ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಟೆಸ್ಟ್​ ವಿಶ್ವ ಚಾಂಪಿಯನ್​ ಬವುಮಾ ಪಡೆಗೆ ತವರಿನಲ್ಲಿ ಅದ್ಧೂರಿ ಸ್ವಾಗತ

WTC Final 2025: ಬವುಮಾ ಟೆಸ್ಟ್‌ ನಾಯಕನಾದ ಬಳಿಕ ದಕ್ಷಿಣ ಆಫ್ರಿಕಾ ಒಂದೇ ಒಂದು ಟೆಸ್ಟ್‌ ಸೋಲು ಕಂಡಿಲ್ಲ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ಪಾಲಿನ ಲಕ್ಕಿ ಕ್ಯಾಪ್ಟನ್‌ ಎನ್ನಬಹುದು. 2023ರಲ್ಲಿ ಡೀನ್‌ ಎಲ್ಗರ್‌ರಿಂದ ತೆರವಾದ ಟೆಸ್ಟ್‌ ತಂಡದ ನಾಯಕನ ಸ್ಥಾನಕ್ಕೆ ತೆಂಬಾ ಬವುಮಾ ಆಯ್ಕೆಯಾಗಿದ್ದರು. ಆ ಬಳಿಕ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಒಂದೂ ಟೆಸ್ಟ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ

ಟೆಸ್ಟ್​ ವಿಶ್ವ ಚಾಂಪಿಯನ್​ ಬವುಮಾ ಪಡೆಗೆ ತವರಿನಲ್ಲಿ ಅದ್ಧೂರಿ ಸ್ವಾಗತ

Profile Abhilash BC Jun 19, 2025 8:54 AM

ಜೊಹಾನ್ಸ್​ರ್ಬಗ್: 27 ವರ್ಷಗಳ ಬಳಿಕ ಐಸಿಸಿ ಟ್ರೋಫಿ ಎತ್ತಿರುವ ದಕ್ಷಿಣ ಆಫ್ರಿಕಾ(South Africa) ತಂಡಕ್ಕೆ ತವರನಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. ಜೊಹಾನ್ಸ್​ರ್ಬಗ್​ ವಿಮಾನ ನಿಲ್ದಾಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಹೂಗುಚ್ಛ ಮತ್ತು ರಾಷ್ಟ್ರೀಯ ಧ್ವಜದೊಂದಿಗೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಪ್ರಶಸ್ತಿ(WTC Final 2025) ಗೆದ್ದ ಆಟಗಾರರನ್ನು ಸ್ವಾಗತಿಸಿದರು. ಲಂಡನ್‌ನಲ್ಲಿ ನಡೆದಿದ್ದ ಟೆಸ್ಟ್‌ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 5 ವಿಕೆಟ್‌ಗಳ ಅಂತರದಿಂದ ಮಣಿಸಿ ಚೋಕರ್ಸ್​ ಹಣೆಪಟ್ಟಿಯನ್ನು ಕಳಚಿತ್ತು. ಡಬ್ಲ್ಯುಟಿಸಿ ಟ್ರೋಫಿಯಾಗಿರುವ ಚಿನ್ನದ ಗದೆಯೊಂದಿಗೆ ಬವುಮಾ(Temba Bavuma) ಹೆಮ್ಮೆಯಿಂದ ವಿಮಾನ ನಿಲ್ದಾಣದಿಂದ ಹೊರಬಂದು ಅಭಿಮಾನಿಗಳತ್ತ ಕೈಬೀಸಿ ಧನ್ಯವಾದ ತಿಳಿಸಿದರು.

