ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಸ್ಕಿಟಲ್ಸ್ ಬಳಸಿ ತಯಾರಿಸಿದ ಆಮ್ಲೆಟ್‌; ನೀವು ಕೂಡ ಟ್ರೈ ಮಾಡಿ ನೋಡಿ!

ರಸ್ತೆ ಬದಿಯ ವ್ಯಾಪಾರಿಯೊಬ್ಬ ಕೋಕೋಕೋಲಾ, ಸ್ಕಿಟಲ್ಸ್ (ಕ್ಯಾಂಡಿ) ಸೇರಿಸಿ ವಿಚಿತ್ರವಾದ ಆಮ್ಲೆಟ್ ರೆಸಿಪಿಯನ್ನು ಮಾಡಿದ್ದಾನೆ. ವಿದೇಶಿ ಇನ್‍ಸ್ಟಾಗ್ರಾಮರ್ ಒಬ್ಬ ಸೋಶಿಯಲ್ ಮೀಡಿಯಾದಲ್ಲಿ ಈ ಆಮ್ಲೆಟ್ ವಿಡಿಯೊವನ್ನು ಹಂಚಿಕೊಂಡಿದ್ದಾನೆ. ಈ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಹೀಗೂ ಆಮ್ಲೆಟ್‌ ಮಾಡ್ತಾರಾ? ನಿಮ್ಮನು ಅಚ್ಚರಿಎ ದೂಡುವ ವಿಡಿಯೊ ಇಲ್ಲಿದೆ

Profile pavithra Jun 14, 2025 9:18 PM

ಈಗ ಸೋಶಿಯಲ್‌ ಮೀಡಿಯಾ ತೆರೆದರೆ ಒಂದಷ್ಟು ಡ್ಯಾನ್ಸ್‌, ಸ್ಟಂಟ್‌ ವಿಡಿಯೊಗಳ ಜತೆಗೆ ಚಿತ್ರವಿಚಿತ್ರವಾದ ಖಾದ್ಯಗಳ ತುಣುಕುಗಳು ಕಣ್ಮುಂದೆ ಬರುತ್ತವೆ. ಲೈಕ್ಸ್‌ ಹಾಗೂ ಕಾಮೆಂಟ್‌ಗಾಗಿ ವಿಭಿನ್ನ ರೀತಿಯಲ್ಲಿ ಅಡುಗೆ ಮಾಡಿದ ವಿಡಿಯೊಗಳು ಸೋಶಿಯಲ್‌ ಮೀಡಿಯಾದಲ್ಲಿ ಆಗಾಗ ವೈರಲ್‌ ಆಗುತ್ತಿರುತ್ತವೆ. ಇತ್ತೀಚೆಗೆ ಚಿಪ್ಸ್‌ ಪ್ಯಾಕೆಟ್‌ನೊಳಗೆ ಮೊಟ್ಟೆ ಹಾಕಿ ಆಮ್ಲೆಟ್‌ ಮಾಡಿದ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ರಸ್ತೆ ಬದಿಯ ವ್ಯಾಪಾರಿಯೊಬ್ಬ ತಯಾರಿಸಿದ ʼಸ್ಕಿಟಲ್ಸ್‌ ಆಮ್ಲೆಟ್‌ʼ ರೆಸಿಪಿಯನ್ನು ವಿದೇಶಿ ಇನ್‍ಸ್ಟಾಗ್ರಾಮರ್ ಒಬ್ಬ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.

