ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮೀಟಿಂಗ್‍ಗಾಗಿ ಖಾಸಗಿ ಜೆಟ್ ಬಾಡಿಗೆ ಪಡೆದ ದುಬೈ ಮೂಲದ ಸಿಇಒ; ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಿ

ಬಿಪ್ಟಾಪ್‌ನ ಸಿಇಒ ಜೊನಾಥನ್ ಲೋ ಮೀಟಿಂಗ್‍ಗಳಿಗೆ ಸರಿಯಾದ ಸಮಯಕ್ಕೆ ಹೋಗಲು 20 ಮಿಲಿಯನ್ ಡಾಲರ್‌ ಪಾವತಿಸಿ ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಇದು ವೈರಲ್ ಆಗಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದೆ.

ಖಾಸಗಿ ಜೆಟ್‌ ಬಾಡಿಗೆ ಪಡೆದ ಸಿಇಒ; ಕಾರಣ ಕೇಳಿದ್ರೆ ಶಾಕ್‌ ಆಗ್ತೀರಿ

Profile pavithra Jun 26, 2025 8:18 PM

ದುಬೈ ಮೂಲದ ಸಿಇಒ ಒಬ್ಬರು 20 ಮಿಲಿಯನ್ ಡಾಲರ್‌ (1,712,800,000) ಪಾವತಿಸಿ ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆಯುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾರೆ. ಬಿಪ್ಟಾಪ್‌ನ ಸಿಇಒ ಜೊನಾಥನ್ ಲೋ ಖಾಸಗಿ ಜೆಟ್ ಅನ್ನು ಬಾಡಿಗೆಗೆ ಪಡೆದುಕೊಂಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಇದರ ಕುರಿತು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಇದೀಗ ಸಿಕ್ಕಾಪಟ್ಟೆ ವೈರಲ್‌ (Viral News) ಆಗಿದೆ. ನೆಟ್ಟಿಗರು ಈ ಪೋಸ್ಟ್‌ ನೋಡಿ ಶ್ರೀಮಂತಿಕೆಯ ಪ್ರದರ್ಶನ ಎಂದು ಟೀಕಿಸಿದ್ದಾರೆ.

ವೈರಲ್ ಆದ ಪೋಸ್ಟ್‌ನಲ್ಲಿ ಜೊನಾಥನ್ ಲೋ ʼʼ$20 ಮಿಲಿಯನ್‌ಗೆ ಖಾಸಗಿ ಜೆಟ್ ಖರೀದಿಸಿಲ್ಲ. ಬದಲಾಗಿ ಅದನ್ನು ಬಾಡಿಗೆಗೆ ಪಡೆದಿದ್ದೇನೆ. ಆದರೆ ತಾನು ಪ್ರತಿ ಬಾರಿ ಫೋಟೊ ಪೋಸ್ಟ್ ಮಾಡಿದಾಗ, ನೆಟ್ಟಿಗರು ದ್ವೇಷದಿಂದ ಅದನ್ನು ನೋಡುತ್ತಾರೆ. ಅದು ಪ್ರದರ್ಶನ ಎಂದು ಭಾವಿಸುತ್ತಾರೆ. ಆದರೆ ಅದು ಶ್ರೀಮಂತಿಕೆಯ ಪ್ರದರ್ಶನ ಅಲ್ಲ. ಇದು ಪ್ರಗತಿ" ಎಂದು ಬರೆದಿದ್ದಾರೆ.



ಎರಡು ವರ್ಷಗಳ ಹಿಂದೆ ವಿಮಾನ ಪ್ರಯಾಣ ಮತ್ತು ಹೋಟೆಲ್‌ಗಳಿಗಾಗಿ ಹಣ ಹೊಂದಿಸಲು ಹೇಗೆಲ್ಲ ಕಷ್ಟಪಟ್ಟರು ಎಂಬುದನ್ನೂ ವಿವರಿಸಿದ್ದಾರೆ. ಆಗ ಫಸ್ಟ್ ಕ್ಲಾಸ್ ಟ್ರಾವೆಲ್ ಮತ್ತು ಗ್ಲೋಬಲ್ ಬ್ಯುಸಿನೆಸ್ ಟ್ರಿಪ್ಸ್ ಅವರಿಗೆ ಒಂದು ಕನಸಾಗಿತ್ತಂತೆ. ಆದರೆ ಈಗ ಮೀಟಿಂಗ್‍ಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ತಾನು ಖಾಸಗಿ ವಿಮಾನದಲ್ಲಿ ಹೋಗುತ್ತೇನೆ ಎಂದು ಜೊನಾಥನ್ ಲೋ ಹೇಳಿದ್ದಾರೆ.

