POCSO Case: ರಾಜ್ಯದಲ್ಲಿ ಪ್ರತಿದಿನ 10 ಪೋಕ್ಸೋ ಕೇಸ್ ದಾಖಲು!
2024ರಲ್ಲಿ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 8,233 ದಾಖಲಾಗಿದ್ದವು ಎಂದು ಪೊಲೀಸ್ ಇಲಾಖೆ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದು 2023ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. 2023 ರಲ್ಲಿ 7,854 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ.


ಬೆಂಗಳೂರು: ರಾಜ್ಯದಲ್ಲಿ ಮಕ್ಕಳ (children) ಮೇಲಿನ ದೌರ್ಜನ್ಯ (Physical abuse) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿವೆ. ಅದರಲ್ಲೂ ಪ್ರತಿ ದಿನಕ್ಕೆ 10 ಪೋಕ್ಸೋ ಪ್ರಕರಣಗಳು (pocso case) ದಾಖಲಾಗುತ್ತಿವೆ ಎಂಬ ಕಳವಳಕಾರಿ ಅಂಶ ಹೊರಬಿದ್ದಿದೆ. ಪೊಲೀಸ್ ಅಂಕಿ ಅಂಶಗಳ ಪ್ರಕಾರ, ರಾಜ್ಯದಲ್ಲಿ ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ಪ್ರತಿ ದಿನ 10 ಪೋಕ್ಸೋ ಪ್ರಕರಣಗಳು ದಾಖಲಾಗುತ್ತಿವೆ ಎನ್ನುವ ಆತಂಕಕಾರಿ ಅಂಶ ಬಯಲಾಗಿದೆ. ಪೋಕ್ಸೋ ಕಾಯ್ದೆಯಡಿ ದಾಖಲಾದ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಇರುವುದು ಕೂಡ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ ಎನ್ನಲಾಗುತ್ತಿದೆ.
ಕರ್ನಾಟಕದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳು ಕಳವಳಕಾರಿಯಾಗಿ ಹೆಚ್ಚುತ್ತಿರುವುದು ತಿಳಿದುಬಂದಿದೆ. ಬಾಲ್ಯವಿವಾಹ ಮತ್ತು ಬಾಲಕಾರ್ಮಿಕ ಪ್ರಕರಣಗಳಲ್ಲೂ ಏರಿಕೆಯಾಗಿದೆ.
2024ರಲ್ಲಿ, ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು 8,233 ದಾಖಲಾಗಿದ್ದವು ಎಂದು ಪೊಲೀಸ್ ಇಲಾಖೆ ಅಂಕಿಅಂಶಗಳಿಂದ ತಿಳಿದುಬಂದಿದೆ. ಇದು 2023ರಲ್ಲಿ ದಾಖಲಾಗಿದ್ದ ಪ್ರಕರಣಗಳಿಗೆ ಹೋಲಿಸಿದರೆ ಹೆಚ್ಚಾಗಿತ್ತು. 2023 ರಲ್ಲಿ 7,854 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆಯಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಪೋಕ್ಸೋ ಪ್ರಕರಣಗಳ ಸಂಖ್ಯೆಯಲ್ಲಿ ಶೇ 38.89 ರಷ್ಟು ಏರಿಕೆಯಾಗಿದೆ.
ಪೊಲೀಸ್ ಅಂಕಿಅಂಶಗಳ ಪ್ರಕಾರ, 2023 ಕ್ಕೆ ಹೋಲಿಸಿದರೆ 2024 ರಲ್ಲಿ ರಾಜ್ಯದಲ್ಲಿ ಮಕ್ಕಳ ಮೇಲಿನ ಅಪರಾಧಗಳು ಶೇ 7 ಕ್ಕಿಂತಲೂ ಹೆಚ್ಚಾಗಿವೆ. ಜತೆಗೆ, ವರ್ಷದ ಮೊದಲ ಎರಡು ತಿಂಗಳಲ್ಲಿ 23 ಬಾಲ್ಯವಿವಾಹ ಪ್ರಕರಣಗಳು ಮತ್ತು 16 ಬಾಲಕಾರ್ಮಿಕ ಪ್ರಕರಣಗಳು ವರದಿಯಾಗಿವೆ.
ನಾಲ್ಕು ವರ್ಷಗಳಲ್ಲಿ (2021-2024) ದಾಖಲಾದ ಒಟ್ಟು 13,990 ಪ್ರಕರಣಗಳಲ್ಲಿ ಕೇವಲ 353 ರಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿವೆ ಎಂದು ಪೊಲೀಸ್ ಇಲಾಖೆ ಅಂಕಿಅಂಶಗಳನ್ನು ಉಲ್ಲೇಖಿಸಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಆತಂಕಕಾರಿ ಸಂಗತಿಯೆಂದರೆ, ಒಟ್ಟು ಪ್ರಕರಣಗಳಲ್ಲಿ ಶೇ 26 ಕ್ಕಿಂತ ಹೆಚ್ಚಿನವುಗಳಲ್ಲಿ ಆರೋಪಿಗಳು (3,662) ಖುಲಾಸೆಯಾಗಿದ್ದಾರೆ.
ಇದನ್ನೂ ಓದಿ: UP Professor: ವಿದ್ಯಾರ್ಥಿಗಳ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದ ನೀಚ ಪ್ರೊಫೆಸರ್ ಅರೆಸ್ಟ್