ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹಾಲ್‌ನಲ್ಲಿ ಎಸಿ ಇಲ್ಲ ಎಂದು ಮದುವೆ ಕ್ಯಾನ್ಸಲ್‌ ಮಾಡಿದ ವಧು!

ಉತ್ತರ ಪ್ರದೇಶದ ಆಗ್ರಾದಲ್ಲಿ ಆಯೋಜಿಸಿದ್‌ ಮದುವೆಯೊಂದು ಕ್ಷುಲ್ಲಕ ಕಾರಣಕ್ಕೆ ಮುರಿದು ಬಿದ್ದಿದೆ. ವರನ ಕುಟುಂಬವು ಮದುವೆಗೆ ಬುಕ್‍ ಮಾಡಿದ ಸ್ಥಳದಲ್ಲಿ ಎಸಿ ಇಲ್ಲದ ಕಾರಣ ವಧು ವರನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಎಂಥ ಕಾಲ ಬಂತು ನೋಡಿ; ಈ ಕ್ಷುಲ್ಲಕ ಕಾರಣಕ್ಕೆ ಮದುವೆ ಕ್ಯಾನ್ಸಲ್‌

Profile pavithra Jun 11, 2025 5:05 PM

ಲಖನೌ: ಸೋಶಿಯಲ್ ಮೀಡಿಯಾದಲ್ಲಿ ಮದುವೆಗೆ ಸಂಬಂಧಪಟ್ಟ ಹಲವು ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಸಿಂದೂರ ಹಚ್ಚುವಾಗ ವರನ ಕೈ ನಡುಗಿತು ಎಂದು, ವರನು ಮೆರವಣಿಗೆ ಸಮಯದಲ್ಲಿ ಡ್ಯಾನ್ಸ್‌ ಮಾಡಿದ್ದಾನೆ ಎಂದು ಹೀಗೆ ಕ್ಷುಲಕ ಕಾರಣಕ್ಕೆ ಮದುವೆ ಕ್ಯಾನ್ಸಲ್‌ ಆದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇದೀಗ ಉತ್ತರ ಪ್ರದೇಶದ ಆಗ್ರಾದಲ್ಲಿ ವಧು ಒಬ್ಬಳು ವರನ ಕುಟುಂಬವು ಮದುವೆಗೆ ಬುಕ್‍ ಮಾಡಿದ ಹಾಲ್‌ನಲ್ಲಿ ಎಸಿ ಇಲ್ಲದ ಕಾರಣ ಗರಂ ಆಗಿ ಸಂಬಂಧವನ್ನೇ ಮುರದುಕೊಂಡಿದ್ದಾಳೆ. ಇಷ್ಟು ಸಾಲದಕ್ಕೆ ವಧುವಿನ ಕುಟುಂಬವು ವರದಕ್ಷಿಣೆ ದೂರು ದಾಖಲಿಸಿದೆ. ಈ ಸುದ್ದಿ ಈಗ ವೈರಲ್‌ (Viral Video) ಆಗಿದೆ.

ವರದಿಗಳ ಪ್ರಕಾರ, ಮದುವೆ ಹಾಲ್‌ನಲ್ಲಿ ಸಿಕ್ಕಾಪಟ್ಟೆ ಸೆಕೆ ಇದ್ದಿತ್ತಂತೆ. ಅದು ಅಲ್ಲದೆ ಗಾಳಿ ಕೂಡ ಬೀಸದ ಕಾರಣ ವಧುವಿಗೆ ಉಸಿರುಗಟ್ಟಿದ ಅನುಭವವಾಗಿದೆ. ಇದರಿಂದ ಕೋಪಗೊಂಡ ವಧು ವರನ ಕುಟುಂಬವು ಸ್ಥಳದಲ್ಲಿ ಎಸಿ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾಳೆ. ಇದು ವಾಗ್ವಾದಕ್ಕೆ ಕಾರಣವಾಯಿತು. ಈ ಸಮಯದಲ್ಲಿ ವರನ ಕಡೆಯವರು ವಧು ಮತ್ತು ಆಕೆಯ ಕುಟುಂಬವನ್ನು ನಿಂದಿಸಿದ್ದಾರೆ.