ʼʼನನ್ನ ಕನಸಾಗಿದ್ದ ಈ ಜೀವನವನ್ನು ಕಷ್ಟಪಟ್ಟು ಕಟ್ಟಿಕೊಂಡೆ. ಈಗ ತಾನು ಅಸಾಧ್ಯವೆನಿಸಿದ ಜೀವನವನ್ನು ನಡೆಸುತ್ತಿದ್ದೇನೆ. ಆದ್ದರಿಂದ ಬೇರೆಯವರು ಮಾತನಾಡಲಿ. ಆದರೆ ನಾವು ಕೆಲಸ ಮಾಡುತ್ತಲೇ ಇರಬೇಕು. ಹೊಸದನ್ನು ಸಾಧಿಸುತ್ತಲೇ ಇರಬೇಕು. ಒಂದು ದಿನ, ನಿಮ್ಮ ಶ್ರಮ ನಿಮ್ಮನ್ನು ಅನುಮಾನಿಸಿದ ಎಲ್ಲರಿಗೂ ಅದೃಷ್ಟದಂತೆ ಕಾಣುತ್ತದೆ" ಎಂದು ಅವರ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ಎಲ್ಲರ ಗಮನ ಸೆಳೆದು ವೈರಲ್ ಆಗಿದೆ.ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ. ಕೆಲವರು ಅವರ ಪ್ರಯತ್ನವನ್ನು ಹೊಗಳಿ ಅದನ್ನು ಸ್ಪೂರ್ತಿದಾಯಕ ಎಂದು ಕರೆದರೆ, ಇನ್ನು ಕೆಲವರು ಮೀಟಿಂಗ್‌ಗಳನ್ನು ಆನ್‍ಲೈನ್‍ನಲ್ಲಿ ನಡೆಸಬಹುದಾದ್ದರಿಂದ ಖಾಸಗಿ ಜೆಟ್‌ನಲ್ಲಿ ಪ್ರಯಾಣಿಸುವ ಅಗತ್ಯವೆನಿದೆ? ಎಂದು ಪ್ರಶ್ನಿಸಿದ್ದಾರೆ.

"ಕಠಿಣ ಪರಿಶ್ರಮವು ಕನಸುಗಳನ್ನು ಹೇಗೆ ನನಸಾಗಿಸುತ್ತದೆ ಎಂಬುದಕ್ಕೆ ಇದು ಸಾಕ್ಷಿ" ಎಂದು ಒಬ್ಬರು ಬರೆದಿದ್ದಾರೆ. "ಪರಿಶ್ರಮ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು ಎಂಬುದಕ್ಕೆ ಇದು ಉದಾಹರಣೆ" ಎಂದು ಮತ್ತೊಬ್ಬರು ಹೇಳಿದ್ದಾರೆ.

"ತಮ್ಮ ಯಶಸ್ಸನ್ನು ಅರ್ಧದಾರಿಯಲ್ಲೇ ಬಿಟ್ಟುಬಂದ ಜನರಿಗೆ ಇದು ಯಾವಾಗಲೂ ಬಡಾಯಿ ಕೊಚ್ಚಿಕೊಳ್ಳುವಂತಿದೆ" ಎಂದು ಬೇರೊಬ್ಬರು ಹೇಳಿದ್ದಾರೆ. "ಕಿಟಕಿಯ ಹೊರಗೆ ಆಕಾಶ ಹೇಗಿದೆ? ನಿಮ್ಮ ಚಾರ್ಟರ್ ಜೆಟ್ ಇಂಧನದಿಂದ ಹಾರುತ್ತಿದೆ ಎಂದು ನಾನು ಭಾವಿಸುತ್ತೇನೆ. ಜೆಟ್ ಇಂಧನವು ಹೈಡ್ರೋಕಾರ್ಬನ್‌ಗಳಿಂದ ಬರುತ್ತದೆ ಎಂದು ನಿಮಗೆ ತಿಳಿದಿದೆಯೇ?" ಎಂದು ಒಬ್ಬ ವ್ಯಕ್ತಿ ಪರಿಸರದ ಹಾನಿಯ ಬಗ್ಗೆ ವ್ಯಂಗ್ಯವಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಹಾಸ್ಟೆಲ್‍ ಕಾರಿಡಾರ್‌ನಲ್ಲಿ ಹರಿದಾಡಿದ ಹಾವು; ಬೆಚ್ಚಿ ಬೀಳಿಸುವ ವಿಡಿಯೊ ಇಲ್ಲಿದೆ

ಜೋನಾಥನ್ ಲೋ 2022ರಲ್ಲಿ ಬಿಪ್ಟಾಪ್‌ನ ಸಿಇಒ ಆಗಿ ನೇಮಕಗೊಂಡರು. ಅವರು ಡಿಜಿಫಾಕ್ಸ್‌ವೆಬ್3 ನ ಸಂಸ್ಥಾಪಕರೂ ಹೌದು ಮತ್ತು ಈ ಹಿಂದೆ ಇತರ ಎರಡು ಕಂಪನಿಗಳನ್ನು ಸಹ-ಸ್ಥಾಪಿಸಿದ್ದಾರೆ.