ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Tilak Varma: ಹ್ಯಾಂಪ್‌ಶೈರ್ ತಂಡದ ಪರ ಬ್ಯಾಟ್‌ ಬೀಸಲು ಸಜ್ಜಾದ ತಿಲಕ್‌ ವರ್ಮಾ

ತಿಲಕ್‌ ವರ್ಮಾ ಭಾರತ ಪರ 25 ಟಿ20, 4 ಏಕದಿನ ಸೇರಿ ಒಟು 29 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಎರಡು ಶತಕ ಕೂಡ ಬಾರಿಸಿದ್ದಾರೆ. ಒಟ್ಟಾರೆ 749 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿಲಕ್‌ ವರ್ಮ 18 ಪಂದ್ಯಗಳಿಂದ 1204 ರನ್‌ ಗಳಿಸಿದ್ದಾರೆ. ಇದೇ ವೇಳೆ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 36 ಪಂದ್ಯವಾಡಿ 1494 ರನ್‌ ಗಳಿಸಿದ್ದಾರೆ.

ಹ್ಯಾಂಪ್‌ಶೈರ್ ತಂಡದ ಪರ ಬ್ಯಾಟ್‌ ಬೀಸಲು ಸಜ್ಜಾದ ತಿಲಕ್‌ ವರ್ಮಾ

Profile Abhilash BC Jun 19, 2025 12:56 PM

ನವದೆಹಲಿ: ಟಿ20 ಕ್ರಿಕೆಟ್‌ನಲ್ಲಿ ಬ್ಯಾಟಿಂಗ್‌ ಸಾಮರ್ಥ್ಯ ತೋರಿಸಿರುವ ಟೀಮ್‌ ಇಂಡಿಯಾದ ಯುವ ಎಡಗೈ ಬ್ಯಾಟರ್‌ ತಿಲಕ್‌ ವರ್ಮ(Tilak Varma) ಅವರು ಇದೀಗ ಇಂಗ್ಲೆಂಡ್​ನ ಕೌಂಟಿ ಕ್ರಿಕೆಟ್​ನತ್ತ ಮುಖ ಮಾಡಿದ್ದಾರೆ. ಈ ಮೂಲಕ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿಯೂ ಮಿಂಚಲು ಮುಂದಾಗಿದ್ದಾರೆ. ಕೌಂಟಿ ಡಿವಿಷನ್‌-1 ಚಾಂಪಿಯನ್‌ಶಿಪ್‌ನಲ್ಲಿ(County Championship) ನಾಲ್ಕು ಪಂದ್ಯಗಳನ್ನು ಆಡಲು ಹ್ಯಾಂಪ್‌ಶೈರ್(Hampshire) ಜತೆ ಒಪ್ಪಂದ ಮಾಡಿಕೊಂಡಿದ್ದಾರೆ.

ಹೈದರಾಬಾದ್‌ನ 22 ವರ್ಷದ ಎಡಗೈ ಆಲ್‌ರೌಂಡರ್ ಜೂನ್ 22 ಮತ್ತು ಆಗಸ್ಟ್ 1 ರ ನಡುವಿನ ಹ್ಯಾಂಪ್‌ಶೈರ್‌ನ ಮುಂದಿನ ನಾಲ್ಕು ಪಂದ್ಯಗಳಿಗೆ ಲಭ್ಯವಿರುತ್ತಾರೆ ಎಂದು ಹ್ಯಾಂಪ್‌ಶೈರ್‌ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ. " ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಿಗೆ ತಿಲಕ್ ಲಭ್ಯರಿರುವುದು ಅದ್ಭುತವಾಗಿದೆ" ಎಂದು ಹ್ಯಾಂಪ್‌ಶೈರ್‌ನ ಕ್ರಿಕೆಟ್ ನಿರ್ದೇಶಕ ಗೈಲ್ಸ್ ವೈಟ್ ಹೇಳಿದ್ದಾರೆ.

"ತಿಲಕ್ ಈಗಾಗಲೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮತ್ತು ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ದೊಡ್ಡ ಪ್ರಭಾವ ಬೀರಿರುವ ಅತ್ಯಾಕರ್ಷಕ ಪ್ರತಿಭೆ, ಮತ್ತು ಈ ಬೇಸಿಗೆಯಲ್ಲಿ ಹ್ಯಾಂಪ್‌ಶೈರ್‌ಗಾಗಿ ಅವರು ಏನು ಮಾಡಬಹುದು ಎಂಬುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ" ಎಂದು ಗೈಲ್ಸ್ ವೈಟ್ ಹೇಳಿದ್ದಾರೆ.

ಕಳೆದ ಋತುವಿನಲ್ಲಿ ರನ್ನರ್-ಅಪ್ ಸ್ಥಾನ ಪಡೆದ ಹ್ಯಾಂಪ್‌ಶೈರ್ ಪ್ರಸ್ತುತ ಡಿವಿಷನ್ ಒನ್‌ನಲ್ಲಿ ಏಳನೇ ಸ್ಥಾನದಲ್ಲಿದೆ. ಎಸೆಕ್ಸ್ ಪಂದ್ಯದ ನಂತರ, ವರ್ಮಾ ಜೂನ್ 29 ರಿಂದ ಜುಲೈ 2 ರವರೆಗೆ ಏಜಿಯಸ್ ಬೌಲ್‌ನಲ್ಲಿ ವೋರ್ಸೆಸ್ಟರ್‌ಶೈರ್ ವಿರುದ್ಧ ಹ್ಯಾಂಪ್‌ಶೈರ್ ಪರ ತವರು ನೆಲದಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ Ruturaj Gaikwad: ಯಾರ್ಕ್‌ಷೈರ್ ಕೌಂಟಿ ತಂಡ ಸೇರಿದ ಭಾರತದ ಋತುರಾಜ್‌ ಗಾಯಕ್ವಾಡ್‌

ತಿಲಕ್‌ ವರ್ಮಾ ಭಾರತ ಪರ 25 ಟಿ20, 4 ಏಕದಿನ ಸೇರಿ ಒಟು 29 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಈ ವೇಳೆ ಎರಡು ಶತಕ ಕೂಡ ಬಾರಿಸಿದ್ದಾರೆ. ಒಟ್ಟಾರೆ 749 ರನ್ ಗಳಿಸಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಿಲಕ್‌ ವರ್ಮ 18 ಪಂದ್ಯಗಳಿಂದ 1204 ರನ್‌ ಗಳಿಸಿದ್ದಾರೆ. ಇದೇ ವೇಳೆ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 36 ಪಂದ್ಯವಾಡಿ 1494 ರನ್‌ ಗಳಿಸಿದ್ದಾರೆ.