ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬೋಸಾನ್‌ ಸೆಲ್‌ನಿಂದ ಸುಸ್ಥಿರ ಅಧಿಕ ಕಾರ್ಯಕ್ಷಮತೆಯ ಇಂಧನ ಸಂಗ್ರಹ ಸೌಲಭ್ಯಗಳ ಕಡೆಗೆ ಮಹತ್ವದ ಹೆಜ್ಜೆ

ಬೋಸಾನ್ ಸೆಲ್‌ನ ಉತ್ಪನ್ನಗಳು ಪ್ರಸ್ತುತ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶ ದಾದ್ಯಂತ ಲಭ್ಯವಿವೆ. ಇವು ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳ ಮೂಲಕ ವಿತರಿಸಲ್ಪಡುತ್ತವೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬೋಸಾನ್‌ನ ಸ್ವಂತ ನೇರ-ಗ್ರಾಹಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲೂ ಕೂಡ ಲಭ್ಯವಿದೆ

ಬೋಸಾನ್‌ ಸೆಲ್‌ನಿಂದ ಇಂಧನ ಸಂಗ್ರಹ ಸೌಲಭ್ಯಗಳ ಕಡೆಗೆ ಮಹತ್ವದ ಹೆಜ್ಜೆ

Profile Ashok Nayak Jun 4, 2025 11:12 PM

ದೇಶೀಯ ಲಿಥಿಯಂ ಸೆಲ್ ಉತ್ಪಾದನಾ ಕಂಪನಿ ಬೋಸಾನ್ ಸೆಲ್, ತನ್ನ 18350 B-30A ಮತ್ತು 21700 B-50A ಎಂಬ ಎರಡು ಹೊಸ ಮಾದರಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಉನ್ನತ ಕಾರ್ಯಕ್ಷಮತೆಯ, ಕಡಿಮೆ ವೆಚ್ಚದ ಪವರ್ ಸೆಲ್‌ಗಳು ರಾಷ್ಟ್ರವ್ಯಾಪಿ ಲಭ್ಯವಿರುತ್ತವೆ. ಇದು ಭಾರತವನ್ನು ಬಹು ಕೈಗಾರಿಕೆಗಳಿಗೆ 'ಆತ್ಮನಿರ್ಭರ' ತಾಣವನ್ನಾಗಿ ಮಾಡುವ ಪ್ರಧಾನ ಮಂತ್ರಿಯ ಕರೆಯನ್ನು ಬೆಂಬಲಿಸುತ್ತದೆ. ಇದರಿಂದಾಗಿ ಇಂಧನ ಸ್ವಾವಲಂಬನೆ ಮತ್ತು ನವೀಕರಿಸಬಹುದಾದ ಇಂಧನದ ಸುಸ್ಥಿರ ಬಳಕೆಯತ್ತ ಭಾರತದ ಪ್ರಯಾಣವು ಇನ್ನು ಕನಸಿನ ಸಂಗತಿಯಾಗಿ ಉಳಿದಿಲ್ಲ. ಬೋಸಾನ್ ಸೆಲ್ ಈಗ ದೇಶದ ವೇಗವಾಗಿ ವಿಕಸನಗೊಳ್ಳುತ್ತಿರುವ ಲಿಥಿಯಂ ಉದ್ಯಮದಲ್ಲಿ ಮುಂಚೂಣಿಯಲ್ಲಿದೆ. ಅಷ್ಟೇ ಅಲ್ಲ, ಜಗತ್ತು ನಮ್ಮ ಕಡೆ ನೋಡುವ ನೋಟಕ್ಕೆ ಹೊಸ ವ್ಯಾಖ್ಯಾನ ವನ್ನು ನೀಡಿದೆ.

ಬೋಸಾನ್ ಸೆಲ್‌ನ ಉತ್ಪನ್ನಗಳು ಪ್ರಸ್ತುತ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಆಂಧ್ರ ಪ್ರದೇಶದಾದ್ಯಂತ ಲಭ್ಯವಿವೆ. ಇವು ಎಲೆಕ್ಟ್ರಾನಿಕ್ಸ್ ಚಿಲ್ಲರೆ ವ್ಯಾಪಾರಿಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಸ್ಥಳೀಯ ಕಿರಾಣಿ ಅಂಗಡಿಗಳ ಮೂಲಕ ವಿತರಿಸಲ್ಪಡುತ್ತವೆ. ಅಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಬೋಸಾನ್‌ನ ಸ್ವಂತ ನೇರ-ಗ್ರಾಹಕ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲೂ ಕೂಡ ಲಭ್ಯವಿದೆ.

