ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಭ್ಯಾಸದ ವೇಳೆ ಗಾಯ; ಮೊದಲ ಟೆಸ್ಟ್‌ಗೆ ಕರುಣ್‌ ನಾಯರ್‌ ಅನುಮಾನ!

Karun Nair: 2017 ರ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿದ್ದ ಕರುಣ್ ನಾಯರ್‌ಗೆ ಗಾಯದ ಸಮಸ್ಯೆ ಅಡ್ಡಿಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅವರು 8 ವರ್ಷದ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದರು.

ಅಭ್ಯಾಸದ ವೇಳೆ ಗಾಯ; ಮೊದಲ ಟೆಸ್ಟ್‌ಗೆ ಕರುಣ್‌ ನಾಯರ್‌ ಅನುಮಾನ!

Profile Abhilash BC Jun 19, 2025 10:29 AM

ಲೀಡ್ಸ್‌: ದೇಶೀಯ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸಿ, ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಆಡಲು ಸಜ್ಜಾಗುತ್ತಿರುವ ಕರ್ನಾಟಕದ ಕರುಣ್‌ ನಾಯರ್‌(Karun Nair)ಗೆ ತೀವ್ರವಾದ ಗಾಯದ ಭೀತಿ(karun nair injury) ಎದುರಾಗಿದೆ. ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ(Prasidh Krishna) ಅವರನ್ನು ನೆಟ್‌ನಲ್ಲಿ ಎದುರಿಸುತ್ತಿದ್ದಗಾ ನಾಯರ್ ಅವರ ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಹೀಗಾಗಿ ಶುಕ್ರವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಆಡುವುದು ಅನುಮಾನ ಎನ್ನಲಾಗಿದೆ.

2017 ರ ನಂತರ ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ಆಡುವ ನಿರೀಕ್ಷೆಯಲ್ಲಿದ್ದ ಕರುಣ್ ನಾಯರ್‌ಗೆ ಗಾಯದ ಸಮಸ್ಯೆ ಅಡ್ಡಿಯಾಗಿದೆ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಅವರು 8 ವರ್ಷದ ಬಳಿಕ ರಾಷ್ಟ್ರೀಯ ತಂಡಕ್ಕೆ ಕಮ್‌ಬ್ಯಾಕ್‌ ಮಾಡಿದ್ದರು. ಗಾಯದ ಬಳಿಕ ಬ್ಯಾಟಿಂಗ್‌ ಆರಂಭಿಸಿದರೂ ಮತ್ತೆ ನೋವು ಕಾಣಿಸಿಕೊಂಡ ಕಾರಣ ಅವರು ಅಭ್ಯಾಸ ಮೊಟಕುಗೊಳಿಸಿದ್ದರು. ಹೀಗಾಗಿ ಮೊದಲ ಪಂದ್ಯದಲ್ಲಿ ಅವರು ಆಡುವುದು ಬಹುತೇಕ ಅನುಮಾನ ಎನ್ನುವಂತಿದೆ. ಕ್ರಿಕೆಟ್‌ ದಿಗ್ಗಜ ವೀರೇಂದ್ರ ಸೆಹ್ವಾಗ್ ಹೊರತುಪಡಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಎರಡನೇ ಆಟಗಾರ ಅವರಾಗಿದ್ದಾರೆ.

ಸರಣಿ ಆರಂಭಕ್ಕೂ ಮುನ್ನ ಕರುಣ್‌ ನಾಯರ್‌ ತಮ್ಮ ವೃತ್ತಿಜೀವನದಲ್ಲಿ ಅನುಭವಿಸಿದ ಕಠಿಣ ಸನ್ನಿವೇಶವನ್ನು ಸ್ಮರಿಸಿಕೊಂಡಿದ್ದರು. 2022ರ ವರ್ಷಾಂತ್ಯ ನನ್ನ ಪಾಲಿಗೆ ಅತ್ಯಂತ ಕಠಿಣ ಅವಧಿಯಾಗಿತ್ತು. ಅದು ಒಂದು ರೀತಿಯ ಅಂಧಕಾರದ ಸಮಯ. ನನ್ನ ಕ್ರಿಕೆಟ್‌ ಜೀವನದ ಭಾವನಾತ್ಮಕ ಹಂತವೂ ಹೌದು. 2018ರಲ್ಲೂ ಇಷ್ಟೊಂದು ಕಠಿಣ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದು ಹೇಳಿದ್ದರು.



ಇದನ್ನೂ ಓದಿ IND vs ENG 1st Test: ಲೀಡ್ಸ್‌ನಲ್ಲಿ ಭಾರತದ ಟೆಸ್ಟ್‌ ಸಾಧನೆ ಹೇಗಿದೆ?

"ಕಳೆದ ಮೂರು ವರ್ಷಗಳಲ್ಲಿ ನನ್ನ ಪ್ರಯಾಣದ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಪ್ರತಿ ಕ್ಷಣವನ್ನು ಗೌರವಿಸಲು ಮತ್ತು ಪ್ರತಿದಿನವನ್ನು ಹೊಸದೆಂದು ಪರಿಗಣಿಸುವುದನ್ನು ಕಲಿತಿದ್ದೇನೆ’ ಎಂದು ಕರುಣ್‌ ನಾಯರ್‌ ಹೇಳಿದ್ದರು.