ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ದಾಖಲೆ ಬರೆದ ಬುಮ್ರಾ, ಪಂತ್‌

3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್‌ 465ರನ್‌ ಸರ್ವಪತನ ಕಂಡಿತು. ಹ್ಯಾರಿ ಬ್ರೂಕ್ಸ್‌ 99 ರನ್‌ ಗಳಿಸಿ ಕೇವಲ ಒಂದು ರನ್‌ ಅಂತರದಿಂದ ಶತಕ ವಂಚಿತರಾದರು. ನಾಯಕ ಬೆನ್‌ ಸ್ಟೋಕ್ಸ್‌ 20 ರನ್‌ ಗಳಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು.

ದಾಖಲೆ ಬರೆದ ಜಸ್‌ಪ್ರೀತ್‌ ಬುಮ್ರಾ, ರಿಷಭ್‌ ಪಂತ್‌

Profile Abhilash BC Jun 22, 2025 9:44 PM

ಲೀಡ್ಸ್‌: ಇಂಗ್ಲೆಂಡ್‌(IND vs ENG) ಎದುರು ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್‌ ಇಂಡಿಯಾದ ಆಟಗಾರರಾದ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಮತ್ತು ರಿಷಭ್‌ ಪಂತ್‌(Rishabh Pant) ಅವರು ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಜಸ್‌ಪ್ರೀತ್‌ ಬುಮ್ರಾ ಅವರು 5 ವಿಕೆಟ್‌ ಕೀಳುವ ಮೂಲಕ ವಿದೇಶ ನೆಲದಲ್ಲಿ ಅತ್ಯಧಿಕ ಬಾರಿ 5 ವಿಕೆಟ್‌ ಗೊಂಚಲು ಪಡೆದ ದಿಗ್ಗಜ ಆಟಗಾರ ಕಪಿಲ್‌ದೇವ್‌(12 ಬಾರಿ) ದಾಖಲೆ ಸರಿಗಟ್ಟಿದರು.

ರಿಷಭ್‌ ಪಂತ್‌ ಅವರು ಮೂರನೇ ದಿನದಾಟದಲ್ಲಿ ಕ್ಯಾಚ್‌ ಒಂದನ್ನು ಪಡೆಯುವ ಮೂಲಕ ಟೆಸ್ಟ್‌ನಲ್ಲಿ 150 ಕ್ಯಾಚ್ ಪಡೆದ 3ನೇ ಭಾರತೀಯ ವಿಕೆಟ್ ಕೀಪರ್ ಎನಿಸಿಕೊಂಡರು. ಸಯ್ಯದ್‌ ಕಿರ್ಮಾನಿ ಮತ್ತು ಧೋನಿ ಮೊದಲಿಬ್ಬರು. ಅತ್ಯಧಿಕ ಕ್ಯಾಚ್‌ ದಾಖಲೆ ಧೋನಿ(256) ಹೆಸರಿನಲ್ಲಿದೆ. ಕಿರ್ಮಾನಿ(160) ದ್ವಿತೀಯ ಸ್ಥಾನದಲ್ಲಿದ್ದಾರೆ.

ವಿದೇಶಿ ನೆಲದಲ್ಲಿ ಅತ್ಯಧಿಕ 5 ವಿಕೆಟ್‌ ಸಾಧನೆ

12-ಜಸ್‌ಪ್ರೀತ್‌ ಬುಮ್ರಾ (34 ಟೆಸ್ಟ್) *

12- ಕಪಿಲ್ ದೇವ್ (66 ಟೆಸ್ಟ್)

9-ಇಶಾಂತ್ ಶರ್ಮಾ (63 ಟೆಸ್ಟ್)

8-ಜಹೀರ್ ಖಾನ್ (54 ಟೆಸ್ಟ್)

7-ಇರ್ಫಾನ್ ಪಠಾಣ್ (15 ಟೆಸ್ಟ್)



ಮೊದಲ ಇನಿಂಗ್ಸ್‌ನಲ್ಲಿ(IND vs ENG 1st Test) ಭಾರತ 6 ರನ್‌ ಅಂತರದ ಮುನ್ನಡೆ ಸಾಧಿಸಿ ದ್ವಿತೀಯ ಇನಿಂಗ್ಸ್‌ ಆರಂಭಿಸಿದೆ. ಮೊದಲ ಇನಿಂಗ್ಸ್‌ ಶತಕ ವೀರ ಜೈಸ್ವಾಲ್‌ 4 ರನ್‌ ಗಳಿಸಿ ನಿರಾಸೆ ಮೂಡಿಸಿದರು. 3 ವಿಕೆಟ್ ನಷ್ಟಕ್ಕೆ 209 ರನ್ ಗಳಿಸಿದ್ದಲ್ಲಿಂದ ಮೂರನೇ ದಿನದಾಟ ಆರಂಭಿಸಿದ ಇಂಗ್ಲೆಂಡ್‌ 465ರನ್‌ ಸರ್ವಪತನ ಕಂಡಿತು. ಹ್ಯಾರಿ ಬ್ರೂಕ್ಸ್‌ 99 ರನ್‌ ಗಳಿಸಿ ಕೇವಲ ಒಂದು ರನ್‌ ಅಂತರದಿಂದ ಶತಕ ವಂಚಿತರಾದರು. ನಾಯಕ ಬೆನ್‌ ಸ್ಟೋಕ್ಸ್‌ 20 ರನ್‌ ಗಳಿಸಿ ಸಿರಾಜ್‌ಗೆ ವಿಕೆಟ್‌ ಒಪ್ಪಿಸಿದರು.

ಇದನ್ನೂ ಓದಿ IND vs ENG 1st Test: ಅಂಪೈರ್‌ ತೀರ್ಪಿಗೆ ಚೆಂಡೆಸೆದ ಪಂತ್‌ಗೆ ದಂಡದ ಭೀತಿ