South Indian Films: ʼಎಕ್ಕʼ, ʼಘಾಟಿʼ...: ಜುಲೈಯಲ್ಲಿ ತೆರೆಕಾಣಲಿವೆ ಬಹು ನಿರೀಕ್ಷಿತ ಚಿತ್ರಗಳು
ಜುಲೈಯಲ್ಲಿ ದಕ್ಷಿಣ ಭಾರತದ ಚಲನಚಿತ್ರೋದ್ಯಮದಲ್ಲಿ ಸಾಲು ಸಾಲು ಬಹುನಿರೀಕ್ಷಿತ ಸಿನಿಮಾಗಳು ತರೆ ಕಾಣಲಿದೆ. ಕೆಲ ಸಿನಿಮಾಗಳು ವರ್ಷಗಳಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ತೆರೆ ಕಾಣಲಿದೆ. ಕುತೂಹಲ ಮೂಡಿಸಿರುವ ಚಿತ್ರಗಳು ಯಾವೆಲ್ಲ ಎನ್ನುವ ವಿವರ ಇಲ್ಲಿದೆ.

South Indian Films

ಬೆಂಗಳೂರು: ಪ್ರತೀ ತಿಂಗಳು ಆರಂಭ ಆಗುತ್ತಲೇ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೊಸ ಹೊಸ ಸಿನಿಮಾ ತೆರೆ ಕಾಣುವುದು ಸಾಮಾನ್ಯ. ಕೆಲವೊಂದು ಸಿನಿಮಾಗಳು ಒಟಿಟಿಯಲ್ಲಿ ಸ್ಟ್ರಿಮಿಂಗ್ ಆದರೆ ಇನ್ನೂ ಕೆಲವೊಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುತ್ತವೆ. ಅಂತೆಯೇ ಜುಲೈಯಲ್ಲಿ ದಕ್ಷಿಣ ಭಾರತದ (South Indian Films) ಬಹು ನಿರೀಕ್ಷಿತ ಸಾಲು ಸಾಲು ಸಿನಿಮಾಗಳು ತೆರೆ ಕಾಣಲಿವೆ. ಕೆಲ ಸಿನಿಮಾಗಳು ವರ್ಷಗಳಿಂದಲೂ ಪ್ರೇಕ್ಷಕರಲ್ಲಿ ಕುತೂಹಲ ಹುಟ್ಟಿಸಿದ್ದು, ತುಗಿಗಾಲಿನಲ್ಲಿ ಕಾಯುವಂತೆ ಮಾಡಿವೆ. ಅಂತಹ ಚಿತ್ರಗಳ ಪಟ್ಟಿ ಇಲ್ಲಿದೆ.
ಕಿಂಗ್ ಡಮ್
ಟಾಲಿವುಡ್‌ನ ಖ್ಯಾತ ನಟ ವಿಜಯ್ ದೇವರಕೊಂಡ ಅವರ ಬಹುನಿರೀಕ್ಷಿತ ʼಕಿಂಗ್ ಡಮ್ʼ ಸಿನಿಮಾವು ಜುಲೈನಲ್ಲಿ ತೆರೆ ಕಾಣಲಿದೆ. ಗೌತಮ್ ತಿನ್ನನುರಿ ನಿರ್ದೇಶನದ ʼಕಿಂಗ್ ಡಮ್ʼ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಜುಲೈ 4ರಂದು ಭಾರತದಾದ್ಯಂತ ರಿಲೀಸ್ ಆಗಲಿದೆ.
ಪರಂತು ಪೋ
ʼತಮಿಳ್ ಪದಂʼ ಸಿನಿಮಾ ಖ್ಯಾತಿಯ ನಟ ಶಿವ ನಟಿಸಿರುವ ʼಪರಂತು ಪೋʼ ತಮಿಳು ಚಿತ್ರ ಜುಲೈಯಲ್ಲಿ ಬಿಡುಗಡೆಯಾಗಲಿದೆ. ʼಪೆರಾನ್ಬುʼ ಚಿತ್ರದ ನಿರ್ದೇಶಕ ರಾಮ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆ ತಂದೆ ಮತ್ತು ಮಗನ ನಡುವೆ ಸಾಗುತ್ತದೆ. ಈ ಚಿತ್ರದಲ್ಲಿ ಅಂಜಲಿ, ಮಿಥುಲ್ ರಯಾನ್, ಗ್ರೇಸ್ ಆಂಟನಿ, ವಿಜಯ್ ಯೇಸುದಾಸ್, ಅಜು ವರ್ಗೀಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಜು. 4ರಂದು ಬಿಡುಗಡೆಯಾಗಲಿದೆ.
