ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಅಮ್ಮನನ್ನು ಮೊದಲ ಬಾರಿಗೆ ಕಣ್ತುಂಬಿಸಿಕೊಂಡ ಪುಟ್ಟ ಕಂದಮ್ಮನ ರಿಯಾಕ್ಷನ್‌ ಹೇಗಿತ್ತು? ವಿಡಿಯೊ ವೈರಲ್‌

ಆಕ್ಯುಲೋಕ್ಯುಟೇನಿಯಸ್ ಆಲ್ಬಿನಿಸಂ ರೋಗದಿಂದ ಬಳಲುತ್ತಿದ್ದ ಮಗುವೊಂದು ಕನ್ನಡಕ ಧರಿಸಿ ತನ್ನ ತಾಯಿಯನ್ನು ಮೊದಲಬಾರಿ ಕಣ್ತುಂಬಿಸಿಕೊಂಡು ನಕ್ಕ ಅದ್ಭುತ ಕ್ಷಣದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ‌ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.ಇದನ್ನು ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಅಮ್ಮ-ಮಗುವಿನ ಈ ವಿಡಿಯೊ ನೋಡಿ; ನೆಟ್ಟಿಗರು ಫುಲ್‌ ಖುಷ್!

Profile pavithra Jun 19, 2025 3:01 PM

ನವದೆಹಲಿ: ತಾಯಿ ಹಾಗೂ ಮಗುವಿನ ಬಾಂಧವ್ಯ ಅಮೂಲ್ಯವಾದದ್ದು. ತಾಯಿಯ ಹೃದಯ ಬಡಿತ, ಅವಳ ಮೈಯ ವಾಸನೆಯಿಂದಲೇ ಮಗುವೊಂದು ತಾಯಿಯ ಗುರುತು ಹಿಡಿಯುತ್ತದೆ. ರಚ್ಚೆ ಹಿಡಿದು ಅಳುವ ಕಂದಮ್ಮ ತಾಯಿಯ ಮುಖ ನೋಡುತ್ತಲೆ ಮುದ್ದಾದ ನಗು ಚೆಲ್ಲುತ್ತದೆ. ಈಗ ಅಂಥದ್ದೇ ಒಂದು ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.ಹೌದು ಆಕ್ಯುಲೋಕ್ಯುಟೇನಿಯಸ್ ಆಲ್ಬಿನಿಸಂ ರೋಗದಿಂದ ಬಳಲುತ್ತಿದ್ದ ಮಗುವೊಂದು ಕನ್ನಡಕ ಧರಿಸಿ ತನ್ನ ತಾಯಿಯನ್ನು ಮೊದಲಬಾರಿ ಕಣ್ತುಂಬಿಸಿಕೊಂಡಾಗ ಖುಷಿಯಿಂದ ನಕ್ಕ ಅದ್ಭುತ ದೃಶ್ಯವೊಂದು ವೈರಲ್‌(Viral Video) ಆಗಿದೆ. ಈ ವಿಡಿಯೊ ನೋಡಿ ನೆಟ್ಟಿಗರ ಕಣ್ಣಂಚು ಕೂಡ ಒದ್ದೆಯಾಗಿದೆ.

ವೈರಲ್ ಆದ ವಿಡಿಯೊದಲ್ಲಿ ತಾಯಿಯೊಬ್ಬಳು ಮಗುವಿನ ಕಣ್ಣಿಗೆ ಕನ್ನಡಕವನ್ನು ಹಾಕುತ್ತಿರುವ ದೃಶ್ಯವೊಂದು ಸೆರೆಯಾಗಿದೆ.ಅಲ್ಲಿಯವರೆಗೆ ಕಣ್ಣಿನ ದೃಷ್ಟಿಯ ಸಮಸ್ಯೆಯಿಂದ ಬಳಲುತ್ತಿದ್ದ ಮಗು ತಾಯಿ ಕನ್ನಡಕ ಹಾಕಿದಾಗ ಮೊದಲ ಬಾರಿ ತಾಯಿಯನ್ನು ನೋಡಿ ಖುಷಿಯಿಂದ ನಗುಬೀರಿದೆ. ಈ ಹೃದಯಸ್ಪರ್ಶಿ ವಿಡಿಯೊ ನೋಡಿ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಸಾಕಷ್ಟು ಜನ ಕಾಮೆಂಟ್‌ ಮಾಡಿದ್ದಾರೆ. “ಆ ಪುಟ್ಟ ಹುಡುಗ ತಾಯಿಯನ್ನು ನೋಡಿ ತುಂಬಾ ಖುಷಿಪಟ್ಟಿದ್ದಾನೆ. ಅವನಿಗೆ ಒಳ್ಳೆಯದಾಗಲಿ" ಎಂದು ಒಬ್ಬರು ಬರೆದಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ನಡು ರಸ್ತೆಯಲ್ಲಿ ಸ್ಕೂಟಿ ನಿಲ್ಲಿಸಿ ನಿದ್ದೆ ಮಾಡಿದ ಭೂಪ; ವಿಡಿಯೊ ವೈರಲ್

ವಿಡಿಯೊದಲ್ಲಿರುವ ಮಗು ಯಾರು?

ಈ ವಿಡಿಯೊ ಸುಮಾರು ಒಂದು ದಶಕದ ಹಿಂದೆ ವೈರಲ್ ಆಗಿತ್ತು ಮತ್ತು ಇದರಲ್ಲಿವ ಮಗು ಲಿಯೋ ರೆಪ್ಪೊಂಡ್. ಈ ಮಗು ಕಣ್ಣುಗಳು, ಕೂದಲು ಮತ್ತು ಚರ್ಮದ ಬಣ್ಣ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಅಪರೂಪದ ಅನುವಂಶಿಕ ಸ್ಥಿತಿಯಾದ ಆಕ್ಯುಲೋಕ್ಯುಟೇನಿಯಸ್ ಆಲ್ಬಿನಿಸಂ ರೋಗದಿಂದ ಬಳಲುತ್ತಿತಂತೆ.