Viral Video: ಸರ್ಪದ ಹಣೆಗೆ ಚುಂಬಿಸಿದ ವ್ಯಕ್ತಿ; ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಯುವಕನೊಬ್ಬ ವಿಷಕಾರಿ ಸರ್ಪದ ತಲೆಯನ್ನು ಸ್ವಲ್ಪ ಕೂಡ ಹೆದರದೇ ಚುಂಬಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಜೀವನದಲ್ಲಿ ಇಷ್ಟೊಂದು ರಿಸ್ಕ್ ಯಾಕೆ ತೆಗೆದುಕೊಳ್ಳಬೇಕು ಎಂದು ಆತನ ವಿರುದ್ಧ ಕಿಡಿಕಾರಿದ್ದಾರೆ.

ಸಾಂದರ್ಭಿಕ ಚಿತ್ರ.

ಮಲಗಿದ್ದ ವ್ಯಕ್ತಿಯ ಹಾವೊಂದು ಹರಿದ ವಿಡಿಯೊ ಇತ್ತೀಚೆಗೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಹಾಗೇ ಮಹಿಳೆಯೊಬ್ಬಳು ಹಾವಿಗೆ ಸ್ನಾನ ಮಾಡಿಸುತ್ತಿರುವ ವಿಡಿಯೊವೊಂದು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡಿತ್ತು. ಇದೀಗ ಯುವಕನೊಬ್ಬ ಸರ್ಪದ (Cobra) ತಲೆಯನ್ನು ಚುಂಬಿಸುತ್ತಿರುವ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ವೈರಲ್ ಆದ ವಿಡಿಯೊದಲ್ಲಿ ಆ ವ್ಯಕ್ತಿ ಸರ್ಪ ಹಿಡಿದುಕೊಂಡು ಯಾವುದೇ ಭಯವಿಲ್ಲದೆ ಅದರ ತಲೆಗೆ ಮುತ್ತಿಡುವುದನ್ನು ತೋರಿಸಲಾಗಿದೆ. ಈತನ ಈ ವಿಡಿಯೊ ನೋಡಿ ನೆಟ್ಟಿಗರು ಕಿಡಿಕಾರಿದ್ದಾರೆ.
ಈ ವಿಡಿಯೊ ನೋಡಿ ಅನೇಕರು ಕಾಮೆಂಟ್ ಮಾಡಿದ್ದಾರೆ. ಒಬ್ಬರು, "ಇಂಡಿಯಾನಾ ಜೋನ್ಸ್ ಸಿನಿಮಾ ತರಹ ಅನಿಸುತ್ತಿದೆ. ನಿಜ ಜೀವನದಲ್ಲಿ ಇಷ್ಟೊಂದು ರಿಸ್ಕ್ ಯಾಕೆ ತೆಗೆದುಕೊಳ್ಳಬೇಕು?" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, "ಇದು ಕ್ರೌರ್ಯ. ಹಾವು ಒತ್ತಡದಲ್ಲಿದೆ ಮತ್ತು ಈ ರೀತಿ ತೊಂದರೆ ಕೊಡುವುದು ತಪ್ಪು" ಎಂದು ಬರೆದಿದ್ದಾರೆ.
ವಿಡಿಯೊ ನೋಡಿ...
ಸರ್ಪವು ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ. ಇನ್ನು ಕಾಳಿಂಗ ಸರ್ಪದ ವಿಷವು ಶಕ್ತಿಯುತವಾದ ನ್ಯೂರೋಟಾಕ್ಸಿನ್‌ಗಳನ್ನು ಹೊಂದಿದ್ದು, ಇದರ ವಿಷ ಒಂದೇ ಬಾರಿಗೆ 20 ಜನರನ್ನು ಅಥವಾ ಆನೆಯನ್ನು ಕೊಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಇದು 12-18 ಅಡಿ ಉದ್ದದವರೆಗೆ ಬೆಳೆಯುತ್ತದೆಯಂತೆ. ಇದರ ಕಡಿತ ಉಸಿರಾಟದ ಸಮಸ್ಯೆ ಅಥವಾ ಹೃದಯ ಸ್ತಂಭನಕ್ಕೆ ಕಾರಣವಾಗಬಹುದಂತೆ.
2022ರಲ್ಲಿ ಕರ್ನಾಟಕದ ಭದ್ರಾವತಿಯ ವ್ಯಕ್ತಿಯೊಬ್ಬ ನಾಗರಹಾವಿನ ತುಟಿಗಳಿಗೆ ಮುತ್ತಿಡಲು ಪ್ರಯತ್ನಿಸಿ ಕೊನೆಗೆ ಹಾವಿನಿಂದ ಕಚ್ಚಿಸಿಕೊಂಡಿದ್ದನಂತೆ.
ಈ ಸುದ್ದಿಯನ್ನೂ ಓದಿ:Viral Video: ಕೊರೆಯುವ ಚಳಿಯಲ್ಲಿ ನಂದಿಬೆಟ್ಟದಲ್ಲಿ ಕಾಣಿಸಿಕೊಂಡ ಗಾಂಧಿ ತಾತ! ಏನಿದು ವೈರಲ್ ವಿಡಿಯೊ?
ಜನರು ಈ ರೀತಿಯ ಸಾಹಸಗಳನ್ನು ಏಕೆ ಪ್ರಯತ್ನಿಸುತ್ತಾರೆ?
ತಜ್ಞರು ಹೇಳುವಂತೆ ಇಂತಹ ಹಲವು ವಿಡಿಯೊಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಲು ಮಾತ್ರ ಮಾಡಲಾಗುತ್ತಿದೆ ಎನ್ನಲಾಗಿದೆ. 38,000ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿರುವ ಕೇರಳದ ವಾವಾ ಸುರೇಶ್ ಅವರಂತಹ ಕೆಲವು ಹಾವು ರಕ್ಷಕರು ಇದನ್ನು ವನ್ಯಜೀವಿ ಸಂರಕ್ಷಣೆಯ ಭಾಗವೆಂದು ಪರಿಗಣಿಸುತ್ತಾರೆ. ಆದರೆ ಅಂತಹ ಹೆಚ್ಚಿನ ಕೃತ್ಯಗಳು ಪ್ರಾಣಿಗಳಿಗೆ ಅನಗತ್ಯ ಒತ್ತಡವನ್ನು ಉಂಟು ಮಾಡುತ್ತವೆ. ಮನರಂಜನೆಗಾಗಿ ಹಾವುಗಳನ್ನು ತೊಂದರೆಗೊಳಿಸುವುದು ಮಾನವ ಜೀವಕ್ಕೆ ಅಪಾಯವನ್ನುಂಟು ಮಾಡುವುದಲ್ಲದೆ ಪ್ರಾಣಿಗಳ ಯೋಗಕ್ಷೇಮವನ್ನು ಉಲ್ಲಂಘಿಸಿದಂತಾಗುತ್ತದೆ ಎನ್ನಲಾಗಿದೆ.