ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕನ್ನ ಹಾಕುವ ಮುನ್ನ ಕುಣಿದು ಕುಪ್ಪಳಿಸಿದ ಕಿಲಾಡಿ ಕಳ್ಳ; ವಿಡಿಯೊ ನೋಡಿ!

ಏಪ್ರಿಲ್ 23 ರ ಬೆಳಗಿನ ಜಾವ 1.10 ರ ಸುಮಾರಿಗೆ ವಿಕ್ಟೋರಿಯಾದ ಸನ್‌ಬರಿಯಲ್ಲಿರುವ ಶಾಲೆಯಲ್ಲಿ ಕಳ್ಳನೊಬ್ಬ $5,000 ಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ ಉಪಕರಣಗಳನ್ನು ಕದ್ದೊಯ್ದಿದ್ದಾನೆ. ಆದರೆ ಕಳ್ಳತನಕ್ಕೂ ಮುನ್ನ ಅವನು ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಡ್ಯಾನ್ಸ್ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕನ್ನ ಹಾಕುವ ಮುನ್ನ ಕುಣಿದು ಕುಪ್ಪಳಿಸಿದ ಕಿಲಾಡಿ ಕಳ್ಳ- ವಿಡಿಯೊ ವೈರಲ್‌

Profile pavithra Jun 5, 2025 4:24 PM

ಆಸ್ಟ್ರೇಲಿಯಾ: ಇತ್ತೀಚೆಗೆ ಪೆಟ್ರೋಲ್‌ ಪಂಪ್‌ ಕಚೇರಿಗೆ ನುಗ್ಗಿದ ಕಳ್ಳನೊಬ್ಬ ಕದಿಯುವ ಮೊದಲು ದೇವರಿಗೆ ನಮಸ್ಕರಿಸಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಆಸ್ಟ್ರೇಲಿಯಾದ ಸನ್‌ಬರಿಯಲ್ಲಿರುವ ಶಾಲೆ(School)ಯೊಂದರಲ್ಲಿ ನಡೆದ ಕಳ್ಳತನ ಪ್ರಕರಣ ಸಿಕ್ಕಾಪಟ್ಟೆ ವೈರಲ್‌ ಆಗಿದೆ.ಶಾಲೆಗೆ ಕದಿಯಲು ನುಗ್ಗಿದ ಕಳ್ಳ(Thief) ಕದಿಯುವ ಮೊದಲು ಕಾರು ಪಾರ್ಕಿಂಗ್‌ ಮಾಡುವ ಜಾಗದಲ್ಲಿ ಸಿಕ್ಕಾಪಟ್ಟೆ ಖುಷಿಯಾಗಿ ಡ್ಯಾನ್ಸ್‌ ಮಾಡಿದ್ದಾನಂತೆ. ಈತ ಶಾಲೆಯಲ್ಲಿ $5,000 ಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ ಉಪಕರಣಗಳನ್ನು ಕದ್ದಿರುವುದು ವರದಿಯಾಗಿದೆ. ಈ ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video)ಆಗಿದೆ.

ವೈರಲ್‌ ಆದ ವಿಡಿಯೊದಲ್ಲಿ ಕಳ್ಳನೊಬ್ಬ ಶಾಲೆಗೆ ಕನ್ನ ಹಾಕುವ ಮೊದಲು ಕಾರು ಪಾರ್ಕಿಂಗ್‌ ಮಾಡಿ ಆ ಜಾಗದಲ್ಲಿಯೇ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾನೆ. ನಂತರ ಆತ ಶಾಲೆಯ ಕಟ್ಟಡದ ಮೇಲೆ ಹತ್ತಿರುವುದು ಸೆರೆಯಾಗಿದೆ. ಪೊಲೀಸರ ಪ್ರಕಾರ, ಕಳ್ಳನು ಶಾಲಾ ಕಟ್ಟಡಗಳಲ್ಲಿ ಒಂದನ್ನು ಒಡೆದು ಮೂರು ಲ್ಯಾಪ್‌ಟಾಪ್‌ಗಳು ಮತ್ತು ಪ್ರೊಜೆಕ್ಟರ್ ಅನ್ನು ಕದ್ದಿದ್ದಾನಂತೆ.ಈತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರಂತೆ.

ವಿಡಿಯೊ ಇಲ್ಲಿದೆ ನೋಡಿ...



ಅಪರಾಧಿಗಳ ನರ್ಸರಿ ಏನಿದು?

ಇತ್ತೀಚೆಗೆ ಮಧ್ಯಪ್ರದೇಶದ ಮೂರು ಹಳ್ಳಿಗಳಾದ ಕಾಡಿಯಾ, ಗುಲ್ಖೇಡಿ ಮತ್ತು ಹುಲ್ಖೇಡಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹೆಚ್ಚು ವೈರಲ್‌ ಆಗಿವೆ. ಯಾಕೆಂದರೆ ಈ ಹಳ್ಳಿಗಳಿಗೆ ‘ಅಪರಾಧಿಗಳ ನರ್ಸರಿ’ ಎಂದು ಕರೆಯಲಾಗುತ್ತಿದೆ. ಕಾರಣ ಇಲ್ಲಿ ಮಕ್ಕಳಿಗೆ ಕಳ್ಳತನ, ದರೋಡೆ ಮತ್ತು ಡಕಾಯಿತಿ ಕಲೆಗಳಲ್ಲಿ" ತರಬೇತಿ ನೀಡುತ್ತಾರಂತೆ. ರಾಜ್ಯ ರಾಜಧಾನಿ ಭೋಪಾಲ್‌ನಿಂದ ಸುಮಾರು 117 ಕಿಲೋಮೀಟರ್ ದೂರದಲ್ಲಿರುವ ರಾಜ್‌ಗಢ ಜಿಲ್ಲೆಯ ಈ ಹಳ್ಳಿಗಳಿಗೆ 12 ಅಥವಾ 13 ವರ್ಷ ವಯಸ್ಸಿನ ಮಕ್ಕಳನ್ನು ಅವರ ಪೋಷಕರು ಅಪರಾಧ ಚಟುವಟಿಕೆಗಳಲ್ಲಿ ತರಬೇತಿ ನೀಡಲು ಕಳುಹಿಸುತ್ತಾರಂತೆ.

ಈ ಸುದ್ದಿಯನ್ನೂ ಓದಿ:Viral Video: ನಡುರಸ್ತೆಯಲ್ಲಿ ಆನೆಯ ಮೇಲೆ ದಾಳಿ ಮಾಡಿದ ಕುದುರೆ; ಶಾಕಿಂಗ್‌ ವಿಡಿಯೊ ವೈರಲ್

ಮಕ್ಕಳಿಗೆ ಜೇಬುಗಳ್ಳತನ, ಬ್ಯಾಗ್‌ ಎಗರಿಸುವುದು, ವೇಗವಾಗಿ ಓಡುವುದು, ಪೊಲೀಸರಿಂದ ತಪ್ಪಿಸಿಕೊಳ್ಳುವುದು ಮತ್ತು ಸಿಕ್ಕಿಬಿದ್ದರೆ ಹೊಡೆತಗಳನ್ನು ಸಹಿಸಿಕೊಳ್ಳುವುದು ಮುಂತಾದ ವಿವಿಧ ಅಪರಾಧ ಕೌಶಲ್ಯಗಳನ್ನು ಕಲಿಸಲಾಗುತ್ತದೆಯಂತೆ.