ನಂತರ ಪರಿಸ್ಥಿತಿಯು ವಿಕೋಪಕ್ಕೆ ಹೋಗಿ ವಧು ಮದುವೆಯನ್ನು ರದ್ದುಗೊಳಿಸಿ ಮಂಟಪದಿಂದ ಹೊರ ನಡೆದಿದ್ದಾಳೆ. ಈ ಮದುವೆಯು ತನಗೆ ಗೌರವವನ್ನು ತರುವುದಿಲ್ಲ ಮತ್ತು ಅದು ಮುಂದುವರಿದರೆ ತನ್ನ ಜೀವನವು ನರಕವಾಗುತ್ತದೆ ಎಂದು ಹೇಳಿದ್ದಾಳೆ. ವಿಷಯ ಇಲ್ಲಿಗೆ ಮುಗಿಯದೆ, ಕೊನೆಗೆ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ವಧುವಿನ ತಾಯಿ ಕೂಡ ವರನ ಕುಟುಂಬದಿಂದ ಹೆಚ್ಚಿನ ವರದಕ್ಷಿಣೆ ಬೇಡಿಕೆ ಇದೆ ಎಂದು ಆರೋಪಿಸಿ ದೂರು ದಾಖಲಿಸಿದ್ದಾಳೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

ಈ ರೀತಿಯ ಕ್ಷುಲಕ ಕಾರಣಕ್ಕೆ ಮದುವೆ ರದ್ದಾಗಿರುವುದು ಇದೇ ಮೊದಲಲ್ಲ. ಇತ್ತೀಚಿನ ಪ್ರಕರಣವೊಂದರಲ್ಲಿ, ವರದಕ್ಷಿಣೆಯ ರೂಪದಲ್ಲಿ ನೀಡಲಾದ ವಸ್ತುಗಳ ಬಗ್ಗೆ ವರನು ಅವಮಾನಿಸಿದ ನಂತರ ವಧುವಿನ ಕುಟುಂಬವು ಮದುವೆ ಸಮಾರಂಭಕ್ಕೆ ಕೇವಲ 10 ದಿನಗಳ ಮೊದಲು ಮದುವೆಯನ್ನು ರದ್ದುಗೊಳಿಸಿತ್ತು. ವಧುವಿನ ಕುಟುಂಬವು ವರನ ಮನೆಗೆ ವರದಕ್ಷಿಣಿಯ ರೂಪದಲ್ಲಿ ಪೀಠೋಪಕರಣಗಳನ್ನು ಕಳುಹಿಸಿತ್ತು. ಅದನ್ನು ಆತ ತುಂಬಾ ಚೀಪ್ ಕ್ವಾಲಿಟಿ ಎಂದು ಹೀಯಾಳಿಸಿದ್ದಾನೆ. ಇದರಿಂದಾಗಿ ಕುಟುಂಬವು ಮದುವೆಯನ್ನು ರದ್ದುಗೊಳಿಸಿತು. ಮತ್ತು ವಧುವಿನ ಕಡೆಯ ಈ ನಿರ್ಧಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು.

ಈ ಸುದ್ದಿಯನ್ನೂ ಓದಿ:‌Viral Video: ಬರೋಬ್ಬರಿ 10 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಮಗ; ಹೃದಯಸ್ಪರ್ಶಿ ವಿಡಿಯೊ ವೈರಲ್!

ಅಲ್ಲದೇ ಬಿಹಾರದ ಕೈಮೂರ್ ಜಿಲ್ಲೆಯಲ್ಲಿ ವರನು ವಧುವಿನ ಹಣೆಗೆ ಸಿಂದೂರ ಹಚ್ಚುವಾಗ ಅವನ ಕೈ ನಡುಗಿದೆ. ಇದರಿಂದ ಕೋಪಗೊಂಡ ವಧು, ವರನಿಗೆ ಹುಚ್ಚು ಹಿಡಿದಿದೆ ಎಂದು ಹೇಳಿ ಆತನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ಈ ಸುದ್ದಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು.