EPFO: ಇಪಿಎಫ್ಒ ಖಾತೆಯಿಂದ 5 ಲಕ್ಷ ರೂ. ವರೆಗೆ ಮುಂಗಡ ಹಣ ಪಡೆಯಲು ಅವಕಾಶ
ನೌಕರರ ಭವಿಷ್ಯ ನಿಧಿ ಸಂಸ್ಥೆಯ (employees provident fund) ಇಪಿಎಫ್ಒ ಸದಸ್ಯರು ಇನ್ನು ತುರ್ತು ಸಂದರ್ಭಗಳಲ್ಲಿ ತಮ್ಮ ಇಪಿಎಫ್ಒ ಖಾತೆಯಿಂದ 5 ಲಕ್ಷ ರೂ. ವರೆಗೆ ಮುಂಗಡ ಹಣ ಹಿಂಪಡೆಯಬಹುದು. ಮುಂಗಡ ಹಣ ಹಿಂಪಡೆಯುವ ಮಿತಿಯನ್ನು ಹೆಚ್ಚಿಸಿರುವುದರಿಂದ ಇಪಿಎಫ್ಒ ಸದಸ್ಯರ ಕ್ಲೇಮ್ ಗಳು ಗರಿಷ್ಠ ಮೂರು ದಿನಗಳಲ್ಲಿ ಇತ್ಯರ್ಥಪಡಿಸಲು ಅವಕಾಶ ನೀಡಿದಂತಾಗುತ್ತದೆ.


ನವದೆಹಲಿ: ಭವಿಷ್ಯ ನಿಧಿ ಖಾತೆ ಹೊಂದಿರುವ (employees' provident fund accounts) ನೌಕರರಿಗೆ ಒಂದು ಶುಭ ಸುದ್ದಿ. ಇನ್ನು ಮುಂದೆ ನೌಕರರ ಭವಿಷ್ಯ ನಿಧಿ ಖಾತೆಯಿಂದ ಮುಂಗಡವಾಗಿ 5 ಲಕ್ಷ ರೂ. ವರೆಗೆ ಹಣವನ್ನು ಹಿಂಪಡೆಯಬಹುದಾಗಿದೆ. ಈ ಕುರಿತು ಮಂಗಳವಾರ ಮಾಹಿತಿ ನೀಡಿರುವ ಕೇಂದ್ರ ಕಾರ್ಮಿಕ ಸಚಿವ (Union Labour Minister) ಮನ್ಸುಖ್ ಮಾಂಡವಿಯಾ (Mansukh Mandaviya), ನೌಕರರ ಭವಿಷ್ಯ ನಿಧಿ ಖಾತೆಗಳಿಂದ ಮುಂಗಡ ಹಣ ಹಿಂಪಡೆಯುವ ಮಿತಿಯನ್ನು 1 ಲಕ್ಷ ರೂ. ಗಳಿಂದ 5 ಲಕ್ಷ ರೂ. ಗಳಿಗೆ ಹೆಚ್ಚಿಸುವುದಾಗಿ ಘೋಷಿಸಿದರು.
ನೌಕರರ ಭವಿಷ್ಯ ನಿಧಿ ಸಂಸ್ಥೆಯ ಇಪಿಎಫ್ಒ ಸದಸ್ಯರು ಇನ್ನು ತುರ್ತು ಸಂದರ್ಭಗಳಲ್ಲಿ ತಮ್ಮ ಇಪಿಎಫ್ಒ ಖಾತೆಯಿಂದ 5 ಲಕ್ಷ ರೂ. ವರೆಗೆ ಮುಂಗಡ ಹಣ ಹಿಂಪಡೆಯಬಹುದು. ಮುಂಗಡ ಹಣ ಹಿಂಪಡೆಯುವ ಮಿತಿಯನ್ನು ಹೆಚ್ಚಿಸಿರುವುದರಿಂದ ಇಪಿಎಫ್ಒ ಸದಸ್ಯರ ಕ್ಲೇಮ್ ಗಳು ಗರಿಷ್ಠ ಮೂರು ದಿನಗಳಲ್ಲಿ ಇತ್ಯರ್ಥಪಡಿಸಲು ಅವಕಾಶ ನೀಡಿದಂತಾಗುತ್ತದೆ. ಪ್ರಸ್ತುತ ಮೂರು ದಿನಗಳ ಗಡುವಿನೊಳಗೆ ಇತ್ಯರ್ಥಪಡಿಸಲು ಅವಕಾಶವಿರುವ ಕ್ಲೇಮ್ ಗಳಿಗೆ ಹಣ ಹಿಂಪಡೆಯುವ ಮಿತಿ 1 ಲಕ್ಷ ರೂ. ಆಗಿದೆ ಎಂದು ಅವರು ಹೇಳಿದರು.
