Eco Friendly Fashion: ನೀವೂ ಪರಿಸರ ಸ್ನೇಹಿ ಫ್ಯಾಷನ್ ಅಳವಡಿಸಿಕೊಳ್ಳಿ
Eco Friendly Fashion: ನೀವೂ ಪರಿಸರ ಸ್ನೇಹಿ ಫ್ಯಾಷನ್ ಅಳವಡಿಸಿಕೊಳ್ಳಿ ಎನ್ನುತ್ತಾರೆ ಫ್ಯಾಷನಿಸ್ಟಾಗಳು. ಇದಕ್ಕಾಗಿ ನೀವು ಧರಿಸುವ ಫ್ಯಾಷನ್ವೇರ್ಗಳಲ್ಲಿ ಕೊಂಚ ಬದಲಾವಣೆ ತರಬೇಕಾಗುತ್ತದೆ ಎನ್ನುವ ಸ್ಟೈಲಿಸ್ಟ್ಗಳು 5 ಸಿಂಪಲ್ ಐಡಿಯಾ ನೀಡಿದ್ದಾರೆ. ಆ ಕುರಿತಾದ ವಿವರ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್


ಪರಿಸರಕ್ಕೆ ಕೊಡುಗೆ ನೀಡುವ ಫ್ಯಾಷನ್ ಪ್ರೇಮಿಗಳಾಗಿ
ನೀವೂ ಕೂಡ ಪರಿಸರಕ್ಕೆ ಕೊಡುಗೆ ನೀಡುವ ಫ್ಯಾಷನ್ ಪ್ರೇಮಿಗಳಾಗಿ ಎನ್ನುತ್ತಿದ್ದಾರೆ ಫ್ಯಾಷನಿಸ್ಟಾಗಳು. ಹೌದು, ಫ್ಯಾಷೆನಬಲ್ ಆಗುವುದು ಸುಲಭ! ಆದರೆ ಪರಿಸರ ಸ್ನೇಹಿ ಫ್ಯಾಷನ್ ಅಳವಡಿಸಿಕೊಳ್ಳುವುದು ಸುಲಭವೇನಲ್ಲ! ಪರಿಸರ ದಿನದಂದು ಪರಿಸರ ಸ್ನೇಹಿಯಾಗುವ ಬಗ್ಗೆ ಯೋಚಿಸಿ. ನಿಮ್ಮ ಫ್ಯಾಷನ್ ಲೈಫ್ನಲ್ಲೂ ಕೊಂಚ ಬದಲಾವಣೆ ತನ್ನಿ. ಇದಕ್ಕಾಗಿ ನೀವು ಧರಿಸುವ ಫ್ಯಾಷನ್ವೇರ್ಗಳಲ್ಲಿ ಬದಲಾವಣೆ ತನ್ನಿ ಎನ್ನುತ್ತಾರೆ ಸ್ಟೈಲಿಸ್ಟ್ಗಳು.

ಇಕೋ ಫ್ರೆಂಡ್ಲಿ ಫ್ಯಾಷನ್ವೇರ್ಗಳಿಗೆ ಆದ್ಯತೆ ನೀಡಿ
ಮುಂಬರುವ ದಿನಗಳಲ್ಲಿ ಡಿಸೈನರ್ವೇರ್ಗಳನ್ನು ಖರೀದಿಸಬೇಕಾದಲ್ಲಿ ಆದಷ್ಟೂ ಪರಿಸರ ಸ್ನೇಹಿಯಾಗಿರುವಂತಹ ಔಟ್ಫಿಟ್ಗಳಿಗೆ ಆದ್ಯತೆ ನೀಡಿ. ನೀವು ಕೊಳ್ಳುವ ಬ್ರಾಂಡ್ ಎಕೋ ಫ್ರೆಂಡ್ಲಿಯಾಗಿದೆಯೇ ಎಂಬುದನ್ನು ತಿಳಿದುಕೊಂಡು ಆಯ್ಕೆ ಮಾಡಿ.

