International Yoga Day: ಯೋಗ ಎಲ್ಲರಿಗಾಗಿ: ವಿಶಾಖಪಟ್ಟಣದಲ್ಲಿ ಪಿಎಂ ನರೇಂದ್ರ ಮೋದಿ
ವಿಶಾಖಪಟ್ಟಣದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ (PM narendra Modi), ಯೋಗವನ್ನು ಮನುಕುಲದ 'ವಿರಾಮ ಬಟನ್' ಎಂದು ಕರೆದರು. ವಿಶಾಖಪಟ್ಟಣದಲ್ಲಿ ಸಾವಿರಾರು ಮಂದಿಯ ಜೊತೆಗೆ ಇಂದು ಮುಂಜಾನೆ ಯೋಗದಲ್ಲಿ ಅವರು ಪಾಲ್ಗೊಂಡರು.

ವಿಶಾಖಪಟ್ಟಣದ ಕಾರ್ಯಕ್ರಮದಲ್ಲಿ ಪಿಎಂ ನರೇಂದ್ರ ಮೋದಿ

ವಿಶಾಖಪಟ್ಟಣ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಶನಿವಾರ ವಿಶಾಖಪಟ್ಟಣದಲ್ಲಿ (Visakhapatnam) 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ (International Yoga Day) ನೇತೃತ್ವ ವಹಿಸಿದರು. ʼಯೋಗ ಎಲ್ಲರಿಗಾಗಿ. ಅದು ಮನುಕುಲದ ವಿರಾಮ (pause) ಬಟನ್ʼ ಎಂದು ಹೇಳಿದ ಅವರು, ಬೆಳೆಯುತ್ತಿರುವ ಜಾಗತಿಕ ಅಸ್ಥಿರತೆಯ ನಡುವೆ ಶಾಂತಿಯನ್ನು ಉತ್ತೇಜಿಸುವಲ್ಲಿ ಯೋಗದ ಮಹತ್ವವನ್ನು ಒತ್ತಿ ಹೇಳಿದರು.
ವಿಶಾಖಪಟ್ಟಣದಲ್ಲಿ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದ ಪ್ರಧಾನಿ ಮೋದಿ, ಯೋಗವನ್ನು ಮನುಕುಲದ 'ವಿರಾಮ ಬಟನ್' ಎಂದು ಕರೆದರು. ವಿಶಾಖಪಟ್ಟಣದಲ್ಲಿ ಸಾವಿರಾರು ಮಂದಿಯ ಜೊತೆಗೆ ಇಂದು ಮುಂಜಾನೆ ಯೋಗದಲ್ಲಿ ಅವರು ಪಾಲ್ಗೊಂಡರು. ನಂತರ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಯೋಗವನ್ನು "ಮಾನವೀಯತೆಯು ಉಸಿರಾಡಲು, ಸಮತೋಲನಗೊಳಿಸಲು ಮತ್ತು ಮತ್ತೆ ಪೂರ್ಣಗೊಳ್ಳಲು ಅಗತ್ಯವಿರುವ ವಿರಾಮ ಬಟನ್" ಎಂದು ಬಣ್ಣಿಸಿದರು.
Yoga isn't just an exercise. It is a way of life. Wonderful to join this year's Yoga Day celebrations in Visakhapatnam. https://t.co/ReTJ0Ju2sN
— Narendra Modi (@narendramodi) June 21, 2025
"ಯೋಗವು ನಮ್ಮನ್ನು ನನ್ನಿಂದ ನಮ್ಮ ಕಡೆಗೆ ಕರೆದೊಯ್ಯುವ ಅದ್ಭುತ ವ್ಯವಸ್ಥೆಯಾಗಿದೆ. ಇದು ಅದರ ಜಾಗತಿಕ ಏಕತೆಯನ್ನು ಬೆಳೆಸುವ ಶಕ್ತಿಯನ್ನು ಎತ್ತಿ ತೋರಿಸುತ್ತದೆ. ದುರದೃಷ್ಟವಶಾತ್, ಇಂದು ಇಡೀ ಜಗತ್ತು ಅನೇಕ ಪ್ರದೇಶಗಳಲ್ಲಿ ಕೆಲವು ಉದ್ವಿಗ್ನತೆ, ಅಶಾಂತಿ ಮತ್ತು ಅಸ್ಥಿರತೆಯ ಮೂಲಕ ಸಾಗುತ್ತಿದೆ. ಅಂತಹ ಸಮಯದಲ್ಲಿ, ಯೋಗವು ನಮಗೆ ಶಾಂತಿಯ ದಿಕ್ಕನ್ನು ನೀಡುತ್ತದೆ" ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವಿಶಾಖಪಟ್ಟಣದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಹಲವಾರು ಯೋಗಾಸನಗಳನ್ನು ಹಾಕಿದರು. ಯೋಗ ದಿನದ ಈ ವರ್ಷದ ಘೋಷವಾಕ್ಯ "ಒಂದೇ ಭೂಮಿ, ಒಂದೇ ಆರೋಗ್ಯಕ್ಕಾಗಿ ಯೋಗ." ಇದು ಭಾರತದ ಜಾಗತಿಕ ಯೋಗಕ್ಷೇಮದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.