ವೈರಲ್ ವಿಡಿಯೊದಲ್ಲಿ ರಸ್ತೆ ಬದಿಯ ವ್ಯಾಪಾರಿಯೊಬ್ಬ ತವಾಗೆ ಕೋಕೋಕೋಲಾ ಹಾಕಿ ಅದಕ್ಕೆ 4 ಮೊಟ್ಟೆಗಳನ್ನು ಒಡೆದು ಹಾಕಿದ್ದಾನೆ. ನಂತರ ಅದಕ್ಕೆ ನಿಂಬೆ ರಸ ಹಿಂಡಿ ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿದ್ದಾನೆ. ನಂತರ ಅದಕ್ಕೆ ಮತ್ತಷ್ಟು ಕೋಕೋಕೋಲಾ ಸೇರಿಸಿ ಸ್ಕಿಟಲ್‌ಲೆಟ್ (ಕ್ಯಾಂಡಿ) ಹಾಕಿದ್ದಾನೆ. ನಂತರ ಕತ್ತರಿಸಿದ ಮೆಣಸಿನ ಕಾಯಿಯನ್ನು ಹಾಕಿ ಮಿಕ್ಸ್ ಮಾಡಿ ಕೊನೆಯಲ್ಲಿ ಲೇಸ್ ಚಿಪ್ಸ್ ಮಿಕ್ಸ್ ಮಾಡಿರುವುದು ಸೆರೆಯಾಗಿದೆ. ಇನ್ನು ಎಲೆಗಳಿಂದ ತಯಾರಿಸಿದ ಪ್ಲೇಟ್‌ಗೆ ಹಾಕಿ ಅದನ್ನು ವಿದೇಶಿ ಇನ್‍ಸ್ಟಾಗ್ರಾಮರ್‌ಗೆ ನೀಡಿದ್ದಾನೆ.

ವಿಡಿಯೊ ಇಲ್ಲಿದೆ ನೋಡಿ...

ಈ ಆಮ್ಲೆಟ್‌ನ ಬೆಲೆ 129 ರೂ. ಅಂತೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಜನರು ಇದಕ್ಕೆ ಕಾಮೆಂಟ್‌ ಮಾಡಿದ್ದಾರೆ. "ಒಳ್ಳೆಯ ಊಟ, ಕೊನೆಯ ಊಟ” ಎಂದು ಒಬ್ಬರು ಬರೆದಿದ್ದಾರೆ. "ನೀವು ಅದನ್ನು ತಿನ್ನುವ ಧೈರ್ಯಶಾಲಿ ವ್ಯಕ್ತಿ" ಎಂದು ಇನ್ನೊಬ್ಬ ವ್ಯಕ್ತಿ ಹೇಳಿದ್ದಾರೆ. ಮತ್ತೊಬ್ಬರು "ಈ ತರಹದ ವಿಡಿಯೊದಲ್ಲಿ ರುಚಿ ಹೇಗಿದೆ ಎಂದು ತಿಳಿಸುವುದೇ ಇಲ್ಲ" ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ:‌Viral Video: ಅಬ್ಬಾ...! ಈತ ನಿಜಕ್ಕೂ ಆಪದ್ಬಾಂಧವ- ಮುಳುಗುತ್ತಿದ್ದ ವ್ಯಕ್ತಿಯ ರಕ್ಷಣೆಗೆ ಈತ ಮಾಡಿದ್ದೇನು ಗೊತ್ತಾ?
ಈ ಹಿಂದೆ ಇದೇ ಬೀದಿ ಬದಿಯ ವ್ಯಾಪಾರಿ ಕೋಲ್ಡ್ ಡ್ರಿಂಕ್ಸ್‌ನಲ್ಲಿ ಮೊಟ್ಟೆಗಳನ್ನು ಬೇಯಿಸಿದ್ದ ವಿಡಿಯೊ ವೈರಲ್ ಆಗಿತ್ತು. ವಿಡಿಯೊದಲ್ಲಿ ಬೀದಿ ವ್ಯಾಪಾರಿ ಪ್ಯಾನ್‌ಗೆ ಸ್ಟಿಂಗ್‌ ಬಾಟಲಿಯನ್ನು ಸುರಿದು ನಂತರ ಅದಕ್ಕೆ 8 ಮೊಟ್ಟೆಗಳನ್ನು ಹಾಕಿದ್ದಾನೆ. ಅದು ಅರ್ಧ ಬೆಂದಾಗ ಅದಕ್ಕೆ ಕತ್ತರಿಸಿದ ಟೊಮೆಟೊ, ಮೆಣಸಿನಕಾಯಿ, ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೇಯಿಸಿದ್ದಾನೆ. ಈ ವಿಡಿಯೊ 44 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿತ್ತು.