ದೇಸಿ ಫ್ಯಾಬ್ರಿಕ್ ಆಯ್ಕೆ ಮಾಡಿ
ಆದಷ್ಟೂ ದೇಸಿ ಬ್ರಾಂಡ್ ಹಾಗೂ ಫ್ಯಾಷನ್ ಉತ್ಪನ್ನಗಳಿಗೆ ಮಾನ್ಯತೆ ನೀಡಿ. ಇದರಿಂದ ದೇಸಿ ಲೋಕಲ್ ಬ್ರಾಂಡ್ಗಳನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಸಮೀಕ್ಷೆಯೊಂದರ ಪ್ರಕಾರ, ಸಾಕಷ್ಟು ದೇಸಿ ಬ್ರಾಂಡ್ಗಳು ಅತಿ ಹೆಚ್ಚು ಪರಿಸರ ಸ್ನೇಹಿ ಫ್ಯಾಷನ್ವೇರ್ಗಳನ್ನು ಉತ್ಪಾದಿಸುತ್ತವಂತೆ.

ಕಾಟನ್-ಖಾದಿ-ಲೆನಿನ್ ಆಯ್ಕೆ ಸೂಕ್ತ
ಆದಷ್ಟೂ ಕಾಟನ್-ಖಾದಿ-ಲಿನಿನ್ನಂತಹ ಪರಿಸರ ಸ್ನೇಹಿ ಫ್ಯಾಬ್ರಿಕ್ನಿಂದ ಸಿದ್ಧಗೊಂಡ ಔಟ್ಫಿಟ್ಗಳನ್ನು ಖರೀದಿಸಲು ಪ್ರಾಮುಖ್ಯತೆ ನೀಡಿ. ಸಾಂಪ್ರದಾಯಿಕ ವಿಧಾನಗಳಿಂದ ತಯಾರಿಸುವ ವೆಜಿಟೆಬಲ್ ಡೈಯಿಂಗ್ ಔಟ್ಫಿಟ್ಸ್ಗಳು ಪರಿಸರ ಸ್ನೇಹಿಯಾಗಿರುತ್ತವೆ. ಈ ಸೀಸನ್ಗೆ ತಕ್ಕಂತೆ ಟ್ರೆಂಡಿ ಡಿಸೈನ್ಸ್ಗಳಲ್ಲಿ ಲಭ್ಯ. ಅಂತಹವನ್ನು ಖರೀದಿಸಿ.

ಪ್ಲಾಸ್ಟಿಕ್ ಆಕ್ಸೆಸರೀಸ್ನಿಂದ ದೂರಾಗಿ
ಆದಷ್ಟೂ ಪ್ಲಾಸ್ಟಿಕ್ ಕಿವಿಯೊಲೆ, ಇಯರಿಂಗ್ಸ್ ಸೇರಿದಂತೆ ನಾನಾ ಬಗೆಯ ಫ್ಯಾಷೆನಬಲ್ ಪ್ಲಾಸ್ಟಿಕ್ ಆಕ್ಸೆಸರೀಸ್ ಖರೀದಿಸುವುದನ್ನು ನಿಲ್ಲಿಸಿ. ನಿಮ್ಮ ಫ್ಯಾಷನ್ ಲೈಫ್ನಲ್ಲಿ ಒಂದಿಷ್ಟು ಬದಲಾವಣೆ ತನ್ನಿ. ಪರಿಸರ ರಕ್ಷಣೆಗೆ ನಿಮ್ಮದೊಂದು ಚಿಕ್ಕ ಕೊಡುಗೆ ನೀಡಿದಂತಾಗುವುದು ಎನ್ನುತ್ತಾರೆ ಫ್ಯಾಷನಿಸ್ಟಾ ಪ್ರಸಾದ್ ಬಿದ್ದಪ್ಪ.