ಇಪಿಎಫ್ಒ ಮುಂಗಡ ಹಣ ಪಡೆಯುವ ಮಿತಿಯನ್ನು 1 ಲಕ್ಷ ರೂ. ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿರುವುದರಿಂದ ತುರ್ತು ಸಂದರ್ಭಗಳಲ್ಲಿ ಇಪಿಎಫ್ಒ ಸದಸ್ಯರಿಗೆ ತ್ವರಿತವಾಗಿ ಹಣ ಪಡೆಯುವ ಅವಕಾಶ ಸುಲಭವಾಗುತ್ತದೆ ಎಂದು ಮಾಂಡವಿಯಾ ತಿಳಿಸಿದ್ದಾರೆ.
ದೇಶಾದ್ಯಂತ 7 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಕೋವಿಡ್- 19ರ ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರಿಗೆ ತ್ವರಿತ ನೆರವು ನೀಡಲು ಮೊದಲು ಆನ್ಲೈನ್ನಲ್ಲಿ ಮುಂಗಡ ಹಕ್ಕುಗಳ ಸ್ವಯಂ ಇತ್ಯರ್ಥವನ್ನು ವಿಧಾನವನ್ನು ಪರಿಚಯಿಸಿತ್ತು. ಬಳಿಕ ಇದನ್ನು ಅನಾರೋಗ್ಯ, ಶಿಕ್ಷಣ, ಮದುವೆ ಮತ್ತು ವಸತಿ ಉದ್ದೇಶಗಳಿಗಾಗಿ ವಿಸ್ತರಿಸಲಾಯಿತು.
ಈ ಕ್ಲೈಮ್ಗಳನ್ನುಇಪಿಎಫ್ಒ ಸದಸ್ಯರು ಯಾರ ಸಹಾಯವೂ ಇಲ್ಲದೆ ಆನ್ ಲೈನ್ ಮೂಲಕ ಕ್ಲೇಮ್ ಗಳನ್ನು ಸಲ್ಲಿಸಬಹುದು. ಈ ವ್ಯವಸ್ಥೆಯಿಂದ ಕ್ಲೇಮ್ ಗಳ ಹಕ್ಕುಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ ಹಣವನ್ನು ಮಂಜೂರು ಮಾಡಲಾಗುತ್ತದೆ. 25ನೇ ಹಣಕಾಸು ವರ್ಷದಲ್ಲಿ ಇಪಿಎಫ್ಒ ದಾಖಲೆಯ 2.34 ಕೋಟಿ ಮುಂಗಡ ಕ್ಲೈಮ್ಗಳನ್ನು ಪೂರ್ಣಗೊಳಿಸಿದೆ. 24ನೇ ಹಣಕಾಸು ವರ್ಷದಲ್ಲಿ ಕೇವಲ 89.52 ಲಕ್ಷ ಕ್ಲೈಮ್ಗಳನ್ನು ಮಾತ್ರ ಪರಿಶೀಲನೆ ಮಾಡಲಾಗಿತ್ತು.
ಇದನ್ನೂ ಓದಿ: Heart Failure: ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು 9ನೇ ತರಗತಿ ವಿದ್ಯಾರ್ಥಿನಿ ಸಾವು
2023-24ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2024-25ರಲ್ಲಿ ಮುಂಗಡ ಕ್ಲೈಮ್ಗಳಲ್ಲಿ ಶೇ. 59 ರಷ್ಟು ಸ್ವಯಂ ಮೋಡ್ ಮೂಲಕ ಇತ್ಯರ್ಥಪಡಿಸಲಾಗಿದೆ ಎಂದು ಮಾಂಡವಿಯಾ ಹೇಳಿದರು. 26ನೇ ಹಣಕಾಸು ವರ್ಷದ ಮೊದಲ ಎರಡೂವರೆ ಇಪಿಎಫ್ಒ ಈಗಾಗಲೇ 76.52 ಲಕ್ಷ ಕ್ಲೈಮ್ಗಳನ್ನು ಸ್ವಯಂ ಇತ್ಯರ್ಥಪಡಿಸಿದೆ. ಇದು ಇಲ್ಲಿಯವರೆಗೆ ಇತ್ಯರ್ಥಪಡಿಸಲಾದ ಎಲ್ಲಾ ಮುಂಗಡ ಕ್ಲೈಮ್ಗಳಲ್ಲಿ ಶೇ. 70 ರಷ್ಟಿದೆ. ಈ ಬೆಳವಣಿಗೆಯು ಇಪಿಎಫ್ಒ ತನ್ನ ಸದಸ್ಯರಿಗೆ ಸ್ವಯಂಚಾಲಿತ, ವೇಗವಾಗಿ ಮತ್ತು ಹೆಚ್ಚು ಪರಿಣಾಮಕಾರಿ ಸೇವೆಗಳನ್ನು ತಲುಪಿಸುವತ್ತ ಗಮನಹರಿಸಿರುವುದನ್ನು ಎತ್ತಿ ತೋರಿಸಿದೆ ಎಂದು ಅವರು ತಿಳಿಸಿದ್ದಾರೆ.