ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ನಾಯಿ ಮೊಲೆಯನ್ನು ಚೀಪಿ ಹಾಲು ಕುಡಿದ ಯುವತಿ; ಸಿಕ್ಕಾಪಟ್ಟೆ ವೈರಲ್‌ ಆಯ್ತು ಈ ಪೋಸ್ಟರ್!

ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಯುವತಿಯೊಬ್ಬಳು ನಾಯಿಯ ಹಾಲು ಕುಡಿಯುತ್ತಿರುವ ವಿಚಿತ್ರ ಪೋಸ್ಟರ್ ಕಾಣಿಸಿಕೊಂಡಿದೆ. ರಾಣಿ ಕಮಲಪತಿ ನಿಲ್ದಾಣದ ಬಳಿ ಹಾಕಲಾದ ಈ ಪೋಸ್ಟರ್‌ಗಳನ್ನು ನೋಡಿ ಪ್ರಯಾಣಿಕರು ಶಾಕ್‌ ಆಗಿದ್ದಾರೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News)ಆಗಿದೆ.

ನಾಯಿ ಮೊಲೆಯನ್ನು ಚೀಪಿ ಹಾಲು ಕುಡಿದ ಯುವತಿ!

Profile pavithra Jun 21, 2025 9:03 AM

ಭೋಪಾಲ್: ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ವಿಚಿತ್ರ ಕಾರಣಕ್ಕೆ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತದೆ. ಈ ಹಿಂದೆ 90° ಸೇತುವೆ ಮತ್ತು ಸರಿಯಾಗಿ ಸಮಯ ತೋರಿಸದ ಡಿಜಿಟಲ್ ಕ್ಲಾಕ್ ಟವರ್ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಗಮನಸೆಳೆದು ವೈರಲ್ ಆಗಿತ್ತು. ಇದೀಗ ಯುವತಿಯೊಬ್ಬಳು ನಾಯಿಯ(Dog) ಹಾಲು ಕುಡಿಯುತ್ತಿರುವ ವಿಚಿತ್ರ ಪೋಸ್ಟರ್ ಕಾಣಿಸಿಕೊಂಡಿದೆ. ರಾಣಿ ಕಮಲಪತಿ ನಿಲ್ದಾಣದ ಬಳಿ ಹಾಕಲಾದ ಈ ಪೋಸ್ಟರ್‌ಗಳನ್ನು ನೋಡಿ ಪ್ರಯಾಣಿಕರು ಶಾಕ್‌ ಆಗಿದ್ದಾರೆ. ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News)ಆಗಿದೆ.

ಪೋಸ್ಟರ್‌ನಲ್ಲಿ ಏನಿದೆ?

ವೈರಲ್ ಆದ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬಳು ನಾಯಿಯ ಹಾಲು ಕುಡಿಯುತ್ತಿದ್ದು, ಅದರ ಜೊತೆಗೆ "ನೀವು ನಾಯಿಯ ಹಾಲು ಕುಡಿಯದಿದ್ದರೆ... ಬೇರೆ ಯಾವುದೇ ಪ್ರಾಣಿಯ ಹಾಲನ್ನು ಯಾಕೆ ಕುಡಿಯಬೇಕು? ಹಾಗೇ ಪೋಸ್ಟರ್‌ನಲ್ಲಿ "ದಯವಿಟ್ಟು ಸಸ್ಯಾಹಾರವನ್ನು ಟ್ರೈ ಮಾಡಿ" ಎಂದು ಹೇಳಲಾಗಿದೆ.

ಈ ಪೋಸ್ಟರ್‌ ಹಿಂದಿನ ಉದ್ದೇಶ

ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ, ಪ್ರಾಣಿ ಮೂಲದ ಉತ್ಪನ್ನಗಳ ಬಳಕೆಯು ಹಲವು ಪಟ್ಟು ಹೆಚ್ಚಾಗಿದೆ. ಇವುಗಳನ್ನು ಪೂರೈಸುವ ಸಲುವಾಗಿ, ಪ್ರಾಣಿಗಳನ್ನು ಹಿಂಸಿಸುತ್ತಾರೆ. ಅವುಗಳನ್ನು ಮಾಂಸಕ್ಕಾಗಿ ಕೊಲ್ಲುತ್ತಾರೆ. ಅಲ್ಲದೆ, ಜಾಗತಿಕವಾಗಿ ಪ್ರತಿ ವರ್ಷ 80 ಶತಕೋಟಿಗೂ ಹೆಚ್ಚು ಪ್ರಾಣಿಗಳನ್ನು ಆಹಾರಕ್ಕಾಗಿ ಕೊಲ್ಲಲಾಗುತ್ತದೆ. ಆದರೆ ಸಸ್ಯಾಹಾರಿ ಜೀವನಶೈಲಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ, ಜನರು ಈ ಆಹಾರಗಳ ಬೇಡಿಕೆಯನ್ನು ಕಡಿಮೆ ಮಾಡಬಹುದು. ಪ್ರಾಣಿಗಳನ್ನು ಇಂತಹ ಕ್ರೌರ್ಯದಿಂದ ಮುಕ್ತಗೊಳಿಸಬಹುದು.

ಪೋಸ್ಟರ್‌ ಹಾಕಿದವರು ಯಾರು?

ಮಾಹಿತಿ ಪ್ರಕಾರ, ಪ್ರಾಣಿ ಹಕ್ಕುಗಳ ಗ್ರೂಪ್ ಪೆಟಾ ಇಂಡಿಯಾ ಈ ತಿಂಗಳ ಶುರುವಿನಲ್ಲಿ ʼವಿಶ್ವ ಹಾಲು ದಿನʼದಂದು ತನ್ನ ಸಸ್ಯಾಹಾರಿ ಅಭಿಯಾನಕ್ಕಾಗಿ ಈ ಸಂದೇಶದೊಂದಿಗೆ ದಿಟ್ಟ ಮತ್ತು ಪ್ರಚೋದನಕಾರಿ ಜಾಹೀರಾತು ಫಲಕವನ್ನು ಅನಾವರಣಗೊಳಿಸಿತು. ಪೆಟಾ ಅಹಮದಾಬಾದ್, ಬೆಂಗಳೂರು, ಮುಂಬೈ ಮತ್ತು ನೋಯ್ಡಾ ಸೇರಿದಂತೆ ಹಲವಾರು ಪ್ರಮುಖ ನಗರಗಳಲ್ಲಿ ಈ ಪೋಸ್ಟರ್ ಅನ್ನು ಪ್ರದರ್ಶಿಸಲಾಗಿದೆ.

ಈ ಸುದ್ದಿಯನ್ನೂ ಓದಿ:Viral Video: ಬಿಯರ್‌ ಗ್ಲಾಸ್‌ನೊಳಗೆ ಕೋಳಿಯ ಕಾಲನ್ನು ಅದ್ದಿದ ಭೂಪ; ವಿಚಿತ್ರ ರೆಸಿಪಿ ಕಂಡು ನೆಟ್ಟಿಗರು ಶಾಕ್‌!

ಮಹಿಳೆಯೊಬ್ಬಳು ನಾಯಿಯ ಹಾಲು ಕುಡಿಯುತ್ತಿರುವ ಪೋಸ್ಟರ್‌ ನೋಡಿ ನೆಟ್ಟಿಗರು ಶಾಕ್‌ ಆಗಿದ್ದಾರೆ. ಹಾಗೇ ಇದರ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.