ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Root: ಭಾರತ ವಿರುದ್ಧ ವಿಶ್ವ ದಾಖಲೆ ಬರೆಯಲು ಸಜ್ಜಾದ ಜೋ ರೂಟ್‌

ರೂಟ್​ ಭಾರತ ವಿರುದ್ಧ ಆಡಿದ 30 ಟೆಸ್ಟ್​ಗಳಲ್ಲಿ 10 ಶತಕಗಳ ಸಹಿತ ಸರ್ವಾಧಿಕ 2,846 ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ಸರಣಿಯಲ್ಲಿ ಅವರು 154 ರನ್‌ ಬಾರಿಸಿದರೆ ಭಾರತ ವಿರುದ್ಧ 3 ಸಾವಿರ ರನ್​ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಅತ್ಯಧಿಕ ಟೆಸ್ಟ್‌ ರನ್‌ ಬಾರಿಸಿದ ದಾಖಲೆ ಕೂಡ ರೂಟ್‌ ಹೆಸರಿನಲ್ಲಿದೆ.

ಭಾರತ ವಿರುದ್ಧ ವಿಶ್ವ ದಾಖಲೆ ಬರೆಯಲು ಸಜ್ಜಾದ ಜೋ ರೂಟ್‌

Profile Abhilash BC Jun 20, 2025 9:10 AM

ಲೀಡ್ಸ್‌: ಪ್ರವಾಸಿ ಭಾರತ ತಂಡ ಇಂದಿನಿಂದ(ಜೂ.20) ಇಂಗ್ಲೆಂಡ್‌ ಟೆಸ್ಟ್‌(IND vs ENG 1st Test) ಸರಣಿಯಲ್ಲಿ ಕಣಕ್ಕಿಳಿಯಲಿದೆ. 2025-27ರ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಶುಭಾರಂಭ ಮಾಡುವ ಗುರಿ ಇಟ್ಟುಕೊಂಡಿರುವ ಉಭಯ ತಂಡಗಳು(IND vs ENG) ಮೊದಲ ಟೆಸ್ಟ್‌ ಪಂದ್ಯಕ್ಕೆ ಸಜ್ಜಾಗಿವೆ. 36 ಶತಕ ಒಳಗೊಂಡ 13000+ ರನ್‌ಗಳ ಸರದಾರ ಜೋ ರೂಟ್‌ಗೆ(Joe Root) ಭಾರತ ವಿರುದ್ಧ ವಿಶ್ವ ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ.

ರೂಟ್​ ಭಾರತ ವಿರುದ್ಧ ಆಡಿದ 30 ಟೆಸ್ಟ್​ಗಳಲ್ಲಿ 10 ಶತಕಗಳ ಸಹಿತ ಸರ್ವಾಧಿಕ 2,846 ರನ್​ ಬಾರಿಸಿದ ದಾಖಲೆ ಹೊಂದಿದ್ದಾರೆ. ಈ ಸರಣಿಯಲ್ಲಿ ಅವರು 154 ರನ್‌ ಬಾರಿಸಿದರೆ ಭಾರತ ವಿರುದ್ಧ 3 ಸಾವಿರ ರನ್​ ಸಿಡಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಭಾರತ ವಿರುದ್ಧ ಅತ್ಯಧಿಕ ಟೆಸ್ಟ್‌ ರನ್‌ ಬಾರಿಸಿದ ದಾಖಲೆ ಕೂಡ ರೂಟ್‌ ಹೆಸರಿನಲ್ಲಿದೆ.

ಭಾರತದ ವಿರುದ್ಧ ಅತಿ ಹೆಚ್ಚು ಟೆಸ್ಟ್ ರನ್‌ಗಳು

ಜೋ ರೂಟ್: 30 ಪಂದ್ಯಗಳಲ್ಲಿ 2846* ರನ್‌ಗಳು

ರಿಕಿ ಪಾಂಟಿಂಗ್: 29 ಪಂದ್ಯಗಳಲ್ಲಿ 2555 ರನ್‌ಗಳು

ಅಲಾಸ್ಟೇರ್ ಕುಕ್: 30 ಪಂದ್ಯಗಳಲ್ಲಿ 2431 ರನ್‌ಗಳು

ಸ್ಟೀವ್ ಸ್ಮಿತ್: 24 ಪಂದ್ಯಗಳಲ್ಲಿ 2356* ರನ್‌ಗಳು

ಕ್ಲೈವ್ ಲಾಯ್ಡ್: 28 ಪಂದ್ಯಗಳಲ್ಲಿ 2344 ರನ್‌ಗಳು

ಸ್ಮಿತ್ ಅವರ ಐತಿಹಾಸಿಕ ದಾಖಲೆಯ ಮೇಲೆ ರೂಟ್ ಕಣ್ಣು

ರೂಟ್(10) ಭಾರತದ ವಿರುದ್ಧ ಎರಡನೇ ಅತಿ ಹೆಚ್ಚು ಟೆಸ್ಟ್ ಶತಕಗಳನ್ನು ಹೊಂದಿದ್ದಾರೆ. ದಾಖಲೆ ಆಸ್ಟ್ರೇಲಿಯಾ ಸ್ಟೀವ್‌ ಸ್ಮಿತ್‌(11) ಹೆಸರಿನಲ್ಲಿದೆ. ಈ ಬಾರಿಯ ಸರಣಿಯಲ್ಲಿ ರೂಟ್‌ ಎರಡು ಶತಕ ಬಾರಿಸಿದರೆ ಸ್ಮಿತ್‌ ದಾಖಲೆಯನ್ನು ಮುರಿಯಲಿದ್ದಾರೆ.

ಇದನ್ನೂ ಓದಿ IND vs ENG: ʻಹೊರಗಡೆ ಮಾತುಗಳಿಗೆ ಕಿವಿ ಕೊಡಬೇಡಿʼ-ಶುಭಮನ್‌ ಗಿಲ್‌ಗೆ ಸಲಹ ನೀಡಿದ ತೆಂಡೂಲ್ಕರ್‌!

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಅತಿ ಹೆಚ್ಚು ಶತಕಗಳು

ಸ್ಟೀವ್ ಸ್ಮಿತ್: 11 ಶತಕಗಳು

ಜೋ ರೂಟ್: 10 ಶತಕಗಳು

ರಿಕಿ ಪಾಂಟಿಂಗ್: 8 ಶತಕಗಳು

ವಿವ್ ರಿಚರ್ಡ್ಸ್: 8 ಶತಕಗಳು

ಗ್ಯಾರಿ ಸೋಬರ್ಸ್: 8 ಶತಕಗಳು