Aishwarya Shindogi: ವಿಲನ್ ಪಾತ್ರದ ಮೂಲಕ ಮತ್ತೆ ಕಿರುತೆರೆಗೆ ಮರಳಿದ ಐಶ್ವರ್ಯಾ ಸಿಂಧೋಗಿ: ಯಾವ ಧಾರಾವಾಹಿ?
ಈ ಹಿಂದೆ ಹೆಚ್ಚಾಗಿ ವಿಲನ್ ಪಾತ್ರದ ಮೂಲಕ ಕಾಣಿಸಿಕೊಂಡ ಐಶ್ವರ್ಯಾ ಇದೀಗ ಮತ್ತದೆ ಹಳೆಯ ಖದರ್ಗೆ ಮರಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ಐಶ್ವರ್ಯಾ ಪ್ರತ್ಯಕ್ಷರಾಗಿದ್ದಾರೆ.

Aishwarya Shindogi New Serial

ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿ ಐಶ್ವರ್ಯಾ (Aishwarya Sindhogi) ಸಿಂಧೋಗಿ ಇಂದು ಇಡೀ ಕರ್ನಾಟಕದ ಕ್ರಶ್ ಆಗಿದ್ದಾರೆ. ನಾಗಿಣಿ ಸೀರಿಯಲ್ ಮೂಲಕ ಫೇಮಸ್ ಆಗಿ ಬಳಿಕ ಬಿಗ್ ಬಾಸ್ ಮನೆಗೆ ಹೋಗಿದ್ದರು. ದೊಡ್ಮನೆಯಿಂದ ಹೊರಬಂದ ಬಳಿಕ ಬಿಡುವಿನ ಸಮಯದಲ್ಲಿ ಐಶ್ವರ್ಯಾ ಅವರು ತಮ್ಮ ಕುಚುಕು ಸ್ನೇಹಿತರಾದ ಮೋಕ್ಷಿತಾ ಪೈ ಮತ್ತು ಶಿಶಿರ್ ಜೊತೆ ದೇಶ ವಿದೇಶ ಸುತ್ತುತ್ತಿದ್ದಾರೆ. ಇದರ ಜೊತೆಗೆ ಶಿಶಿರ್ ಶಾಸ್ತ್ರೀ ಜೊತೆ ಹೊಸ ಬ್ಯುಸಿನೆಸ್ ಕೂಡ ಶುರುಮಾಡಿದ್ದಾರೆ. ಹೀಗಿರುವಾಗ ಇದೀಗ ಐಶ್ವರ್ಯಾ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಹೌದು, ಒಂದು ಬಿಗ್ ಬಾಸ್ ಸೀಸನ್ ಮುಗಿಯಿತು ಎಂದರೆ ಆ ಸೀಸನ್ನ ಸ್ಪರ್ಧಿಗಳಿಗೆ ಒಂದರ ಹಿಂದೆ ಒಂದರಂತೆ ಆಫರ್ಗಳು ಬರುತ್ತವೆ. ಈಗಾಗಲೇ ಭವ್ಯಾ ಗೌಡ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಧಾರಾವಾಹಿ ಇದೇ ಜೂನ್ 16ರಿಂದ ಝೀ ಕನ್ನಡದಲ್ಲಿ ಶುರುವಾಗಲಿದೆ. ಮತ್ತೊಂದೆಡೆ ತ್ರಿವಿಕ್ರಮ್ ಕಲರ್ಸ್ ಕನ್ನಡದ ಮುದ್ದು ಸೊಸೆ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಉಗ್ರಂ ಮಂಜು ಎರಡೆರಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಮೋಕ್ಷಿತಾ ಪೈ ಕೂಡ ವಿನಯ್ ಗೌಡ ಜೊತೆಗೆ ವೆಬ್ ಸಿರೀಸ್ ಒಂದರಲ್ಲಿ ಬಣ್ಣ ಹಚ್ಚುತ್ತಿದ್ದಾರೆ.
ಹೀಗಿರುವಾಗ ಕಿರುತೆರೆಯಲ್ಲಿ ಈ ಹಿಂದೆ ಹೆಚ್ಚಾಗಿ ವಿಲನ್ ಪಾತ್ರದ ಮೂಲಕ ಕಾಣಿಸಿಕೊಂಡ ಐಶ್ವರ್ಯಾ ಇದೀಗ ಮತ್ತದೆ ಹಳೆಯ ಖದರ್ಗೆ ಮರಳಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ‘ನಿನ್ನ ಜೊತೆ ನನ್ನ ಕಥೆ’ ಧಾರಾವಾಹಿಯಲ್ಲಿ ಐಶ್ವರ್ಯಾ ಪ್ರತ್ಯಕ್ಷರಾಗಿದ್ದಾರೆ. ಈಗಾಗಲೇ ವಾಹಿನಿ ಐಶ್ವರ್ಯಾ ಅವರ ಎಂಟ್ರಿ ಬಗ್ಗೆ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಈ ಧಾರಾವಾಹಿಯಲ್ಲಿ ಅವರು ವಿಲನ್ ಪಾತ್ರದಲ್ಲಿ ನಟಿಸುತ್ತಿರುವುದು ಖಚಿತವಾಗಿದೆ.
‘ಹೆಸರು ಮಾತ್ರ ಸಾಕ್ಷಿ, ಆದರೆ ಮನಸಾಕ್ಷಿ ಇಲ್ಲ. ಮಹಾಭಾರತದಲ್ಲಿ ಮೆರೆಯೋ ದುರಹಂಕಾರಿ ಧುರ್ಯೋದನ ಇಷ್ಟ’ ಎಂದು ಐಶ್ವರ್ಯಾ ಅವರ ಪಾತ್ರ ಪರಿಚಯ ಮಾಡಲಾಗಿದೆ. ಇದು ನೆಗೆಟಿವ್ ಶೇಡ್ ಎಂಬುದು ಸ್ಪಷ್ಟವಾಗಿದೆ. ಕಥಾ ನಾಯಕ-ನಾಯಕಿ ಮಧ್ಯೆ ಸಾಕ್ಷಿ ಬರುತ್ತಾಳೆ. ರಾಣಾ ಪಾತ್ರದಲ್ಲಿ ಸುಂದರ್ ಅವರು ನಟಿಸಿದ್ದಾರೆ. ‘ಅಜಿತ್-ಭೂಮಿಯ ಬಾಳಿಗೆ ಎಂಟ್ರಿ ಕೊಡ್ತಿರೋ ಈ ಸಾಕ್ಷಿ-ರಾಣ ಯಾರು?’ ಎಂಬ ಶೀರ್ಷಿಕೆಯೊಂದಿಗೆ ಸ್ಟಾರ್ ಸುವರ್ಣ ಪ್ರೋಮೋ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗುತ್ತಿದೆ.
Vaishnavi Gowda: ವೈಷ್ಣವಿ ಗೌಡ ಮನೆಯಲ್ಲಿ ಮದುವೆ ಸಂಭ್ರಮ: ಅದ್ಧೂರಿಯಾಗಿ ನಡೆಯಿತು ರಿಸೆಪ್ಷನ್