ಶತಕ ಬಾರಿಸಿದ ಪಂತ್, ರಾಹುಲ್ ಶ್ಲಾಘಿಸಿದ ಸಂಜೀವ್ ಗೋಯೆಂಕಾ
ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2025ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಸತತ ವೈಫಲ್ಯ ಅನುಭವಸಿದ್ದರು. ಪಂತ್ ಆಟ ಸಾಕಷ್ಟು ಬಾರಿ ತಂಡ ಮಾಲೀಕ ಸಂಜೀವ್ ಗೋಯೆಂಕಾ ಕೆಂಗಣ್ಣಿಗೆ ಗುರಿಯಾಗಿತ್ತು. ಮೈದಾನದಲ್ಲಿ ರಿಷಭ್ ಪಂತ್ ಅವರನ್ನು ತರಾಟೆಗೆ ತೆದುಕೊಂಡು ಅವರೊಂದಿಗೆ ತೀವ್ರವಾದ ಮಾತುಕತೆ ನಡೆಸಿದ್ದ ಫೋಟೋ ಮತ್ತು ವಿಡಿಯೊಗಳು ವೈರಲ್ ಆಗಿತ್ತು


ಲಕ್ನೋ: ಇಂಗ್ಲೆಂಡ್ ಎದುರಿನ ಮೊದಲ ಟೆಸ್ಟ್‌ನ(IND vs ENG) ಎರಡೂ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ ರಿಷಭ್ ಪಂತ್(Rishabh Pant) ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಗಳಿಸಿದ ಕೆ.ಎಲ್ ರಾಹುಲ್(KL Rahul) ಅವರಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಸಂಜೀವ್ ಗೋಯೆಂಕಾ(Sanjiv Goenka) ಮೆಚ್ಚುಗೆ ಸೂಚಿಸಿದ್ದಾರೆ.
ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಂಜೀವ್ ಗೊಯೆಂಕಾ, 'ಎರಡು ಉತ್ತಮ ಆಟ! ಸತತ ಶತಕಗಳು. ಆಕ್ರಮಣಕಾರಿ, ದಿಟ್ಟ, ಅದ್ಭುತ ಬ್ಯಾಟಿಂಗ್ ಎಂದು ಪಂತ್ ಅವರನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಕೆಎಲ್ ರಾಹುಲ್ ಗೂ ಅಭಿನಂದನೆ ಸಲ್ಲಿಸಿದ್ದಾರೆ.
Two good! Back-to-back centuries for @RishabhPant17. Aggressive, audacious, brilliant. Only the second wicketkeeper in history to score a century in both innings of a Test. 👏🏻👏🏻👏🏻👏🏻👏🏻
— Dr. Sanjiv Goenka (@DrSanjivGoenka) June 23, 2025
Congratulations also to @klrahul for his hundred. #INDvsENG pic.twitter.com/WhU12EYVhE
ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2025ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಿಷಭ್ ಪಂತ್ ಸತತ ವೈಫಲ್ಯ ಅನುಭವಸಿದ್ದರು. ಪಂತ್ ಆಟ ಸಾಕಷ್ಟು ಬಾರಿ ತಂಡ ಮಾಲೀಕ ಸಂಜೀವ್ ಗೋಯೆಂಕಾ ಕೆಂಗಣ್ಣಿಗೆ ಗುರಿಯಾಗಿತ್ತು. ಮೈದಾನದಲ್ಲಿ ರಿಷಭ್ ಪಂತ್ ಅವರನ್ನು ತರಾಟೆಗೆ ತೆದುಕೊಂಡು ಅವರೊಂದಿಗೆ ತೀವ್ರವಾದ ಮಾತುಕತೆ ನಡೆಸಿದ್ದ ಫೋಟೋ ಮತ್ತು ವಿಡಿಯೊಗಳು ವೈರಲ್ ಆಗಿತ್ತು. ಇದಕ್ಕೂ ಮುನ್ನ ಲಲಕ್ನೋ ಪರ ಆಡಿದ್ದ ರಾಹುಲ್ ಜತೆಯೂ ಗೋಯೆಂಕಾ ಹಲವು ಬಾರಿ ಮೈದಾನದಲ್ಲಿ ಕೋಪದಿಂದಲೇ ವರ್ತಿಸಿದ್ದರು. ಇದೀಗ ಉತ್ತಮ ಪ್ರದರ್ಶನ ತೋರಿದ ವೇಳೆ ಶ್ಲಾಘಿಸಿದ್ದಾರೆ.
ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್‌ರ ಶತಕಗಳು ಭಾರತಕ್ಕೆ ನೆರವಾದರು. ಈ ಜೋಡಿ 4ನೇ ವಿಕೆಟ್‌ಗೆ 195 ರನ್ ಸೇರಿಸಿತು. ಪಂತ್ 118 ರನ್ ಗಳಿಸಿ ಔಟಾದರೆ, ರಾಹುಲ್ 137 ರನ್ ಕಲೆಹಾಕಿದರು. ಇವರಿಬ್ಬರ ವಿಕೆಟ್ ಪತನಗೊಂಡ ಬಳಿಕ ಭಾರತ ದಿಢೀರ್ ಕುಸಿತ ಕಂಡಿತು. ಮಂಗಳವಾರ ಅಂತಿಮ ದಿನವಾಗಿದ್ದು, ಇಂಗ್ಲೆಂಡ್ ಗೆಲುವಿಗೆ 350 ರನ್ ಅಗತ್ಯವಿದ್ದರೆ, ಭಾರತಕ್ಕೆ 10 ವಿಕೆಟ್ ಬೇಕಿದೆ. ಹೀಗಾಗಿ ಕ್ಲೈಮ್ಯಾಕ್ಸ್ ಭಾರೀ ಕುತೂಹಲ ಮೂಡಿಸಿದೆ. ಭಾರತದ 371 ರನ್ ಗುರಿ ಬೆನ್ನಟ್ಟುತ್ತಿರುವ ಇಂಗ್ಲೆಂಡ್ 4ನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 21 ರನ್ ಗಳಿಸಿದೆ.
ಇದನ್ನೂ ಓದಿ IND vs ENG: ಕೆಎಲ್ ರಾಹುಲ್, ರಿಷಭ್ ಪಂತ್ ಶತಕ, ಇಂಗ್ಲೆಂಡ್‌ಗೆ 371 ರನ್ ಗುರಿ ನೀಡಿದ ಭಾರತ!