ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಿಮಾನ ವಿಳಂಬ; ಸಿಬ್ಬಂದಿ, ಪ್ರಯಾಣಿಕನ ಸಂಭಾಷಣೆ ಕೇಳಿ ಬಿದ್ದು ಬಿದ್ದು ನಕ್ಕ ನೆಟ್ಟಿಗರು

ಏರ್ ಇಂಡಿಯಾದ ಸಿಬ್ಬಂದಿಯೊಬ್ಬರು ವಿಮಾನ ವಿಳಂಬದ ಹಿಂದಿನ ಕಾರಣವನ್ನು ಹೇಳಿದಾಗ, ಪ್ರಯಾಣಿಕರೊಬ್ಬನ ಪ್ರತಿಕ್ರಿಯೆ ಹಾಸ್ಯಾಸ್ಪದ ತಿರುವು ಪಡೆದಿದೆ. ಈ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನೆಟ್ಟಿಗರನ್ನು ನಗೆಗಡಲಿನಲ್ಲಿ ತೇಲಿಸಿದೆ. ಈ ವಿಡಿಯೊ ನೀವೂ ನೋಡಿ.

ವಿಮಾನ ಸಿಬ್ಬಂದಿಯ ಉತ್ತರಕ್ಕೆ ಪ್ರಯಾಣಿಕನ ರಿಯಾಕ್ಷನ್‌ ಹೇಗಿತ್ತು ನೋಡಿ!

Profile pavithra Jun 26, 2025 8:10 PM

ಹೊಸದಿಲ್ಲಿ: ಕಳಪೆ ಗುಣಮಟ್ಟದ ಆಹಾರ ನೀಡಿದ್ದಕ್ಕೆ ಇತ್ತೀಚೆಗೆ ಪ್ರಯಾಣಿಕರು ವಿಮಾನ ಸಿಬ್ಬಂದಿ ಜತೆ ಗಲಾಟೆ ಮಾಡಿದ ಪ್ರಕರಣ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈ ಹಿಂದೆ ಹಲವು ಬಾರಿ ವಿಮಾನ (Flight delay) ವಿಳಂಬವಾಗಿದ್ದರಿಂದ ಪ್ರಯಾಣಿಕರು ನಿರಾಶೆಯಿಂದ ಸಿಬ್ಬಂದಿ ಜತೆಗೆ ಜಗಳವಾಡಿದ್ದೂ ಇದೆ. ಆದರೆ ಕೆಲವೊಮ್ಮೆ ನಿರಾಶಾದಾಯಕ ಕ್ಷಣಗಳು ಸಹ ಹಾಸ್ಯಾಸ್ಪದ ತಿರುವು ಪಡೆಯುತ್ತವೆ. ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆದ ವಿಡಿಯೊದಲ್ಲಿ ವಿಮಾನ ವಿಳಂಬವಾಗಲು ಕಾರಣ ಕೇಳಿದ ಪ್ರಯಾಣಿಕರೊಬ್ಬರ ಪ್ರತಿಕ್ರಿಯೆ ಜೋರಾಗಿ ನಗುವಂತೆ ಮಾಡಿದೆ.

