Star Fashion: ವೈಬ್ರೆಂಟ್ ನೀಲಿ ಕಲರ್ನ ಹಾಲ್ಟರ್ ನೆಕ್ ಫ್ಯಾಷನ್ವೇರ್ನಲ್ಲಿ ನಟಿ ಸುಕೃತಾ ವಾಗ್ಲೆ ನಯಾ ಲುಕ್!
Actress Sukrutha Wagle: ಸ್ಯಾಂಡಲ್ವುಡ್ ನಟಿ ಸುಕೃತಾ ವಾಗ್ಲೆ ವೈಬ್ರೆಂಟ್ ಹಾಲ್ಟರ್ ನೆಕ್ಲೈನ್ ಇರುವಂತಹ ಹೈ ಸ್ಲಿಟ್ ಡ್ರೆಸ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಈ ಉಡುಪಿನೊಂದಿಗೆ ಅವರ ಮಿನಿಮಲ್ ಮೇಕಪ್ ಹಾಗೂ ಆಕ್ಸೆಸರೀಸ್ ಅವರನ್ನು ಮತ್ತಷ್ಟು ಸುಂದರವಾಗಿಸಿದೆ. ಈ ಸ್ಟೈಲಿಂಗ್ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಚಿತ್ರಗಳು: ಸುಕೃತಾ ವಾಗ್ಲೆ, ಸ್ಯಾಂಡಲ್ವುಡ್ ನಟಿ


ವೈಬ್ರೆಂಟ್ ಬ್ಲ್ಯೂ ಡ್ರೆಸ್ನಲ್ಲಿ ನಟಿ ಸುಕೃತಾ ವಾಗ್ಲೆ ಸಖತ್ತಾಗಿ ಕಾಣಿಸಿಕೊಂಡಿದ್ದಾರೆ.

ಸುಕೃತಾ ವಾಗ್ಲೆ ವೈಬ್ರೆಂಟ್ ಕಲರ್ ಡ್ರೆಸ್
ಹೌದು, ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸ್ಯಾಂಡಲ್ವುಡ್ ನಟಿ ಸುಕೃತಾ ವಾಗ್ಲೆ, ಆಗಾಗ್ಗೆ ಫ್ಯಾಷನ್ ಶೂಟ್ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಅಲ್ಲದೇ, ಹೆಚ್ಚು ಜ್ಯುವೆಲರಿಗಳನ್ನು ಧರಿಸಿದೇ ಸಿಂಪಲ್ ಮೇಕಪ್ನಲ್ಲೆ ಫ್ಯಾಷನ್ ಪ್ರಿಯರನ್ನು ಸೆಳೆಯುತ್ತಾರೆ. ಇದಕ್ಕೆ ಪೂರಕ ಎಂಬಂತೆ, ವೈಬ್ರೆಂಟ್ ಹಾಲ್ಟರ್ ನೆಕ್ಲೈನ್ ಇರುವಂತಹ ಹೈ ಸ್ಲಿಟ್ ಡ್ರೆಸ್ನಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಂಡು ಫಾಲೋವರ್ಸ್ ಮೆಚ್ಚುಗೆ ಗಳಿಸಿದ್ದಾರೆ.

ಸುಕೃತಾ ವಾಗ್ಲೆಯವರ ಸಿಂಪಲ್ ಮೇಕೋವರ್
ಯಾವುದೇ ಫೋಟೋ ಶೂಟ್ ಆಗಲಿ ಅಥವಾ ಫ್ಯಾಷನ್ವೇರ್ ಧರಿಸಿದರೂ ಸುಕೃತಾ ಮಾತ್ರ ತೀರಾ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ. ಅದೇನೆಂದರೇ ಜ್ಯುವೆಲರಿಗಳನ್ನು ಹೆಚ್ಚಾಗಿ ಧರಿಸುವುದಿಲ್ಲ! ಜತೆಗೆ ಅತಿಯಾದ ಮೇಕಪ್ ಮಾಡುವುದಿಲ್ಲ! ಅದು ಟ್ರೆಡಿಷನಲ್ ಡ್ರೆಸ್ ಆಗಬಹುದು, ಸೀರೆಯಾಗಬಹುದು ಇಲ್ಲವೇ, ವೆಸ್ಟರ್ನ್ ಔಟ್ಫಿಟ್ ಆಗಬಹುದು. ಇದು ಅವರ ಸಿಂಪಲ್ ಮೇಕೋವರನ್ನು ಹೈಲೈಟ್ ಮಾಡುತ್ತದೆ ನ್ಯಾಚುರಲ್ ಲುಕ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ನ್ಯಾಚುರಲ್ ಬ್ಯೂಟಿ
ಅವರ ಪ್ರತಿ ಔಟ್ಫಿಟ್ನಲ್ಲೂ ಅವರ ಈ ಸಿಂಪಲ್ ಮಿನಿಮಲ್ ಮೇಕಪ್ ಹಾಗೂ ಮಿನಿಮಲ್ ಆಕ್ಸೆಸರೀಸ್ ಅವರಿಗೆ ಕಂಪ್ಲೀಟ್ ನ್ಯಾಚುರಲ್ ಲುಕ್ ನೀಡುತ್ತದೆ ಎನ್ನುತ್ತಾರೆ ಫ್ಯಾಷನ್ ವಿಮರ್ಶಕರು.

ಸುಕೃತಾ ವಾಗ್ಲೆ ಬ್ಲ್ಯೂ ಕಲರ್ ಫ್ಯಾಷನ್ವೇರ್
ಇನ್ನು, ಸುಕೃತಾ ಅವರಿಗೆ ವೈಟ್ ಕಲರ್ ಹೊರತುಪಡಿಸಿದರೇ ಆದಷ್ಟೂ ನೀಲಿ ವರ್ಣದ ಉಡುಪುಗಳು ಇಷ್ಟವಂತೆ. ಅದನ್ನು ಖುದ್ದು ಅವರೇ ತಿಳಿಸಿದ್ದಾರೆ. ನಾನಂತೂ ಮುಖಕ್ಕೆ ಯಾವುದೇ ಕೆಮಿಕಲ್ ಬಳಸುವುದಿಲ್ಲ! ಏನಿದ್ದರೂ ಅದು ನ್ಯಾಚುರಲ್ ಕೇರ್ ಎನ್ನುತ್ತಾರೆ.