S Jaishankar: ಐತಿಹಾಸಿಕ ನಡೆ; ತಾಲಿಬಾನ್ ಸಚಿವನ ಜೊತೆ ಜೈ ಶಂಕರ್ ಮಹತ್ವದ ಮಾತುಕತೆ-ಪಾಕ್‌ಗೆ ಢವ ಢವ
Taliban Foreign Minister: ವಿದೇಶಾಂಗ ಸಚಿವ ಎಸ್. ಜೈಶಂಕರ್ ಗುರುವಾರ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಅಧಿಕೃತ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ಆಡಳಿತಕ್ಕೆ ಭಾರತದ ಸಚಿವ ಮಟ್ಟದಿಂದ ಬಂದಿರುವ ಮೊದಲ ಕರೆ ಇದಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಖಂಡಿಸಿದ ಕೆಲವು ದಿನಗಳ ನಂತರ ಜೈಶಂಕರ್ ಅವರು ಮುತ್ತಕಿ ಅವರಿಗೆ ಕರೆ ಮಾಡಿದ್ದಾರೆ.


ಇಸ್ಲಮಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟಿನ ನಡುವೆಯೇ ತಾಲಿಬಾನ್(Taliban) ನಾಯಕರ ಜೊತೆ ಮಹತ್ವ ಮಾತುಕತೆಗೆ ಮುಂದಾಗುವ ಮೂಲಕ ಭಾರತ ಐತಿಹಾಸಿಕ ಹೆಜ್ಜೆಯನ್ನಿಟ್ಟಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್(S Jaishankar) ಗುರುವಾರ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರೊಂದಿಗೆ ಅಧಿಕೃತ ದೂರವಾಣಿ ಕರೆ ಮೂಲಕ ಮಾತನಾಡಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ನೇತೃತ್ವದ ಆಡಳಿತಕ್ಕೆ ಭಾರತದ ಸಚಿವ ಮಟ್ಟದಿಂದ ಬಂದಿರುವ ಮೊದಲ ಕರೆ ಇದಾಗಿದೆ. ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯನ್ನು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತ ಖಂಡಿಸಿದ ಕೆಲವು ದಿನಗಳ ನಂತರ ಜೈಶಂಕರ್ ಅವರು ಮುತ್ತಕಿ ಅವರಿಗೆ ಕರೆ ಮಾಡಿದ್ದಾರೆ.
ಇನ್ನುಈ ಮಹತ್ವದ ಮಾತುಕತೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿದೇಶಾಂಗ ಸಚಿವಾಲಯ ಪೋಸ್ಟ್‌ವೊಂದನ್ನು ಮಾಡಿದ್ದು, ಆಫ್ಘನ್ ಜನರೊಂದಿಗಿನ ನಮ್ಮ (ಭಾರತದ) ಸಾಂಪ್ರದಾಯಿಕ ಸ್ನೇಹ ಮತ್ತು ಅವರ ಅಭಿವೃದ್ಧಿ ಅಗತ್ಯಗಳಿಗೆ ನಿರಂತರ ಬೆಂಬಲದ ಕುರಿತು ಮಾತಕತೆ ನಡೆಸಲಾಗಿದೆ. ಇನ್ನು ಉಭಯ ರಾಷ್ಟ್ರಗಳು ಪರಸ್ಪರ ಸಹಕಾರವನ್ನು ಮುಂದಕ್ಕೆ ಕೊಂಡೊಯ್ಯುವ ಮಾರ್ಗಗಳು ಮತ್ತು ವಿಧಾನಗಳ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಉಗ್ರರ ಅಟ್ಟಹಾಸಕ್ಕೆ ತಾಲಿಬಾನ್ ಕಾರಣ ಎಂದು ಹೇಳುವ ಮೂಲಕ ತನ್ನನ್ನು ತಾನು ಅಮಾಯಕ ಎಂದು ಬಿಂಬಿಸಿಕೊಳ್ಳುವ ಪಾಕಿಸ್ತಾನ ಸಂಚಿಗೆ ಮುತಾಕಿ ಖಂಡನೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಇರಾನಿನ ಚಬಹಾರ್ ಬಂದರಿನ ಮಹತ್ವ