ವೈರಲ್ ಆದ ವಿಡಿಯೊದಲ್ಲಿ, ವಿಮಾನ ವಿಳಂಬಕ್ಕೆ ಕಾರಣ ಕೇಳಿರುವುದ ಸೆರೆಯಾಗಿದೆ. ಆಗ ಏರ್ ಇಂಡಿಯಾದ ಸಿಬ್ಬಂದಿ ವಿಳಂಬದ ಹಿಂದಿನ ಕಾರಣವನ್ನು ಹೇಳಿದ್ದಾರೆ "ಈ ವಿಮಾನವನ್ನು ನಿರ್ವಹಿಸಬೇಕಿದ್ದ ಕ್ಯಾಪ್ಟನ್ ಸುಸ್ತಾಗಿದ್ದಾರೆ (ಪೆಹ್ಲೆ ಜೋ ಕ್ಯಾಪ್ಟನ್ ಯೇ ಫ್ಲೈಟ್ ಆಪರೇಟ್ ಕರ್ನೆ ವಾಲೆ ದಿ, ಉನ್ಕೊ ಫಟಿಗ್ ಹೋ ಗಯಾ )" ಎಂದು ಹೇಳಿದ್ದಾರೆ. ಅವರ ಮಾತು ಅರ್ಥವಾಗದ ಪ್ರಯಾಣಿಕನೊಬ್ಬ ʼʼಕ್ಯಾ ಫಟ್ ಗಯಾ? (ಏನು ಸ್ಫೋಟಗೊಂಡಿದೆ?)ʼʼ ಎಂದು ಕೇಳಿದ್ದಾನೆ. ಇದನ್ನು ಕೇಳಿ ಸೋಶಿಯಲ್‌ ಮೀಡಿಯಾ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಇದು 3 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಒಬ್ಬರು, "ನೀವು ಅರ್ಧ ಹಿಂದಿ ಮತ್ತು ಅರ್ಧ ಇಂಗ್ಲಿಷ್‌ನಲ್ಲಿ ಮಾತನಾಡಿದಾಗ ಹೀಗಾಗುತ್ತದೆ" ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು, "ಆ ಮಹಿಳೆಯ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿದೆ " ಎಂದು ಹೇಳಿದ್ದಾರೆ. "ಏರ್ ಇಂಡಿಯಾ ಅವಳಿಗೆ ಬೋನಸ್ ನೀಡಬೇಕು, ಅವಳ ನಗುವನ್ನು ನಿಯಂತ್ರಿಸಿದ್ದಕ್ಕಾಗಿ" ಎಂದು ಒಬ್ಬ ನೆಟ್ಟಿಗರು ಹಾಸ್ಯಮಯವಾಗಿ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ವಿಮಾನ ನಿಲ್ದಾಣದಲ್ಲಿ ಚಿಕ್ಕ ಮಗುವನ್ನು ಎತ್ತಿ ನೆಲಕ್ಕೆ ಬಿಸಾಕಿದ ಕಿರಾತಕ; ಬೆಚ್ಚಿಬೀಳಿಸುವ ವಿಡಿಯೊ ವೈರಲ್!

ಸಿಬ್ಬಂದಿಯ ಮೇಲೆ ಪ್ಯಾಡ್‌ ಎಸೆದ ಮಹಿಳೆ

ನೈರೋಬಿಯ ಜೊಮೊ ಕೆನ್ಯಟ್ಟಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೈಜೀರಿಯಾದ ಪ್ರಯಾಣಿಕಳೊಬ್ಬಳು ವೀಸಾ ಸಮಸ್ಯೆಯಿಂದಾಗಿ ವಿಮಾನ ಹತ್ತಲು ಸಾಧ್ಯವಾಗದ ಕಾರಣ ವಿಮಾನ ನಿಲ್ದಾಣದಲ್ಲಿರುವ ಸಿಬ್ಬಂದಿಯ ಮೇಲೆ ಕೋಪಗೊಂಡು ಆಕೆ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಎಸೆದ ಘಟನೆ ಇತ್ತೀಚೆಗೆ ನಡೆದಿತ್ತು. ಈ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಕೂಡ ಆಗಿತ್ತು. ಇದರಿಂದ ಅಲ್ಲಿನ ಸಿಬ್ಬಂದಿ ಕೋಪಗೊಂಡು ಇಬ್ಬರ ನಡುವೆ ವಾಗ್ವಾದ ತಾರಕಕ್ಕೇರಿತ್ತು. ಮಹಿಳೆಯ ವರ್ತನೆಯಿಂದ ಸಿಬ್ಬಂದಿ ಸಿಕ್ಕಾಪಟ್ಟೆ ಸಿಟ್ಟಾಗಿ ಆಕೆಗೆ ಎಚ್ಚರಿಕೆಯನ್ನು ನೀಡಿದ್ದರು. ವೀಸಾ ಸಮಸ್ಯೆಗಳಿಂದಾಗಿ ಬೋರ್ಡಿಂಗ್ ನಿರಾಕರಿಸಿದ ಪ್ರಯಾಣಿಕರಿಗೆ ವಿಮಾನಯಾನ ವೆಚ್ಚವನ್ನು ಭರಿಸುವುದಿಲ್ಲ ಎಂದು ಕೀನ್ಯಾ ಏರ್‌ವೇಸ್‌ ಸ್ಪಷ್ಟಪಡಿಸಿದೆ. ತಮ್ಮ ಉದ್ಯೋಗಿಗಳ ಜತೆ ಮಹಿಳೆ ಅನುಚಿತ ವರ್ತನೆಯನ್ನು ತೋರಿಸಿದ್ದನ್ನು ಖಂಡಿಸಿದೆ.