ದಿ ಪೆಟ್ ಡಿಟೆಕ್ಟಿವ್
ಶರಫ್ ಉಧೀನ್ ನಾಯಕನಾಗಿ ನಟಿಸಿರುವ ʼದಿ ಪೆಟ್ ಡಿಟೆಕ್ಟಿವ್ʼ ಮಲಯಾಳಂ ಸಿನಿಮಾವು ಜುಲೈಯಲ್ಲೇ ತೆರೆ ಕಾಣಲಿದ್ದು, ದಿನಾಂಕ ಇನ್ನು ನಿಗದಿಯಾಗಿಲ್ಲ. ಪ್ರಾಣೀಶ್ ವಿಜಯನ್ ನಿರ್ದೇಶನದ ಈ ಸಿನಿಮಾದಲ್ಲಿ ಅನುಪಮಾ ಪರಮೇಶ್ವರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಎಕ್ಕ
ಸ್ಯಾಂಡಲ್‌ವುಡ್‌ನ ʼಎಕ್ಕʼ ಒಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಯುವ ರಾಜ್‌ಕುಮಾರ್, ಸಂಪದ, ಸಂಜನಾ ಆನಂದ್, ಅತುಲ್ ಕುಲಕರ್ಣಿ ಮತ್ತು ರಾಹುಲ್ ದೇವ್ ಶೆಟ್ಟಿ ಮತ್ತಿತರರು ನಟಿಸಿದ್ದಾರೆ. ಈ ಚಿತ್ರವು ಜುಲೈ18ರಂದು ಬಿಡುಗಡೆಯಾಗಲಿದೆ.
ಇದನ್ನು ಓದಿ: Sports Drama Movies: ಕ್ರೀಡಾ ಅಭಿಮಾನಿಗಳಿಗೆ ಗುಡ್‌ನ್ಯೂಸ್; ಒಟಿಟಿಗೆ ಬಂದಿದೆ ಸಾಲು ಸಾಲು ಸ್ಪೋರ್ಟ್ಸ್ ಬೇಸ್ಡ್ ಸಿನಿಮಾ
ಘಾಟಿ
ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಬಹುನಿರೀಕ್ಷಿತ ತೆಲುಗು ಸಿನಿಮಾ ʼಘಾಟಿʼ ಚಿತ್ರವು ಜುಲೈ 11ರಂದು ಚಿತ್ರಮಂದಿರಗಲಲ್ಲಿ ರಿಲೀಸ್ ಆಗಲಿದೆ. ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಅನುಷ್ಕಾ ಮತ್ತೊಂದು ಪವರ್‌ಪುಲ್ ಪಾತ್ರದಲ್ಲಿ ನಟಿಸಿದ್ದಾರೆ. ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಈ ಚಿತ್ರವು ಗಾಂಜಾ ವ್ಯವಹಾರದ ಕೆಲ ಮುಖ್ಯ ವಿಚಾರದ ಸುತ್ತ ಸುತ್ತುತ್ತದೆ ಎನ್ನಲಾಗಿದೆ.
ಹರಿ ಹರ ವೀರ ಮಲ್ಲು
ನಟ, ರಾಜಕಾರಣಿ ಪವನ್ ಕಲ್ಯಾಣ್ ನಟನೆಯ ʼಹರಿ ಹರ ವೀರ ಮಲ್ಲುʼ ಭಾಗ 1 ತೆಲುಗು ಸಿನಿಮಾವು ಜುಲೈ 25ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮೊಘಲರಿಂದ ಕೊಹಿನೂರ್ ವಜ್ರವನ್ನು ಕದಿಯುವ ಅಪರಾಧಿಯ ಸುತ್ತ ಕಥೆ ಸಾಗಲಿದೆ. ಇದನ್ನು ಕ್ರಿಶ್ ಜಾಗರ್ಲಮುಡಿ ಮತ್ತು ಎ.ಎಂ. ಜ್ಯೋತಿ ಕೃಷ್ಣ ಜಂಟಿಯಾಗಿ ನಿರ್ದೇಶಿಸಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.