ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

WCPL 2025: ಕೆರಿಬಿಯನ್‌ ಲೀಗ್‌ನಲ್ಲಿ ಆಡಲು ಸಜ್ಜಾದ ಶಿಖಾ ಪಾಂಡೆ, ಶ್ರೇಯಾಂಕಾ ಪಾಟೀಲ್‌

ಮೊಣಕಾಲಿನ ಮತ್ತು ಕೈ ಮುರಿತದ ಸಮಸ್ಯೆಗೆ ಒಳಗಾಗಿದ್ದ ಶ್ರೇಯಾಂಕಾ, 2024ರ ಟಿ20 ವಿಶ್ವಕಪ್ ನಂತರ ಯಾವುದೇ ಕ್ರಿಕೆಟ್‌ ಆಡಿಲ್ಲ. ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಆಟಗಾರ್ತಿಯಾಗಿರುವ ಶ್ರೇಯಾಂಕಾ ಗಾಯದ ಕಾರಣ ಕಳೆದ ಆವೃತ್ತಿಯಲ್ಲಿ ಆಡಿರಲಿಲ್ಲ.ಇದೀಗ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ ಮೂಲಕ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಕೆರಿಬಿಯನ್‌ ಲೀಗ್‌ನಲ್ಲಿ ಆಡಲು ಸಜ್ಜಾದ ಶಿಖಾ ಪಾಂಡೆ, ಶ್ರೇಯಾಂಕಾ ಪಾಟೀಲ್‌

Profile Abhilash BC Jun 24, 2025 12:51 PM

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ಗಳಾದ ಶ್ರೇಯಾಂಕಾ ಪಾಟೀಲ್(Shreyanka Patil) ಮತ್ತು ಶಿಖಾ ಪಾಂಡೆ(Shikha Pandey) ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ಗೆ(WCPL 2025) ಮರಳಲಿದ್ದು, 2025 ರ ಆವೃತ್ತಿಯು ಸೆಪ್ಟೆಂಬರ್ 6 ರಿಂದ ಪ್ರಾರಂಭವಾಗಲಿದೆ. ಈ ಹಿಂದೆ ಶ್ರೇಯಾಂಕ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಈ ಬಾರಿ ಎರಡು ಬಾರಿಯ ಚಾಂಪಿಯನ್ ಬಾರ್ಬಡೋಸ್ ರಾಯಲ್ಸ್ ತಂಡ ಪರ ಆಡಲಿದ್ದಾರೆ. ಏತನ್ಮಧ್ಯೆ, ಕಳೆದ ಋತುವಿನ ಯಶಸ್ವಿ ಪ್ರದರ್ಶನದ ನಂತರ ಪಾಂಡೆ ಅವರನ್ನು ಟ್ರಿನ್‌ಬಾಗೊ ನೈಟ್ ರೈಡರ್ಸ್ ತಂಡದಲ್ಲಿ ಉಳಿಸಿಕೊಂಡಿದೆ.

ಮೊಣಕಾಲಿನ ಮತ್ತು ಕೈ ಮುರಿತದ ಸಮಸ್ಯೆಗೆ ಒಳಗಾಗಿದ್ದ ಶ್ರೇಯಾಂಕಾ, 2024ರ ಟಿ20 ವಿಶ್ವಕಪ್ ನಂತರ ಯಾವುದೇ ಕ್ರಿಕೆಟ್‌ ಆಡಿಲ್ಲ. ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಆಟಗಾರ್ತಿಯಾಗಿರುವ ಶ್ರೇಯಾಂಕಾ ಗಾಯದ ಕಾರಣ ಕಳೆದ ಆವೃತ್ತಿಯಲ್ಲಿ ಆಡಿರಲಿಲ್ಲ.ಇದೀಗ ಮಹಿಳಾ ಕೆರಿಬಿಯನ್ ಪ್ರೀಮಿಯರ್ ಲೀಗ್‌ ಮೂಲಕ ಮತ್ತೆ ಕ್ರಿಕೆಟ್‌ಗೆ ಕಮ್‌ಬ್ಯಾಕ್‌ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಸತತ ಎರಡು ಪ್ರಶಸ್ತಿಗಳನ್ನು ಗೆದ್ದಿರುವ ಹೇಲಿ ಮ್ಯಾಥ್ಯೂಸ್ ನೇತೃತ್ವದ ರಾಯಲ್ಸ್ ತಂಡವು ಚಿನೆಲ್ಲೆ ಹೆನ್ರಿ, ಅಫಿ ಫ್ಲೆಚರ್ ಮತ್ತು ಆಲಿಯಾ ಅಲ್ಲೆನ್, ಚಾಮರಿ ಅತಪಟ್ಟು ಅವರೊಂದಿಗೆ ತಮ್ಮ ಪ್ರಮುಖ ಆಟಗಾರ್ತಿಯರನ್ನು ಉಳಿಸಿಕೊಂಡಿದೆ.

