಂಗ್ಸ್ ಪಡೆದು ಟಾಪ್‌ನಲ್ಲಿದೆ.
ಮೂರು ತಿಂಗಳ ಹಿಂದಷ್ಟೇ ಪ್ರಸಾರ ಆರಂಭಿಸಿದ ನಾ ನಿನ್ನ ಬಿಡಲಾರೆ ಧಾರಾವಾಹಿ 21ನೇ ವಾರದ ಟಿಆರ್‌ಪಿ ರೇಟಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಧಾರಾವಾಹಿಗೆ ಈಗ 7.5 ರೇಟಿಂಗ್ಸ್ ಸಿಕ್ಕಿದೆ. ಈ ಧಾರಾವಾಹಿ ಹಾರರ್ ಶೈಲಿಯಲ್ಲಿ ಮೂಡಿ ಬರುತ್ತಿದೆ.
Kwatle Kitchen: ಮಜಾ ಟಾಕೀಸ್ ಜಾಗಕ್ಕೆ ಹೊಸ ಶೋ ಎಂಟ್ರಿ: ಬರುತ್ತಿದೆ ಕ್ವಾಟ್ಲೆ ಕಿಚನ್
ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್ ಮೂರನೇ ಸ್ಥಾನದಲ್ಲಿದ್ದು 7.5 ರೇಟಿಂಗ್ ಪಡೆದಿದೆ. ಅಮೃತಧಾರೆ ಧಾರಾವಾಹಿ 7.2 ರೇಟಿಂಗ್, ಲಕ್ಷ್ಮೀ ನಿವಾಸ 6.9 ರೇಟಿಂಗ್ ಪಡೆದುಕೊಂಡಿದೆ. ಇನ್ನು ಕಲರ್ಸ್ ಕನ್ನಡದ ಧಾರಾವಾಹಿಯಲ್ಲಿ ಭಾಗ್ಯಲಕ್ಷ್ಮೀ 4.7 ಟಿವಿಆರ್ ಪಡೆದುಕೊಂಡು ಟಾಪ್‌ನಲ್ಲಿದೆ. ಮುದ್ದು ಸೊಸೆ 4.3 ಟಿವಿಆರ್, ನಿನಗಾಗಿ 3.9 ಟಿವಿಆರ್, ಭಾರ್ಗವಿ ಎಲ್‌ಎಲ್‌ಬಿ 3.7 ಟಿವಿಆರ್ ಪಡೆದು ನಂತರದ ಸ್ಥಾನದಲ್ಲಿದೆ.