ತಾಲಿಬಾನ್‌ನ ಸಂವಹನ ನಿರ್ದೇಶಕ ಹಫೀಜ್ ಜಿಯಾ ಅಹ್ಮದ್ ಅವರ ಪ್ರಕಾರ, ಮಹತ್ವದ ಮಾತುಕತೆ ವೇಳೆ ಮುತ್ತಕಿ ಅವರು ಡಾ. ಜೈಶಂಕರ್ ಅವರನ್ನು ಆಫ್ಘನ್ ಪ್ರಜೆಗಳಿಗೆ, ವಿಶೇಷವಾಗಿ ವೈದ್ಯಕೀಯ ಆರೈಕೆಯನ್ನು ಬಯಸುವವರಿಗೆ ಹೆಚ್ಚಿನ ವೀಸಾಗಳನ್ನು ಒದಗಿಸುವಂತೆ ಕೇಳಿಕೊಂಡರು. ದ್ವಿಪಕ್ಷೀಯ ವ್ಯಾಪಾರ, ಭಾರತೀಯ ಜೈಲುಗಳಲ್ಲಿರುವ ಆಫ್ಘನ್ ಕೈದಿಗಳ ಬಿಡುಗಡೆ ಮತ್ತು ವಾಪಸಾತಿಗೂ ಕೋರಲಾಯಿತು. ಇನ್ನು ಇದೇ ವೇಳೆ ಇರಾನ್‌ನ ಚಬಹಾರ್ ಬಂದರಿನ ಅಭಿವೃದ್ಧಿಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಅವರು ಉಲ್ಲೇಖಿಸಿದರು. ಹಿರಿಯ ತಾಲಿಬಾನ್ ಅಧಿಕಾರಿ ಪಾಷ್ಟೋ ಭಾಷೆಯಲ್ಲಿ ಸರಣಿ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಇಬ್ಬರು ಸಚಿವರ ನಡೆದಿರುವ ಚರ್ಚೆಗಳ ಬಗ್ಗೆ ಸವಿಸ್ತಾರವಾದ ಪಟ್ಟಿ ಮಾಡಿದೆ.
ಈ ಸುದ್ದಿಯನ್ನೂ ಓದಿ: Taliban foreign minister: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಆದ ಕೆಲವೇ ದಿನಗಳಲ್ಲಿ ತಾಲಿಬಾನ್ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತೀಯ ರಾಯಭಾರಿ!
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳು ಎಲ್ಲಾ ವ್ಯಾಪಾರ ಸಂಬಂಧಗಳನ್ನು ಸಂಪೂರ್ಣವಾಗಿ ಕೊನೆಗೊಳಿಸಿ ತಮ್ಮ ಗಡಿ ಪೋಸ್ಟ್‌ಗಳನ್ನು ಮುಚ್ಚಿರುವ ಸಮಯದಲ್ಲಿ ಚಾಬಹಾರ್ ಬಂದರಿನ ಕುರಿತಾದ ಚರ್ಚೆಯು ಮಹತ್ವವನ್ನು ಪಡೆದುಕೊಂಡಿದೆ. ಭೂಸುತ್ತುವರಿದ ದೇಶವಾಗಿರುವುದರಿಂದ, ಭಾರತವನ್ನು ತಲುಪಲು ಪಾಕಿಸ್ತಾನದ ಮೂಲಕ ಭೂಮಾರ್ಗಗಳನ್ನು ಅವಲಂಬಿಸಿರುವುದರಿಂದ ಅಫ್ಘಾನಿಸ್ತಾನವು ಪರಿಣಾಮವನ್ನು ಅನುಭವಿಸುತ್ತದೆ. ಭಾರತ ಮತ್ತು ಅಫ್ಘಾನಿಸ್ತಾನ ಕೂಡ ಭೂ ಗಡಿಯನ್ನು ಹಂಚಿಕೊಂಡಿವೆ, ಆದರೆ ಅದು 1947 ರಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆಯಿಂದ ಸಂಪರ್ಕ ಕಡಿತಗೊಂಡಿದೆ. ವ್ಯಾಪಾರಕ್ಕೆ ಇರುವ ಇನ್ನೊಂದು ಆಯ್ಕೆ ಇರಾನ್‌ನ ಚಾಬಹಾರ್ ಬಂದರು ಮಾತ್ರ.