2024 ರಲ್ಲಿ ರನ್ನರ್ ಅಪ್ ಆಗಿರುವ ನೈಟ್ ರೈಡರ್ಸ್ ತಂಡವು ಅನುಭವಿ ಆಟಗಾರ್ತಿ ಡಿಯಾಂಡ್ರಾ ಡಾಟಿನ್, ಜಹಜಾರಾ ಕ್ಲಾಕ್ಸ್ಟನ್, ಜೈದಾ ಜೇಮ್ಸ್, ಜನ್ನಿಲಿಯಾ ಗ್ಲ್ಯಾಸ್ಗೋ, ಶಬಿಕಾ ಗಜ್ನಬಿ, ರಶಾದಾ ವಿಲಿಯಮ್ಸ್ ಮತ್ತು ಅಬಿಗೈಲ್ ಬ್ರೈಸ್, ಶಿಖಾ ಪಾಂಡೆ ಅವರಂತಹ ಅನುಭವಿ ಆಟಗಾರ್ತಿಯರು ಕಾಣಿಸಿಕೊಂಡಿದ್ದಾರೆ.

ಟ್ರಿನ್‌ಬಾಗೊ ನೈಟ್ ರೈಡರ್ಸ್

ಡಿಯಾಂಡ್ರಾ ಡಾಟಿನ್, ಶಬಿಕಾ ಗಜ್ನಾಬಿ, ಶಾವ್ನಿಶಾ ಹೆಕ್ಟರ್, ರಶಾದಾ ವಿಲಿಯಮ್ಸ್, ನೆರಿಸ್ಸಾ ಕ್ರಾಫ್ಟನ್, ಜಹಜಾರಾ ಕ್ಲಾಕ್ಸ್‌ಟನ್, ಜೈದಾ ಜೇಮ್ಸ್, ಜನ್ನಿಲಿಯಾ ಗ್ಲಾಸ್ಗೋ, ಕೀಲಾ ಎಲಿಯಟ್, ಅಬಿಗೈಲ್ ಬ್ರೈಸ್, ಸಮರಾ ರಾಮನಾಥ್, ಜೆಸ್ ಜೊನಾಸೆನ್, ಲಿಜೆಲ್ಲೆ ಲೀ, ಶಿಖಾ ಪಾಂಡೆ, ಸಲೋನಿ ಡಂಗೋರೆ.

ಇದನ್ನೂ ಓದಿ IND vs ENG: ಅಂತಿಮ ದಿನದಾಟದಲ್ಲಿ ಮಳೆ ಪಾತ್ರ ನಿರ್ಣಾಯಕ

ಬಾರ್ಬಡೋಸ್ ರಾಯಲ್ಸ್

ಹೇಲಿ ಮ್ಯಾಥ್ಯೂಸ್, ಚಿನೆಲ್ಲೆ ಹೆನ್ರಿ, ಅಫಿ ಫ್ಲೆಚರ್, ಆಲಿಯಾ ಅಲ್ಲೆನೆ, ಕಿಸಿಯಾ ನೈಟ್, ಸ್ಟೆಫಿ ಸೂಗ್ರಿಮ್, ಶಮಿಲಿಯಾ ಕಾನೆಲ್, ಶೆನೆಟಾ ಗ್ರಿಮ್ಮಂಡ್, ಕಿಯಾನಾ ಜೋಸೆಫ್, ತ್ರಿಶನ್ ಹೋಲ್ಡರ್, ನೈಜಾನಿ ಕಂಬರ್‌ಬ್ಯಾಚ್, ಚಾಮರಿ ಅತಪಟ್ಟು, ಜಾರ್ಜಿಯಾ ರೆಡ್‌ಮೇನ್, ಕರ್ಟ್ನಿ ವೆಬ್, ಶ್ರೇಯಾಂಕಾ ಪಾಟೀಲ್.