Pak PM: "ಖಂಡನೆ ಬದಲು ಕಾಂಡೋಮ್" ಪಾಕ್ ಪ್ರಧಾನಿ ಟ್ವೀಟ್‌ನಲ್ಲಿ ಮಹಾ ಯಡವಟ್ಟು; ನೆಟ್ಟಿಗರಿಂದ ಫುಲ್ ಟ್ರೋಲ್
ಇಸ್ರೇಲ್ ಶುಕ್ರವಾರ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ, ದೇಶದ ಪರಮಾಣು ಮೂಲಸೌಕರ್ಯವನ್ನು ಹೊಡೆದುರುಳಿಸಿ, ಹಿರಿಯ ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳನ್ನು ಹತ್ಯೆ ಮಾಡಿದೆ. ಉಭಯ ದೇಶಗಳ ನಡುವಿನ ವೈಷಮ್ಯ ತಾರಕ್ಕೇರಿದೆ. ಇದೀಗ ಪಾಕ್ ಪ್ರಧಾನಿ ಮಾಡಿದ ಟ್ವೀಟ್ ವೈರಲ್ ಆಗುತ್ತಿದೆ.


ಇಸ್ಲಾಮಾಬಾದ್: ಇಸ್ರೇಲ್ ಶುಕ್ರವಾರ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸಿ, (Pak PM) ದೇಶದ ಪರಮಾಣು ಮೂಲಸೌಕರ್ಯವನ್ನು ಹೊಡೆದುರುಳಿಸಿ, ಹಿರಿಯ ಮಿಲಿಟರಿ ಕಮಾಂಡರ್‌ಗಳು ಮತ್ತು ವಿಜ್ಞಾನಿಗಳನ್ನು ಹತ್ಯೆ ಮಾಡಿದೆ. ಉಭಯ ದೇಶಗಳ ನಡುವಿನ ವೈಷಮ್ಯ ತಾರಕ್ಕೇರಿದೆ. ಇರಾನ್ ಮೇಲೆ ಇಸ್ರೇಲ್ ನಡೆಸಿದ ದಾಳಿಯನ್ನು ಖಂಡಿಸಲು ಹೋಗಿ ಪಾಕಿಸ್ತಾನ ಜಗತ್ತಿನ ಮುಂದೆ ಮತ್ತೆ ಹಾಸ್ಯಕ್ಕೀಡಾಗಿದೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರ ಹೇಳಿಕೆಯು ಹಾಸ್ಯಮಯವಾಗಿ ಪರಿಣಮಿಸಿತು.
ಇಸ್ರೇಲ್-ಇರಾನ್ ಸಂಘರ್ಷದ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ "ಐ ಕಾನ್ಡೆಮ್ (ನಾನು ಖಂಡಿಸುತ್ತೇನೆ) ಎಂದು ಬರೆಯಲು ಹೋಗಿ ಐ ಕಾಂಡೋಮ್ ಎಂದು ಬರೆದಿದ್ದಾರೆ. ಇರಾನಿನ ಪರಮಾಣು ಮತ್ತು ಮಿಲಿಟರಿ ತಾಣಗಳ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯನ್ನು ಖಂಡಿಸುವ ಉದ್ದೇಶದಿಂದ ಈ ಪೋಸ್ಟ್ ಮಾಡಲಾಗಿದ್ದು, ಇದು ವ್ಯಾಪಕ ಆನ್‌ಲೈನ್ ಚರ್ಚೆ ಮತ್ತು ಮೀಮ್‌ಗಳನ್ನು ಹುಟ್ಟುಹಾಕಿದೆ.
ಪಾಕಿಸ್ತಾನದ ಈ ಟ್ವೀಟ್ ನೋಡಿದ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ನಾನು ಇಸ್ರೇಲ್‌ನಿಂದ ಇರಾನ್ ಮೇಲೆ ನಡೆದ ದಾಳಿಯನ್ನು ಕಾಂಡೋಮ್ ಮಾಡುತ್ತೇನೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಮಾಡಿ ವೈರಲ್ ಆದ ಕೂಡಲೇ ಅದನ್ನು ಸರಿ ಮಾಡಲಾಗಿದೆ. ನೆಟ್ಟಿಗರು ಅದರ ಸ್ಕ್ರೀನ್‌ಶಾಟ್‌ನೊಂದಿಗೆ ಪೋಸ್ಟ್ ಮಾಡಿದ್ದಾರೆ. ಬಳಕೆದಾರರು "ಇದನ್ನೂ ನಾನು ಕಾಂಡೋಮ್ ಮಾಡಿದ್ದೇನೆ" ಎಂದು ಪಾಕ್ ಪ್ರಧಾನಿಯನ್ನು ಟ್ಯಾಗ್ ಮಾಡಿದ್ದಾರೆ. ಪೋಸ್ಟ್‌ನ ನಿಖರತೆಯನ್ನು ಇನ್ನೂ ಪರಿಶೀಲಿಸಲಾಗಿಲ್ಲ, ವೈರಲ್ ಆಗುತ್ತಿರುವ ಸ್ಕ್ರೀನ್‌ಶಾಟ್ ಹೊರತುಪಡಿಸಿ, ಯಾವುದೇ ವಿಶ್ವಾಸಾರ್ಹ ಮೂಲವು ಅದರ ಅಸ್ತಿತ್ವವನ್ನು ದೃಢೀಕರಿಸುತ್ತಿಲ್ಲ. ರೇಡಿಯೋ ಪಾಕಿಸ್ತಾನ ಮತ್ತು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ಪ್ರಕಾರ, ಜೂನ್ 13, 2025 ರ ಅಧಿಕೃತ ಹೇಳಿಕೆಗಳು ಇರಾನ್‌ಗೆ ಸಂಪೂರ್ಣ ಬೆಂಬಲವಾಗಿ "ಖಂಡಿಸಿ" ಎಂಬ ಪದವನ್ನು ಬಳಸಿವೆ.
ಈ ಸುದ್ದಿಯನ್ನೂ ಓದಿ: Israel-Iran Conflict: ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಉಡೀಸ್; ಇರಾನ್-ಇಸ್ರೇಲ್ ಡೆಡ್ಲಿ ಅಟ್ಯಾಕ್ ವಿಡಿಯೊ ವೈರಲ್
ಇರಾನ್ ಇಸ್ರೇಲ್ ಸಂಘರ್ಷ
ಇಸ್ರೇಲ್-ಇರಾನ್ (Israel Iran War) ನಡುವಿನ ಸೇನಾ ಸಂಘರ್ಷ ಮುಂದುವರಿದಿದೆ. ಶನಿವಾರ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ಪರಿಣಾಮ ನೆರೆಯ ಕತಾರ್‌ನೊಂದಿಗೆ ಹಂಚಿಕೊಂಡಿದ್ದ ವಿಶ್ವದ ಅತಿ ದೊಡ್ಡ ಅನಿಲ ಕ್ಷೇತ್ರ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ. ಉಭಯ ದೇಶಗಳು ಭಾರಿ ಪ್ರಮಾಣದ ಕ್ಷಿಪಣಿ, ಡ್ರೋನ್ ಬಳಸಿಕೊಂಡು ದಾಳಿ-ಪ್ರತಿದಾಳಿ ನಡೆಸುತ್ತಿವೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಪ್ರಕಾರ ವಾಯುದಾಳಿಯಲ್ಲಿ ಎರಡೂ ಕಡೆ 105 ಮಂದಿ ಮೃತಪಟ್ಟಿದ್ದು, 350 ಜನ ಗಾಯಗೊಂಡಿದ್ದಾರೆ.