ಇದನ್ನೂ ಓದಿ: Bangalore palace grounds: ಮೈಸೂರು ರಾಜಮನೆತನಕ್ಕೆ ಟಿಡಿಆರ್:‌ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ರಿಲೀಫ್‌

2030 ರ ವೇಳೆಗೆ ಭಾರತದ ಲಿಥಿಯಂ-ಐಯಾನ್ ಬ್ಯಾಟರಿ ಮಾರುಕಟ್ಟೆ 9.56 ಬಿಲಿಯನ್ ಡಾಲರ್‌ಗೆ ಏರುವ ನಿರೀಕ್ಷೆಯಿದೆ. ಬೋಸಾನ್ ಸೆಲ್ ಪ್ರಮುಖ ಕೈಗಾರಿಕೆಗಳಲ್ಲಿ, ವಿಶೇಷವಾಗಿ ಪರಿಸರ ಸ್ನೇಹಿ ಸಂಚಾರ, ಗೃಹ ಬಳಕೆಯ ಎಲೆಕ್ಟ್ರಾನಿಕ್ಸ್, ನವೀಕರಿಸಬಹುದಾದ ಇಂಧನ ಮತ್ತು ವೇಗವಾಗಿ ವಿಸ್ತರಿಸುತ್ತಿರುವ ಡ್ರೋನ್ ಮಾರುಕಟ್ಟೆಯಲ್ಲಿ ನಿರ್ಣಾಯಕ ಉತ್ಪನ್ನವಾಗಲಿದೆ. FAME II, PLI ಯೋಜನೆ ಮತ್ತು ಡ್ರೋನ್ ಶಕ್ತಿ ಕಾರ್ಯಕ್ರಮದಂತಹ ದೂರದೃಷ್ಟಿಯ ಸರ್ಕಾರಿ ಉಪಕ್ರಮ ಗಳಿಂದ ಬೆಂಬಲವನ್ನು ಪಡೆದಿರುವ, ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಸ್ಥಳೀಯವಾಗಿ ಲಭ್ಯ ವಿರುವ ಬ್ಯಾಟರಿ ತಂತ್ರಜ್ಞಾನಕ್ಕೆ ಬೇಡಿಕೆ ಸಾರ್ವಕಾಲಿಕವಾಗಿ ಹೆಚ್ಚಳವಾಗುತ್ತಿದೆ.

"ಬೋಸಾನ್ ಕೇವಲ ಒಂದು ಸಾಮಾನ್ಯ ಸೆಲ್ ತಯಾರಕ ಕಂಪನಿಯಲ್ಲ. ನವೀಕರಿಸಬಹುದಾದ ಇಂಧನದ ಮೇಲೆ ಅವಲಂಬಿತವಾಗಿರುವ ಭವಿಷ್ಯದ ಕೈಗಾರಿಕೆಗಳ ಅವಶ್ಯಕತೆಗಳನ್ನು ಪೂರೈಸಲು ಸುಸ್ಥಿರ ಪರಿಹಾರಗಳನ್ನು ಒದಗಿಸುವಲ್ಲಿ ಭಾರತದ ತಾಂತ್ರಿಕ ಪ್ರಾವೀಣ್ಯತೆಯ ಸಂಕೇತವಾಗಿದೆ" ಎಂದು ಬೋಸಾನ್ ಸೆಲ್‌ನ ಸಿಇಒ ಗುರು ಪುಂಘವನ್ ಹೇಳಿದರು. "ನಾವು ಆಮದು ಮಾಡುವಿಕೆ ಪ್ರಮಾಣವನ್ನು ಬದಲಾಯಿಸುತ್ತಿರುವುದು ಮಾತ್ರವಲ್ಲದೆ, ಪ್ರತಿ ಭಾರತೀಯ ಮನೆ, ಉದ್ಯಮ ಮತ್ತು ಆವಿಷ್ಕಾರದ ಭವಿಷ್ಯಕ್ಕೆ ಶಕ್ತಿ ತುಂಬಬಲ್ಲ ಸ್ಮಾರ್ಟ್, ಸ್ವಚ್ಛ ಮತ್ತು ಇನ್ನಷ್ಟು ವಿಸ್ತರಿಸಬಹುದಾದ ಇಂಧನ ಪರಿಹಾರಗಳನ್ನು ನಿರ್ಮಿಸುತ್ತಿದ್ದೇವೆ.