ಬವುಮಾ ಟೆಸ್ಟ್‌ ನಾಯಕನಾದ ಬಳಿಕ ದಕ್ಷಿಣ ಆಫ್ರಿಕಾ ಒಂದೇ ಒಂದು ಟೆಸ್ಟ್‌ ಸೋಲು ಕಂಡಿಲ್ಲ. ಹೀಗಾಗಿ ಅವರು ದಕ್ಷಿಣ ಆಫ್ರಿಕಾ ಪಾಲಿನ ಲಕ್ಕಿ ಕ್ಯಾಪ್ಟನ್‌ ಎನ್ನಬಹುದು. 2023ರಲ್ಲಿ ಡೀನ್‌ ಎಲ್ಗರ್‌ರಿಂದ ತೆರವಾದ ಟೆಸ್ಟ್‌ ತಂಡದ ನಾಯಕನ ಸ್ಥಾನಕ್ಕೆ ತೆಂಬಾ ಬವುಮಾ ಆಯ್ಕೆಯಾಗಿದ್ದರು. ಆ ಬಳಿಕ ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಒಂದೂ ಟೆಸ್ಟ್‌ನಲ್ಲಿ ಸೋತಿಲ್ಲ ಎಂಬುದು ಗಮನಾರ್ಹ. ಬವುಮಾ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ 10 ಟೆಸ್ಟ್‌ ಆಡಿದೆ. 9ರಲ್ಲಿ ಗೆದ್ದಿದ್ದರೆ, 1 ಪಂದ್ಯ ಡ್ರಾಗೊಂಡಿದೆ.



ಚೊಚ್ಚಲ ವಿಶ್ವಕಪ್‌ ಟ್ರೋಫಿಯೊಂದನ್ನು ಗೆಲ್ಲುವ ಮೂಲಕ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್‌ ಹಣೆಪಟ್ಟಿಯನ್ನು ಕಳಚಿಕೊಂಡಿತು. ಇದಕ್ಕೂ ಮುನ್ನ ತಂಡ ಐಸಿಸಿ ಟೂರ್ನಿಗಳ ಮಹತ್ವದ ಪಂದ್ಯಗಳಲ್ಲಿ, ಗೆಲುವಿನ ಸನಿಹದಲ್ಲಿದ್ದರೂ ಸೋತು ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿತ್ತು. ಆದರೆ ಈ ಬಾರಿ ಅದೃಷ್ಟ ತಂಡದ ಪರ ಇತ್ತು.



ಇದನ್ನೂ ಓದಿ WTC Final 2025: ಆಸೀಸ್‌ ಆಟಗಾರರ ಅಸಹ್ಯಕರ ಸ್ಲೆಡ್ಜಿಂಗ್; ಬುವುಮಾ ಗಂಭೀರ ಆರೋಪ

ಈ ಹಿಂದೆ ಏಕದಿನ ವಿಶ್ವಕಪ್‌ನಲ್ಲಿ 5 ಬಾರಿ ಸೆಮಿಫೈನಲ್‌, ಟಿ20 ವಿಶ್ವಕಪ್‌ನಲ್ಲಿ 1 ಫೈನಲ್‌, 2 ಬಾರಿ ಸೆಮಿಫೈನಲ್‌, ಚಾಂಪಿಯನ್ಸ್‌ ಟ್ರೋಫಿಯಲ್ಲಿ 5 ಬಾರಿ ಸೆಮಿಫೈನಲ್‌ನಲ್ಲಿ ಸೋತಿತ್ತು. ಈ ಪೈಕಿ, 2024ರಲ್ಲಿ ಭಾರತ ವಿರುದ್ಧ ಟಿ20 ವಿಶ್ವಕಪ್‌ ಫೈನಲ್‌ನಲ್ಲಿ ಸುಲಭದಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿ ಸೋತಿತ್ತು. ಆದರೆ ಈ ಬಾರಿ ಎಲ್ಲ ಸವಾಲು ಮತ್ತು ವಿಶ್ವ ಚಾಂಪಿಯನ್‌ ಆಸೀಸ್‌ ಮಣಿಸಿ ಟ್ರೋಫಿ ಗೆದ್ದದ್ದು ನಿಜಕ್ಕೂ ತಂಡದ ಅಮೋಘ ಸಾಧನೆಯಾಗಿದೆ.