ಎಕಾನಮಿ, ಅಡ್ವಾನ್ಸ್ಡ್ ಮತ್ತು ಎಕ್ಸ್‌ಟ್ರೀಮ್ ಎಂಬ ಮೂರು ಮಾದರಿಗಳಲ್ಲಿ ತಯಾರಾಗುವ ಈ ಸೆಲ್‌ಗಳು ಬ್ಯಾಟರಿ ತಯಾರಕರ ಬಹು-ಆಯಾಮದ ಅವಶ್ಯಕತೆಗಳನ್ನು ಪೂರೈಸಬಲ್ಲವು. ಹಾಗೆ ಯೇ, ಸಣ್ಣ ಪ್ರಮಾಣದಲ್ಲಿ ಅವಶ್ಯಕತೆ ಇರುವ ವ್ಯಕ್ತಿಗಳಿಗೂ ಸಹಾಯಕವಾಗಬಲ್ಲವು. ಗುಣಮಟ್ಟ ವೇ ಬೋಸಾನ್‌ಗೆ ಮುಖ್ಯವಾಗಿದ್ದು, ಸುರಕ್ಷತೆ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ಖಾತರಿ ಪಡಿಸಲು ಕಠಿಣ ಬಹು-ಹಂತದ ಪರೀಕ್ಷೆಗೆ ಪ್ರತಿ ಲಿಥಿಯಂ ಸೆಲ್ ಒಳಗಾಗುತ್ತದೆ. ಈ ಬ್ಯಾಟರಿ ಗಳನ್ನು ವಿವಿಧ ರೀತಿಯ ಅಪ್ಲಿಕೇಶನ್‌ಗಳಿಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದೆ. ಇದು ಎಲೆಕ್ಟ್ರಿಕ್ ವಾಹನಗಳು, ಡ್ರೋನ್‌ಗಳು, ಸೌರಶಕ್ತಿ ವ್ಯವಸ್ಥೆಗಳು, ಪವರ್ ಟೂಲ್‌ಗಳು ಮತ್ತು ಹೆಚ್ಚಿ ನವುಗಳನ್ನು ಒಳಗೊಂಡಂತೆ ವೈವಿಧ್ಯಮಯ ಅಪ್ಲಿಕೇಶನ್‌ಗಳಿಗೆ ಶಕ್ತಿ ನೀಡುತ್ತದೆ."

ಭಾರತದ ಡ್ರೋನ್ ಕ್ಷೇತ್ರದ ಬೆಳವಣಿಗೆಯನ್ನು ಬಳಸಿಕೊಳ್ಳುವ ಈ ಸೂಕ್ತ ಸಮಯದಲ್ಲಿ ಬೋಸಾನ್ ಸೆಲ್‌ ಸಂಸ್ಥೆಯ ವಿಸ್ತರಣೆಯನ್ನು ಮಾಡಲಾಗಿದೆ. ಕೃಷಿ, ರಕ್ಷಣಾ ವಲಯ, ಲಾಜಿಸ್ಟಿಕ್ಸ್ ಮತ್ತು ಮೂಲಸೌಕರ್ಯಗಳಲ್ಲಿನ ವಿವಿಧ ಬಳಕೆಗಳಿಗೆ ಇದು ಪೂರಕವಾಗಿದೆ. ಭಾರತೀಯ ಡ್ರೋನ್ ಮಾರುಕಟ್ಟೆಯು 2030 ರ ವೇಳೆಗೆ 13 ಬಿಲಿಯನ್ ಡಾಲರ್ ತಲುಪುವ ನಿರೀಕ್ಷೆಯಿದೆ. ಇದು ಹಗುರವಾದ, ಹೆಚ್ಚು ಸಾಂದ್ರತೆಯುಳ್ಳ ಮತ್ತು ಬಾಳಿಕೆ ಬರುವ ಲಿಥಿಯಂ ಬ್ಯಾಟರಿ ಪರಿಹಾರಗಳಿಗೆ ಬೇಡಿಕೆಯನ್ನು ಹೆಚ್ಚಳ ಮಾಡುತ್ತದೆ. ಸ್ಥಳೀಯ ಡ್ರೋನ್ ಉತ್ಪಾದನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಕಾರ್ಯಾಚರಣೆಯ ಅಳವಡಿಕೆಗೆ ಸರ್ಕಾರದ ಬೆಂಬಲ ಹೆಚ್ಚಾಗುವುದರೊಂದಿಗೆ, ಬೋಸಾನ್‌ನ ಉನ್ನತ-ಕಾರ್ಯಕ್ಷಮತೆಯ ಸೆಲ್‌ಗಳು ಈ ಮಾನವರಹಿತ ವೈಮಾನಿಕ ಕ್ರಾಂತಿಯ ಬೆನ್ನೆಲುಬಾಗಲು ವಿಶಿಷ್ಟವಾಗಿ ಸ್ಥಾನ ಪಡೆದಿವೆ.

ಸುಸ್ಥಿರ ಪರಿಸರ-ಪ್ರಜ್ಞೆಯ ಪ್ರಕ್ರಿಯೆಯಲ್ಲಿ ತಯಾರಿಸಲ್ಪಟ್ಟ ಪ್ರತಿಯೊಂದೂ ಸೆಲ್, ಕಂಪನಿಯ ಸುಸ್ಥಿರತೆ, ಸುರಕ್ಷತೆ ಮತ್ತು ವ್ಯಾಪ್ತಿಯ ವಿಷಯದಲ್ಲಿ ಇರುವ ಅಚಲ ಬದ್ಧತೆಯನ್ನು ಸೂಚಿಸುತ್ತದೆ. ಇದು ವಿಶ್ವಾಸಾರ್ಹ ಮತ್ತು ಜವಾಬ್ದಾರಿಯುತ ಉತ್ಪನ್ನಗಳನ್ನು ಖಚಿತಪಡಿಸುತ್ತದೆ. ಆಮದು ಮಾಡಿದ ಪರ್ಯಾಯಗಳಿಗೆ ಹೋಲಿಸಿದರೆ ಬೋಸಾನ್ ಕಡಿಮೆ ಬೆಲೆಗೆ ಸೆಲ್‌ಗಳನ್ನು ನೀಡುತ್ತದೆ. ಕೈಗೆಟುಕುವಿಕೆಯ ಜೊತೆಗೆ, ಕಂಪನಿಯು ವಿತರಕರಿಗೆ ವೇಗದ ಟರ್ನ ಅರೌಂಡ್ ಸಮಯ, ಕಡಿಮೆ ಡೆಲಿವರಿ ಸಮಯ ಮತ್ತು ಕಡಿಮೆ ಕನಿಷ್ಠ ಆರ್ಡರ್ ಪ್ರಮಾಣಗಳನ್ನು (MOQ) ಒದಗಿಸುತ್ತದೆ. ಇದು ಕಾರ್ಯಾಚರಣೆಯಲ್ಲಿ ಹೊಂದಾಣಿಕೆ ಮತ್ತು ಪೂರೈಕೆ ಸರಪಳಿ ದಕ್ಷತೆಯನ್ನು ಹೆಚ್ಚಿಸುತ್ತದೆ.

ಮುಂದಿನ ದಿನಗಳಲ್ಲಿ, ಬೋಸಾನ್ ಸೆಲ್ 2025 ರ ಅಂತ್ಯದ ವೇಳೆಗೆ ಆಧುನಿಕ ವ್ಯಾಪಾರ ಮತ್ತು ಸಂಘಟಿತ ಚಿಲ್ಲರೆ ಮಾರಾಟದ ಮೂಲಕ ಭಾರತದ ಎಲ್ಲ ಕಡೆ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ. ಡ್ರೋನ್ ತಂತ್ರಜ್ಞಾನ, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಶುದ್ಧ ಇಂಧನ ಏಕೀಕರಣದಂತಹ ಕಾರ್ಯತಂತ್ರದ ವಲಯಗಳಲ್ಲಿ ತನ್ನ ಭಾಗವಹಿಸುವಿಕೆಯನ್ನು ವಿಸ್ತರಿಸಲು ಕಂಪನಿಯು ಯೋಜಿಸಿದೆ.

ತನ್ನ ಅತ್ಯಾಧುನಿಕ ತಂತ್ರಜ್ಞಾನ, ಸ್ಥಳೀಯ ಉತ್ಪಾದನೆಗೆ ಬದ್ಧತೆ ಮತ್ತು ಉದ್ಯಮ-ಕೇಂದ್ರಿತ ವಿಧಾನದೊಂದಿಗೆ, ಬೋಸಾನ್ ಸೆಲ್ ಇಂದು ಭಾರತಕ್ಕೆ ಶಕ್ತಿ ತುಂಬುವುದಲ್ಲದೆ, ದೇಶದ ಇಂಧನ ಭವಿಷ್ಯವನ್ನು ರೂಪಿಸುತ್ತಿದೆ.